ಕಲಬುರಗಿ: ಗುಣಮಟ್ಟದ ಕಂಪ್ಯೂಟರ ಶಿಕ್ಷಣ ನೀಡುವಲ್ಲಿ ತನ್ನದೆಯಾದ ಛಾಪು ಮೂಡಿಸಿರುವ ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ನಲ್ಲಿರುವ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ ‘ಗಣಕಯಂತ್ರ ಶಿಕ್ಷಣ ಪರೀಕ್ಷೆ’ಯಲ್ಲಿ ಶೇ.97.23 ಉತ್ತಮ ಫಲಿತಾಂಶ ಪಡೆದಿದೆ ಎಂದು ತರಬೇತಿ ಕೇಂದ್ರದ ಅಧ್ಯಕ್ಷ ಅಸ್ಲಾಂ ಶೇಖ್ ಹೇಳಿದರು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಳೆದ ಅಗಷ್ಟನಲ್ಲಿ ಪರೀಕ್ಷೆ ನಡೆಸಲಾಗಿತ್ತು, ಪರೀಕ್ಷೆಗೆ ಹಾಜರಾದ 181 ವಿದ್ಯಾರ್ಥಿಗಳಲ್ಲಿ 176 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾವೇರಿ ಬಿ. ಹೌದೆ (ಶೇ.91),ರಹಿಮಾ ಬೇಗಂ (ಶೇ.91), ಶಾಂತಲಾ ಎಸ್.(ಶೇ.91), ಭುವನೇಶ್ವರಿ ಪಿ.(ಶೇ.88.5),ಶ್ರೀಶೈಲ ಬಿ.(ಶೇ.88.5), ಶಾಂತಕುಮಾರ ಆರ್.(ಶೇ.88.5, ಸ್ವಾತಿ ಆರ್.(ಶೇ.88.5), ದೀಕ್ಷಾ ಎನ್. (ಶೇ.88), ಪೂಜಾ ಆರ್. (ಶೇ.87), ಭೂಮಿಕಾ ಎಸ್. (ಶೇ.86.5), ಶಿಲ್ಪಾ ಆರ್.(ಶೇ.86.5), ಬೀಬಿ ಹಜ್ರಾ (ಶೇ.86), ಗಾಯತ್ರಿ (ಶೇ.86), ಲಕ್ಷಿö್ಮÃಕಾಂತ (ಶೇ.86), ಮುಸ್ಕಾನ್ (ಶೇ.86), ಸುಜ್ಞಾನಮ್ಮ (ಶೇ.86), ನಂದಿನಿ (ಶೇ.85.5), ಬಸಮ್ಮ (ಶೇ.85), ನಂದಿನಿ ಆರ್ (ಶೇ.85), ಗುರುನಾಥ ಎಸ್. (ಶೇ.85) ಹೀಗೆ ಒಟ್ಟು 20 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿರುವುದು ವಿಶೇಷತೆಯಾಗಿದೆ. ಜೊತೆಗೆ 75 ವಿದ್ಯಾರ್ಥಿಗಳು ಪ್ರಥಮ, 63 ವಿದ್ಯಾರ್ಥಿಗಳು ದ್ವಿತೀಯ ಮತ್ತು 18 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದರು.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ, ಸದಸ್ಯ ಶಿವಯೋಗೆಪ್ಪಾ ಎಸ್.ಬಿರಾದಾರ, ಸಮಾಜ ಸೇವಕ ಹಾಗೂ ನ್ಯಾಯವಾದಿ ಹಣಮಂತರಾಯಎಸ್.ಅಟ್ಟೂರ್, ಸಂಸ್ಥೆಯ ಶಿಕ್ಷಕಿಯರಾದ ಪ್ರಿಯಾಂಕಾ ಉಜಳಂಬಿ, ನಿಲೊಫರ್ ಶೇಖ್, ಪೂಜಾ ಹೂಗಾರ, ಪೂಜಾ ಜಮಾದಾರ, ಐಶ್ವರ್ಯ ಬಿರಾದಾರ, ಸಿಬ್ಬಂದಿ ಸೋಹೆಲ್ ಶೇಖ್ ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ