ಚಿತ್ತಾಪುರ: ಪಟ್ಟಣದ ಕಡಬೂರ್ ಬಡಾವಣೆಯ ಸಿದ್ಧ ವೀರೇಶ್ವರ ಪೆದ್ದು ಮಠದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ಯ ಜ್ಞಾನಾಮೃತ ಪ್ರವಚನ ಕಾರ್ಯಕ್ರಮ ನಾಳೆ ಶುಕ್ರವಾರದಿಂದ ಆರಂಭಗೊಳ್ಳಲಿದೆ ಎಂದು ಸಿದ್ಧ ವೀರೇಶ್ವರ ಪೆದ್ದು ಮಠದ ಸೇವಕ ಶರಣು ಉಡಗಿ ತಿಳಿಸಿದ್ದಾರೆ.
15 ವರ್ಷಗಳಿಂದ ರೇಣುಕಾಚಾರ್ಯರ ಜಯಂತಿ ಅಂಗವಾಗಿ ದಿಗ್ಗಾಂವ ಪಂಚಗ್ರಹ ಹಿರೇಮಠದ ಸಿದ್ಧವೀರ ಶಿವಾಚಾರ್ಯರ ನೇತೃತ್ವದಲ್ಲಿ ಭಕ್ತರ ಇಚ್ಛೆಯಂತೆ ಪ್ರವಚನ ನಡೆಯುತ್ತದೆ. ಮಾ.7 ರಿಂದ 12ರವರೆಗೆ ಪ್ರತಿದಿನ ಪ್ರವಚನ ನಡೆಯಲಿದೆ. ಸನ್ನತಿಯ ಸಂಸ್ಥಾನ ಹಿರೇಮಠದ ಜಗದೀಶ ಶಾಸ್ತ್ರಿಗಳು ಪ್ರವಚನ ನೀಡುವರು. ಹೊನಗುಂಟಾದ ಸಂಗಯ್ಯ ಸ್ವಾಮಿ ಸಂಗೀತ ಸೇವೆ ಸಲ್ಲಿಸುವರು, ಕಲ್ಕಂಬ ಶರಣಯ್ಯ ಸ್ವಾಮಿಯವರು ತಬಲಾ ಸಾಥ್ ನೀಡುವವರು.
ಮಾರ್ಚ್ 12ರಂದು ಕರ್ತು ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ರೇಣುಕಾಚಾರ್ಯರ ತೊಟ್ಟಿಲು ಉತ್ಸವ ಹಾಗೂ ಪ್ರವಚನ ಮಹಾಮಂಗಳ ನಡೆಯುವುದು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪೆದ್ದು ಮಠದ ಭಕ್ತ ಮಲ್ಲಿಕಾರ್ಜುನ್ತಿ ಪ್ಪಣ್ಣ ಪೂಜಾರಿ ಮನವಿ ಮಾಡಿದ್ದಾರೆ.