‘ಶಕ್ತಿ’ಗೆ ಶಕ್ತಿ ತುಂಬಿದ ಮಹಿಳೆಯರು: ಬಸ್‌ಗೆ ಪೂಜೆ, ಸಂಭ್ರಮಾಚರಣೆ

ಪಟ್ಟಣ

ಚಿತ್ತಾಪುರ: ರಾಜ್ಯದಲ್ಲಿ ‘ಶಕ್ತಿ’ ಯೋಜನೆಯಡಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರು 500 ಕೋಟಿ ಸಲ ಸಂಚರಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಭ್ರಮಾಚರಣೆ ಮಾಡಲಾಯಿತು.

ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆಯಡಿ ಎರಡು ವರ್ಷಗಳ ಅವಧಿಯಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಪ್ರಯಾಣದ 500 ಕೋಟಿಗೂ ಹೆಚ್ಚು ಮಹಿಳೆಯರು ಉಚಿತ ಪ್ರಯಾಣ ಮಾಡಿರುವುದರಿಂದ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್’ಗೆ ತಳಿರು ತೋರಣಗಳಿಂದ ಸಿಂಗರಿಸಿ, ಪೂಜೆ ಸಲ್ಲಿಸಿ ಸಿಹಿ
ಹಂಚುವ ಮೂಲಕ ಕಾಂಗ್ರೆಸ್ ಮುಖಂಡರು ಸಂಭ್ರಮಾಚರಣೆ ಆಚರಿಸಿದರು.

ಬಸ್’ಗಳಿಗೆ ತಳಿರು ತೋರಣಗಳ ಜೊತೆಗೆ ಬಣ್ಣ ಬಣ್ಣದ ಬಲೂನಗಳನ್ನು ಕಟ್ಟಿ ಮದುಮಗಳಂತೆ ಸಿಂಗರಿಸಿ ಕಾಯಿ ಕರ್ಪುರದ ಮೂಲಕ ಪೂಜೆ ಮಾಡಿ ಸಾರ್ವಜನಿಕರೆಲ್ಲರಿಗೂ ಸಿಹಿ ಹಂಚುವ ಮೂಲಕ ಅದ್ದೂರಿಯಾಗಿ ಶಕ್ತಿ ಯೋಜನೆಯ ಎರಡು ವರ್ಷಗಳಲ್ಲಿ 500 ಕೋಟಿ ಪ್ರಯಾಣದ ಸಂಭ್ರಮವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮುತ್ತು ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಅಕ್ರಂಪಾಷಾ, ಬಸ್ ಘಟಕದ ವ್ಯವಸ್ಥಾಪಕ ಗೊಲ್ಲಾಳಪ್ಪ ಬಿರಾದಾರ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಕ್ತರ್ ಪಟೇಲ್, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸಪ್ಪಾ ಪಾಟೀಲ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ಪುರಸಭೆ ಮಾಜಿ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್, ಎಸ್’ಸಿ- ಎಸ್’ಟಿ ಅಧ್ಯಕ್ಷ ಸಾಬಣ್ಣ ಕಾಶಿ, ಯುವ ಕಾಂಗ್ರೆಸ್ ಅಧ್ಯಕ್ಷ ದೇವು ಯಾಬಾಳ್, ಮಾಜಿ ಅಧ್ಯಕ್ಷ ಸಂಜಯ ಬುಳಕರ್, ಎನ್ಎಸ್’ಯುಐ ಅಧ್ಯಕ್ಷ ಭೀಮು ಹೋಳಿಕಟ್ಟಿ, ಪಂಚ್ ಗ್ಯಾರಂಟಿ ಸದಸ್ಯ ಶರಣು ಡೋಣಗಾಂವ, ಮುಖಂಡರಾ ಚಂದ್ರಶೇಖರ ಕಾಶಿ, ರಸೂಲ್ ಮುಸ್ತಫಾ, ಶ್ರೀನಿವಾಸರೆಡ್ಡಿ ಪಾಲಪ್, ಸಂತೋಷ ಚೌದರಿ, ಶಿವರಾಜ ಪಾಳದ್, ಅಹಮದ್ ಸೇಟ್, ಮಲ್ಲಿಕಾರ್ಜುನ ಬೆಣ್ಣೂರಕರ್, ನಿಂಗಾರೆಡ್ಡಿ ಭೀಮನಳ್ಳಿ, ಸುರೇಶ ಗುತ್ತೇದಾರ, ಗಂಗಾಧರ ಡಿಗ್ಗಿ, ವಿಠಲ್ ಕಟ್ಟಿಮನಿ, ರವಿಸಾಗರ ಹೊಸಮನಿ, ವಿನ್ನುಕುಮಾರ್ ಜಡಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಪ್ರಯಾಣಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *