ಸುದ್ದಿ ಸಂಗ್ರಹ ಕಲಬುರಗಿ
ಕಲಬುರಗಿ ವಿಭಾಗದ ಅಂಚೆ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯ 18 ಪ್ರಮುಖ ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಮತ್ತು ನವೀಕರಣ ಸೇವೆ ಪ್ರಾರಂಭಿಸಿದೆ ಎಂದು ಕಲಬುರಗಿ ವಿಭಾಗದ ಅಂಚೆ ಅಧೀಕ್ಷಕ ರವೀಂದ್ರ ಬಿ.ಎಲ್ ತಿಳಿಸಿದ್ದಾರೆ.
ಈ ಅಂಚೆ ಕಚೇ ರಿಗಳಲ್ಲಿ ತರಬೇತಿ ಪಡೆದ ಸಿಬ್ಬಂದಿ ಹಾಗೂ ಅತ್ಯಾ ಧುನಿಕ ಬಯೋಮೆಟ್ರಿಕ್ ಸಾಧನಗಳ ಮೂಲಕ ಗುಣಮಟ್ಟದ ಆಧಾರ್ ಸೇವೆ ನೀಡಲಾಗುತ್ತಿದೆ. ಸಾರ್ವಜನಿಕರು ಅಗತ್ಯ ಮೂಲ ದಾಖಲೆಗಳೊಂದಿಗೆ ಅಂಚೆ ಕಚೇರಿಗೆ ಭೇಟಿ ನೀಡಿ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು.
ಅಂಚೆ ಕಚೇರಿಗಳ ವಿವರ: ನಗರದ ಮುಖ್ಯ ಅಂಚೆ ಕಚೇರಿ (02), ರೈಲ್ವೆ ಸ್ಟೇಷನ್, ಜಗತ್, ಗುಲಬರ್ಗಾ ವಿಶ್ವವಿದ್ಯಾಲಯ, ಬಹಮನಿಪುರ, ಜಿ.ಜಿ.ಎಚ್, ನೆಹರೂ ಗಂಜ್, ಆಳಂದ, ಅಫಜಲಪುರ, ಶಹಾಬಾದ್ (02), ವಾಡಿ, ಜೇವರ್ಗಿ, ದೇವಲಗಾಣಗಾಪು, ಕಾಳಗಿ, ಮಹಾಗಾಂವ ಮತ್ತು ಸುಲೇಪೇಟ.