ಮನುಷ್ಯನ ದೇಹದೊಳಗಿನ ಮಾಂಸವನ್ನೆ ತಿನ್ನುತ್ತಂತೆ ಈ ಬ್ಯಾಕ್ಟೀರಿಯಾ, ಜಗತ್ತಿಗೆ ಶುರುವಾಯಿತಾ ಮತ್ತೊಂದು ಮಾರಕ ರೋಗದ ಟೆನ್ಷನ್ ?

ಅಂತಾರಾಷ್ಟ್ರೀಯ

ದೇಹದ ಮಾಂಸವನ್ನೇ ಕಿತ್ತು ತಿನ್ನುವ ಬುರುಲಿ ಹುಣ್ಣು ಆಸ್ಟ್ರೇಲಿಯಾದಲ್ಲಿ ಹೆಚ್ಚಾಗ್ತಿದೆ. ವಿಕ್ಟೋರಿಯಾ, ಉತ್ತರ ಕ್ವೀನ್ಸ್‌ಲ್ಯಾಂಡ್ ಮತ್ತು ಉತ್ತರ ಪ್ರಾಂತ್ಯದಲ್ಲಿ ಪ್ರಕರಣಗಳು ವರದಿಯಾಗುತ್ತಿವೆ.ಆಸ್ಟ್ರೇಲಿಯಾದಲ್ಲಿ ವಿಚಿತ್ರ ಕಾಯಿಲೆ.

ನ್ಯೂ ಸೌತ್ ವೇಲ್ಸ್ ಮತ್ತು ಒಂದು ಪ್ರಕರಣವಿಲ್ಲದ ಬೇಟೆಮನ್ಸ್ ಕೊಲ್ಲಿಯಲ್ಲಿ ಈ ರೋಗ ಕಂಡುಬಂದಿರುವುದು ಆಸ್ಟ್ರೇಲಿಯನ್ನರಿಗೆ ಮತ್ತು ಸಂಶೋಧಕರಿಗೆ ತಲೆನೋವು ಉಂಟು ಮಾಡಿದೆ. ಸಿಡ್ನಿಗೂ ಸೋಂಕು ಹರಡುವ ಅಪಾಯವಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕ್ಯಾನ್‌ಬೆರಾದಿಂದ 110 ಕಿ.ಮೀ ದೂರದಲ್ಲಿರುವ NSW ಪಟ್ಟಣವಾದ ಬೇಟೆಮನ್ಸ್ ಬೇಯಲ್ಲಿ ಹುಣ್ಣು ಸಾಮಾನ್ಯವಾಗುತ್ತಿದೆ. ನೂರಾರು ಕಿಲೋಮೀಟರ್ ಅಂತರದಲ್ಲಿ ವಾಸಿಸುವವರಲ್ಲಿ ಸಹ ಬುರುಲಿ ಹುಣ್ಣು ಕಂಡು ಬರುತ್ತಿರುವುದು ಸಂಶೋಧಕರಿಗೆ ಕಳವಳವನ್ನುಂಟು ಮಾಡಿದೆ.

ಏನಿದು ಬುರುಲಿ ಹುಣ್ಣು ಸೋಂಕು ?

ಬುರುಲಿ ಹುಣ್ಣು ಚರ್ಮ ಮತ್ತು ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಮೊದಲು ಸರ್ ಆಲ್ಬರ್ಟ್ ಕುಕ್ 1897 ರಲ್ಲಿ ಉಗಾಂಡಾದಲ್ಲಿ ಕಂಡುಕೊಂಡರು. ಇದು ಮೈಕೋಬ್ಯಾಕ್ಟೀರಿಯಂ ಅಲ್ಸರನ್ಸ್‌ನಿಂದ ಉಂಟಾಗುವ ಬ್ಯಾಕ್ಟೀರಿಯಾದ ಸೋಂಕಾಗಿದೆ.

ಬುರುಲಿ ಹುಣ್ಣು ಆಸ್ಟ್ರೇಲಿಯಾದಲ್ಲಿ ಈಗಷ್ಟೆ ಅಲ್ಲ ಸುಮಾರು 1940ರ ದಶಕದಿಂದಲೂ ಕಂಡುಬರುತ್ತಲೇ ಇದೆ. ಬೇಟೆಮನ್ಸ್ ಕೊಲ್ಲಿಯಲ್ಲಿ ಕಂಡುಬದಿರುವ ಬ್ಯಾಕ್ಟೀರಿಯಾವು ಮೆಲ್ಬೋರ್ನ್, ಗೀಲಾಂಗ್ ಮತ್ತು ಸುತ್ತಮುತ್ತಲಿನ ಸ್ಥಳೀಯ ಪ್ರದೇಶಗಳಲ್ಲಿ ಇರುವದಕ್ಕಿಂತ ಭಿನ್ನವಾಗಿದೆ.

ಯಾವುದೆ ನೋವು, ಉರಿಯಿಲ್ಲದೆ ಉಂಟಾಗುವ ಹುಣ್ಣು, ಆರಂಭದಲ್ಲಿ ಕೀಟಗಳ ಕಡಿತದಂತೆ ಕಾಣಿಸಿಕೊಳ್ಳುತ್ತದೆ. ಗಾಯ ಗುಣವಾಗದೆ ಚರ್ಮದ ಮೂಲಕ ಹೋಗಿ ದೊಡ್ಡ ಹುಣ್ಣುಗಳಾಗಿ ರೂಪುಗೊಳ್ಳುವ ಸ್ಥಿತಿಯಾಗಿದೆ.

ಚಿಕಿತ್ಸೆ ನೀಡದಿದರೆ ಹುಣ್ಣು ಬೆಳೆದು ಮತ್ತೊಂದು ಹುಣ್ಣುವಿನ ಉಗಮಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ಇದನ್ನು ಸಾಮಾನ್ಯವಾಗಿ “ಮಾಂಸ ತಿನ್ನುವ” ಕಾಯಿಲೆ ಎಂದು ಕರೆಯಲಾಗುತ್ತದೆ.

ಹೇಗೆ ಹರಡುತ್ತದೆ ?

ಬುರುಲಿ ಅಲ್ಸರ್ ಮನುಷ್ಯರಿಗೆ ಹರಡುವಲ್ಲಿ ಪೊಸಮ್ ಮತ್ತು ಸೊಳ್ಳೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಕೆಲ ಸಂಶೋಧನೆಗಳು ಹೇಳಿವೆ.

ಮೊದಲಿಗೆ ಪೋಸಮ್‌ಗಳು (ಒಂದು ರೀತಿಯ ಪ್ರಾಣಿ) ಈ ಸೋಂಕಿಗೆ ಒಳಗಾಗಿ ನಂತರ ಅವುಗಳು ತಮ್ಮ ಮಲದಲ್ಲಿ ಬ್ಯಾಕ್ಟೀರಿಯಾವನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಚೆಲ್ಲುತ್ತವೆ.

ಆ ಬ್ಯಾಕ್ಟೀರಿಯಾ ನಂತರ ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ಪ್ರವೇಶಿಸಿ, ಸೊಳ್ಳೆಗಳು ತರುವಾಯ ಸೋಂಕನ್ನು ಮನುಷ್ಯರಿಗೆ ವರ್ಗಾಯಿಸುತ್ತವೆ ಎನ್ನಲಾಗಿದೆ.

ಆರೋಗ್ಯದ ಮೇಲಿನ ಪರಿಣಾಮ

ಬುರುಲಿ ಹುಣ್ಣು ಪ್ರತಿರಕ್ಷಾ ನಿರೋಧಕ ಗುಣಗಳನ್ನು ಹೊಂದಿದೆ ಮತ್ತು ಚರ್ಮಕ್ಕೆ ವಿಷಕಾರಿಯಾಗಿದೆ. ಪ್ರತಿಜೀವಕ ಚಿಕಿತ್ಸೆಯೊಂದಿಗೆ, ಇದು ಚರ್ಮದ ವಿರೂಪತೆ, ಅಂಗವೈಕಲ್ಯ, ಮೂಳೆ ಸೋಂಕು ಮತ್ತು ನಿಮ್ಮ ಚರ್ಮದಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾದ ಸೋಂಕನ್ನು ಒಳಗೊಂಡಿರುವ ಆಜೀವ ಕಾಯಿಲೆಗಳಿಗೆ ಕಾರಣವಾಗಬಹುದು.

ವಿಶ್ವ ಆರೋಗ್ಯ ಸಂಸ್ಥೆ ಬುರುಲಿ ಹುಣ್ಣನ್ನು ನಿರ್ಲಕ್ಷಿತ ಉಷ್ಣವಲಯದ ಚರ್ಮದ ಕಾಯಿಲೆ ಎಂದು ವರ್ಗಿಕರಿಸಿದೆ. ಪಶ್ಚಿಮ ಮತ್ತು ಮಧ್ಯ ಆಫ್ರಿಕಾದಾದ್ಯಂತ 33 ದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದರೂ ಈ ರೋಗವು ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿದೆ.

ರೋಗ ಲಕ್ಷಣಗಳು ಯಾವುವು ?

ಈ ಹುಣ್ಣು ಗುಣವಾಗದೆ ಸುಮಾರು ದಿನ ಹಾಗೆಯೇ ಉಳಿಯುತ್ತದೆ, ನಂತರ ಮತ್ತೊಂದು ಹುಣ್ಣಾಗಿ ದೇಹದ ಎಲ್ಲಾ ಕಡೆ ಹಬ್ಬಬಹುದು. ಚರ್ಮವು ಸೋಂಕಿಗೆ ಒಳಗಾಗಿದ್ದರೆ, ಒಬ್ಬ ವ್ಯಕ್ತಿಯು ಜ್ವರ, ಊತ ಮತ್ತು ಹುಣ್ಣುಗಳು ಮೊದಲಿಗೆ ಕಂಡುಬರುತ್ತವೆ. ಇದು ನೋವನ್ನು ಸಹ ಉಂಟು ಮಾಡಬಹುದು.

ಬುರುಲಿ ಹುಣ್ಣುವಿಗೆ ಚಿಕಿತ್ಸೆ

ಹುಣ್ಣಿಗೆ 6 ರಿಂದ 8 ವಾರಗಳ ಪ್ರತಿಜೀವಕಗಳ ಕೋರ್ಸ್ ಅಗತ್ಯವಿರುತ್ತದೆ, ಇದು ಸೋಂಕನ್ನು ಪರಿಣಾಮಕಾರಿಯಾಗಿ ಎದುರಿಸಲು ಸಹಾಯ ಮಾಡುತ್ತದೆ. ಪೀಡಿತ ಅಂಗಾಂಶವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಕೂಡ ನಡೆಸಬಹುದು.

DEET ಹೊಂದಿರುವ ಕೀಟ ನಿವಾರಕಗಳನ್ನು ಬಳಸಲು ತಜ್ಞರು ಶಿಫಾರಸು ಮಾಡುತ್ತಾರೆ, ಹೊರಾಂಗಣದಲ್ಲಿ ರಕ್ಷಣಾತ್ಮಕ ಉಡುಪುಗಳನ್ನು ಧರಿಸಲು, ಮನೆ ಸುತ್ತ ಸೊಳ್ಳೆಯಾಗದಂತೆ ಎಚ್ಚರವಹಿಸಲು ಸಲಹೆ ನೀಡಲಾಗುತ್ತದೆ.

ಆಸ್ಟ್ರೇಲಿಯಾದಲ್ಲಿ ಎಷ್ಟು ಪ್ರಕರಣಗಳಿವೆ ?

ಆಸ್ಟ್ರೇಲಿಯನ್ ಅಸೋಸಿಯೇಟೆಡ್ ಪ್ರೆಸ್ (AAP) ಪ್ರಕಾರ, ವಿಕ್ಟೋರಿಯಾದಲ್ಲಿ ಸುಮಾರು ಪ್ರತಿದಿನ ಒಂದು ಪ್ರಕರಣ ವರದಿಯಾಗಿದೆ. ಕರಾವಳಿ ರಾಜ್ಯದಲ್ಲಿ 2024 ರಲ್ಲಿ 347 ಪ್ರಕರಣಗಳು ದೃಢಪಟ್ಟಿವೆ.

ಈ ಹಿಂದೆ ಒಂದೇ ಒಂದು ಕೇಸ್‌ ಇಲ್ಲದ ಬೇಟೆಮನ್ಸ್ ಕೊಲ್ಲಿಯಲ್ಲಿ ಈಗ ಈ ರೋಗ ಕಂಡುಬಂದಿದೆ.

Leave a Reply

Your email address will not be published. Required fields are marked *