ಚಿತ್ರ : 11 ಎಸ್‌ಬಿಡಿ 1
ಶಹಾಬಾದ: ನಗರ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಹಬ್ಬದ ನಿಮಿತ್ತ ಸೌಹಾರ್ದ ಸಭೆಯಲ್ಲಿ ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಮಾತನಾಡಿದರು.
ಭಾವೈಕ್ಯತೆಯಿಂದ ಹಬ್ಬ ಆಚರಿಸಲು ಡಿವೈಎಸ್‌ಪಿ ಶಂಕರಗೌಡ ಪಾಟೀಲ ಸಲಹೆ
ಸುದ್ದಿ ಸಂಗ್ರಹ ಶಹಾಬಾದ್
ಹಬ್ಬಗಳು ಜನರ ಭಾವನೆಗಳಿಗೆ ಧಕ್ಕೆ ತರದೆ ಭಾವೈಕ್ಯತೆ ಹಾಗೂ ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು, ಹಬ್ಬಗಳ ದಿಕ್ಕು ತಪ್ಪಬಾರದು, ಹಬ್ಬಗಳಲ್ಲಿ ಸಮಾಜದಲ್ಲಿ ಶಾಂತಿಗೆ ಭಂಗ ತಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಶಹಾಬಾದ ವಿಭಾಗದ ಡಿವೈಎಸ್‌ಪಿ
ಶಂಕರಗೌಡ ಪಾಟೀಲ್ ಹೇಳಿದರು.
ಹಬ್ಬಗಳು ಜನರ ಭಾವನೆಗಳನ್ನು ಗಟ್ಟಿ ಮಾಡುತ್ತವೆ. ಇದಕ್ಕೆ ತದ್ವಿರುದ್ಧ ಕೆಲಸ ಮಾಡಬಾರದು. ಭಾವೈಕ್ಯ ಹಾಗೂ ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು. ಸಮಾಜದಲ್ಲಿ ಶಾಂತಿ ಭಂಗ ತಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಶಹಾಬಾದ್ ವಿಭಾಗದ ಡಿವೈಎಸ್‌ಪಿ ಶಂಕರಗೌಡ ಪಾಟೀಲ ಹೇಳಿದರು.
ನಗರದ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಹಬ್ಬದ ನಿಮಿತ್ತ ಕರೆದ ಸೌಹಾರ್ದ ಸಭೆಯಲ್ಲಿ ಮಾತನಾಡಿದರು. ಗಣೇಶ ಉತ್ಸವ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆವಹಿಸಿ ಎಲ್ಲರೂ ಸಹೋದರತೆ ಭಾವದಿಂದ ಹಬ್ಬಗಳನ್ನು ಆಚರಿಸಬೇಕು ಎಂದು ಹೇಳಿದರು.
ತಹಶೀಲ್ದಾರ ನೀಲಪ್ರಭಾ ಬಬಲಾದ ಮಾತನಾಡಿ ಗಣೇಶ ಉತ್ಸವ ಸಮಿತಿಯವರು ಸಾರ್ವಜನಿಕರು ವಿವಿಧ ಇಲಾಖೆಗಳಿಂದ ಪಡೆಯಬೇಕಾದ ಎಲ್ಲಾ ಪರವಾನಗಿಗಳು ಅನುಮೋದನೆಗಳು
ಮತ್ತು ಸೇವೆಗಳನ್ನು ಒಂದೇ ಸೂರಿನಡಿ ಪಡೆಯುವ ವ್ಯವಸ್ಥೆಯಾಗಿದೆ. ಪೊಲೀಸ್ ಇಲಾಖೆ, ನಗರಸಭೆ, ವಿದ್ಯುತ್ ಇಲಾಖೆ ಮತ್ತು ಅಗ್ನಿಶಾಮಕ ದಳದಂತಹ ಬೇರೆ ಬೇರೆ ಕಚೇರಿಗಳಿಗೆ ಅಲೆಯಬೇಕಾಗುತ್ತಿತ್ತು. ಆದರೆ ಏಕ ಗವಾಕ್ಷಿ ವ್ಯವಸ್ಥೆಯಲ್ಲಿ ನೀವು ಒಂದೇ ಒಂದು ಅರ್ಜಿ ಸಲ್ಲಿಸಿದರೆ ಸಾಕು, ಆ ಅರ್ಜಿಯೇ ಎಲ್ಲಾ ಇಲಾಖೆಗಳಿಗೆ ಹೋಗಿ ಅಲ್ಲಿಂದಲೇ ನಿಮಗೆ ಎಲ್ಲಾ ಅನುಮತಿಗಳು ಒಟ್ಟಿಗೆ ಸಿಗುತ್ತವೆ.ಏಕ ಗವಾಕ್ಷಿ ವ್ಯವಸ್ಥೆಯ ಮುಖ್ಯ ಅನುಕೂಲಗಳು ಸಮಯದ ಉಳಿತಾಯವಾಗುತ್ತದೆ ಎಂದು ಹೇಳಿದರು.
ಪಿಐ ಪರಶುರಾಮ ವನಂಜಕರ ಅವರು ಪ್ರಾಸ್ತಾವಿಕ ಮಾತನಾಡಿದರು.
ನಗರಸಭೆ ಎಇಇ ಪೌರಾಯುಕ್ತ ಮನೋಜಕುಮಾರ ಗುರಿಕಾರ, ಅಗ್ನಿಶಾಮಕ ಅಧಿಕಾರಿ ನಾಗರಾಜ, ಎಸ್‌ಓ ಮಡಿವಾಳ, ಮಾತನಾಡಿದರು.
ಚಂದ್ರಕಾAತ ಗೊಬ್ಬರಕರ, ರಫೀಗ ಬಾಗವಾನ, ಮೃತ್ಯುಂಜಯ ಸ್ವಾಮಿ, ಮತೀನ ಸೇಠ ಮಾತನಾಡಿದರು. ಚಂದ್ರಕಾAತ ಗೊಬ್ಬುರ, ಮೃತ್ಯುಂಜಯ ಹಿರೇಮಠ, ಕಿರಣ ಚವ್ಹಾಣ್, ಬಸವರಾಜ ಸಾತ್ಯಾಳ, ಕೃಷ್ಣಪ್ಪ ಕರಣಿಕ, ದಶರಥ ದೇಸಾಯಿ ಅನಿಸಿಕೆ ವ್ಯಕ್ತಪಡಿಸಿದರು.
ಪ್ರಮುಖರಾದ ಅಣವೀರ ಇಂಗಿನಶೆಟ್ಟಿ, ರಾಮು ಕುಸಾಳೆ, ಶಿವಕುಮಾರ ನಾಟೀಕಾರ, ಜಹೀರ್ ಪಟ್ವಾಘರ, ರಾಜೇಶ ಯನಗುಂಟಿಕರ್, ಕಾಶಿನಾಥ ಜೊಗಿ, ದೇವರಾಜ ರಾಠೋಟ, ಕಿರಣ ಚವ್ಹಾಣ್, ಡಿ.ಸಿ ಹೊಸ್ಮನಿ, ಮಂಗಲ ನಾಯಕ, ಶರಣು ವಸ್ತ್ರದ, ಮಲ್ಲಿಕಾರ್ಜುನ ಕಟ್ಟಿ, ನಾಗರಾಜ ಮೇಲಗಿರಿ, ತಾಲೂಕಿನ ವಿವಿಧ ಗಣೇಶ ಉತ್ಸವ ಸಮಿತಿಯ ಯುವಕರು, ಮುಖಂಡರು ಪಾಲ್ಗೊಂಡಿದರು.
ಮಲ್ಲಿಕಾರ್ಜುನ ನಿರೂಪಿಸಿದರು. ದೊಡ್ಡಪ್ಪ ಪೂಜಾರಿ ಸ್ವಾಗತಿಸಿದರು.
ಕೋಟ್ :
“ ಪ್ರತಿಯೊಂದು ಹಬ್ಬ, ಆಚರಣೆಗಳಾಗಲಿ ತನ್ನದೆಯಾದ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆ ಹೊಂದಿರುತ್ತದೆ. ಅವುಗಳ ಮಹತ್ವ ಅರಿತಾಗ ಆಚರಣೆಯಲ್ಲಿ ಸಾರ್ವತ್ರಿಕ ಸಂಭ್ರಮ ಕಾಣಬಹುದು. ತಾಲೂಕಿನಲ್ಲಿ ಯಾವುದೇ ಅಪರಾಧ ಚಟುವಟಿಕೆ ಸಹಿಸುವುದಿಲ್ಲ ಅಂತವರಿಗೆ ಕಾನೂನ ತಕ್ಕ ಉತ್ತರ ನೀಡಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಇತರರಿಗೆ ಯಾವುದೇ ತೊಂದರೆಯಾಗಬಾರದು, ಸಭ್ಯತೆಯಿಂದ ಕಲಬುರಗಿ ಜಿಲ್ಲೆಯಲ್ಲಿಯೇ ಅತ್ಯಂತ ವಿಜೃಂಭಣೆ ಆಚರಣೆ
– ಶಂಕರಗೌಡ ಪಾಟೀಲ್ ಡಿವೈಎಸ್‌ಪಿ ಶಹಾಬಾದ್.
ನಗರದ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ನಿಮಿತ್ತ ನಡೆದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆವಹಿಸಬೇಕು. ಎಲ್ಲರೂ ಸಹೋದರತೆ ಭಾವದಿಂದ ಹಬ್ಬಗಳನ್ನು ಆಚರಿಸಬೇಕು’ ಎಂದರು.
ತಹಶೀಲ್ದಾರ್ ನೀಲಪ್ರಭಾ ಬಬಲಾದ, ಪಿಐ ಪರಶುರಾಮ ವನಂಜಕರ, ನಗರಸಭೆ ಎಇಇ ಪೌರಾಯುಕ್ತ ಮನೋಜಕುಮಾರ ಗುರಿಕಾರ, ಅಗ್ನಿಶಾಮಕ ಅಧಿಕಾರಿ ನಾಗರಾಜ, ಎಸ್‌ಓ ಮಡಿವಾಳ, ರಫೀಕ್ ಬಾಗವಾನ, ಮೃತ್ಯುಂಜಯ ಸ್ವಾಮಿ, ಮತೀನ ಸೇಠ, ಕಿರಣ ಚವ್ಹಾಣ, ಬಸವರಾಜ ಸಾತ್ಯಾಳ, ಕೃಷ್ಣಪ್ಪ ಕರಣಿಕ, ದಶರಥ ದೇಸಾಯಿ, ಅಣವೀರ ಇಂಗಿನಶೆಟ್ಟಿ, ರಾಮು ಕುಸಾಳೆ, ಜಹೀರ್ ಪಟ್ವಾಘರ, ರಾಜೇಶ ಯನಗುಂಟಿಕರ್, ಕಾಶಿನಾಥ ಜೊಗಿ, ಡಿ.ಸಿ ಹೊಸ್ಮನಿ, ಮಂಗಲ ನಾಯಕ ಇದ್ದರು.
ಜೇವರ್ಗಿ: ಗಣೇಶೋತ್ಸವವನ್ನು ಸರ್ಕಾರದ ನಿಯಮಾನುಸಾರ ಯಾವುದೇ ವಿವಾದಕ್ಕೆ ಆಸ್ಪದ ನೀಡದೇ ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು. ಹಬ್ಬದ ನೆಪದಲ್ಲಿ ಕಾನೂನು ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ’ ಎಂದು ಸಿಪಿಐ ಬಾಪುಗೌಡ ಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ಶಾಂತಿಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡಿವೈಎಸ್‌ಪಿ ಮಹೇಶ ಮೇಘಣ್ಣವರ್, ಲೋಕೇಶ, ಪಿಎಸ್‌ಐ ಮಹಿಬೂಬ್ ಅಲಿ, ಉಪತಹಶೀಲ್ದಾರ್ ಟಿಪ್ಪು ಸುಲ್ತಾನ್, ಲಕ್ಷ್ಮಣ ದೊಡ್ಡಮನಿ, ಗಣೇಶ ಮಂಡಳಿಯ ಶರಣು ಕೋಳಕೂರ, ಸಿದ್ದು ಗಜ, ಶಿವಲಿಂಗ ರಾಸಣಗಿ, ಸಿದ್ರಾಮ ಕಟ್ಟಿ, ರವಿ ಕೋಳಕೂರ, ಮೋಹಿಯುದ್ದೀನ್ ಇನಾಮದಾರ, ಅನೀಲ ದೊಡ್ಡಮನಿ, ಮಲ್ಕಣ್ಣ ಹಿರೆಪೂಜಾರಿ, ಅಬ್ದುಲ್ ರಹಮಾನ್ ಪಟೇಲ್, ಭಗವಂತ್ರಾಯ ಬೆಣ್ಣೂರ, ಗಿರೀಶ ತುಂಬಗಿ, ಭೀಮು ಖಾದ್ಯಾಪೂರ, ನಾಗರಾಜ ಇದ್ದರು.