ಉಪ ವಿಭಾಗಾಧಿಕಾರಿಗಳಾಗಿ 7 ಐಎಎಸ್ ಅಧಿಕಾರಿಗಳ ನೇಮಕ, ಯಾರು ಎಲ್ಲಿಗೆ ?

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ಕರ್ನಾಟಕ ಸರ್ಕಾರವು 2024ನೇ ಬ್ಯಾಚ್‌ನ ಐಎಎಸ್ ಅಧಿಕಾರಿಗಳಿಗೆ ವಿವಿಧ ಉಪ ವಿಭಾಗಗಳ ಉಪ ವಿಭಾಗಾಧಿಕಾರಿ ಹುದ್ದೆಗೆ ನೇಮಕ ಮಾಡಿದೆ.

ಪುರುರಾಜ್‌ ಸಿಂಗ್‌ ಸೋಲಂಕಿ ಅವರಿಗೆ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಯಾಗಿ ನೇಮಕ ಮಾಡಿದೆ. ರಿತ್ವಿಕ್‌ ವರ್ಮಾ ಅವರನ್ನು ಕಲಬುರಗಿ ಉಪ ವಿಭಾಗಾಧಿಕಾರಿ, ಝುಫಿಷನ್‌ ಹಕ್‌ ಅವರನ್ನು ವಿಜಯಪುರ ಉಪ ವಿಭಾಗಾಧಿಕಾರಿ, ಅಭಿನವ್‌ ಜೈನ್‌ ಅವರನ್ನು ಬೀದರ್ ಉಪ ವಿಭಾಗಾಧಿಕಾರಿ, ಖೋಡೆ ಸಮೀರ್‌ ಪ್ರಕಾಶ್‌ ಅವನರನ್ನು ಹಾವೇರಿ ಜಿಲ್ಲೆ ಸವಣೂರು ಉಪ ವಿಭಾಗಾಧಿಕಾರಿ ನೇಮಿಸಲಾಗಿದೆ.

ಆರ್‌ ರಮ್ಯಾ ಅವರನ್ನು ಕಾರವಾರ ಉಪ ವಿಭಾಗಾಧಿಕಾರಿ, ನಾಗೇಂದ್ರ ಬಾಬುಕುಮಾರ್ ಅವರನ್ನು ರಾಯಚೂರು ಜಿಲ್ಲೆ ಲಿಂಗಸುಗೂರು ಉಪ ವಿಭಾಗಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಇದಲ್ಲದೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದ ಡಾ.ಕೆ ರಾಕೇಶಕುಮಾರ್ ಅವರನ್ನು ಗ್ರೇಟರ್‌ ಬೆಂಗಳೂರು ಪ್ರದೇಶ ದಕ್ಷಿಣ ನಗರ ಪಾಲಿಕೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

ಬೆಂಗಳೂರು ದಕ್ಷಿಣ ನಗರಪಾಲಿಕೆ ಆಯುಕ್ತರಾಗಿದ್ದ ಕೆ.ಎನ್‌ ರಮೇಶ್‌ ಅವರನ್ನು ಜಿಬಿಎ ಆರೋಗ್ಯ ಮತ್ತು ಶಿಕ್ಷಣ ವಿಶೇಷ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಹುದ್ದೆ ನಿರೀಕ್ಷಣೆಯಲ್ಲಿದ್ದ ಐಎಎಸ್ ಅಧಿಕಾರಿ ಸಿ.ಟಿ ಶಿಲ್ಪ ನಾಗ್‌ ಅವರನ್ನು ಜಿಬಿಎ ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ ಮತ್ತು ಸಮನ್ವಯ ವಿಶೇಷ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

ಜಿಬಿಎ ವಿಶೇಷ ಆಯುಕ್ತರಾಗಿದ್ದ ಆರ್ ವೆಂಕಟಾಚಲಪತಿ ಅವರನ್ನು ಬೆಂಗಳೂರು ಕೇಂದ್ರ ಪಾಲಿಕೆಯ ಹೆಚ್ಚುವರಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

Leave a Reply

Your email address will not be published. Required fields are marked *