ಕಲಬುರಗಿ: ಈ ವರ್ಷದ ಬಜೆಟ್ ಮಧ್ಯಮ ವರ್ಗಕ್ಕೆ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ಕೊಟ್ಟಿದೆ, ಪ್ರಗತಿಗೆ ಪೂರಕ ಹಾಗೂ ದೂರದೃಷ್ಟಿಯ ಬಜೆಟ್ ಇದಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.
ಕೇಂದ್ರ ಬಜೆಟ್ ಯುವಕರು, ರೈತರು, ಮಹಿಳೆಯರು, ಮಧ್ಯಮ ವರ್ಗದವರ ಅಭಿವೃದ್ದಿಗೆ ಸಂಬಂಧಿಸಿದಂತೆ ಹೊಸ ಯೋಜನೆಗಳು, 12 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.
ಬಡತನ ನಿರ್ಮೂಲನೆ, ಕ್ಯಾನ್ಸರ್ ಮಹಾಮಾರಿ ಚಿಕಿತ್ಸೆ, ರೈಲು ಸೌಲಭ್ಯ, ಜೀವರಕ್ಷಕ ಔಷಧಿಗಳಿಗೆ ಸುಂಕ ಕಡಿತ, ಹಿರಿಯ ನಾಗರಿಕರಿಗೆ ಟಿಡಿಸ್ ಕಡಿತ ಮಿತಿ ಹೆಚ್ಚಳ, ರಾಜ್ಯಗಳಿಗೆ ದೀರ್ಘಾವಧಿ ಸಾಲಮಿತಿ ಹೆಚ್ಚಳವೆಂದು ಪ್ರಸ್ತಾಪಿಸಲಾಗಿದೆ. ರೈತರು, ಯುವಕರು, ಮಹಿಳೆಯರು, ಮಧ್ಯಮವರ್ಗದವರಿಗೆ ಆದ್ಯತೆ ನೀಡಲಾಗಿದೆ ಎಂದರು.