ಸುದ್ದಿ ಸಂಗ್ರಹ ಚಿತ್ತಾಪುರ
ತಾಲೂಕಿನ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮತ್ತು ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾಗಿ ಪಟ್ಟಣದ ಪ್ರಾರ್ಥನಾ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಜಗದೇವ ದಿಗ್ಗಾಂವಕರ್ ಆಯ್ಕೆಯಾಗಿದ್ದಾರೆ.
ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ಕುರಿತು ಗುರುವಾರ ಇಲ್ಲಿನ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಶಾಲೆಗಳ
ಮುಖ್ಯಸ್ಥರ ಮತ್ತು ಆಡಳಿತ ಮಂಡಳಿಗಳ ಪದಾಧಿಕಾರಿಗಳ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಯಿತು.
ರಾಘವೇಂದ್ರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ಕುಲಕರ್ಣಿ ಅವರನ್ನು ಒಕ್ಕೂಟದ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.
ಒಕ್ಕೂಟದ ಸಭೆಯಲ್ಲಿ ನಾಗರೆಡ್ಡಿ ಪಾಟೀಲ ಕರದಾಳ, ಚಂದ್ರಶೇಖರ ಅವಂಟಿ, ಶಿವಕುಮಾರ, ಚಂದ್ರಶೇಖರ ಸುಣಗಾರ, ಪ್ರಶಾಂತ ಪಾಟೀಲ್, ವೆಂಕಟೇಶ ಕುಲಕರ್ಣಿ, ಸುರೇಶ ಸರಫ್, ಮಲ್ಲಿನಾಥ ನಾಗರಾಜ ಕುಲಕರ್ಣಿ. ಮರೆಪ್ಪಾ ಬೊಮ್ಮನಹಳ್ಳಿ, ಆಶಾರಾಣಿ, ಸರಿತಾ ಜಳಕಿ ಸೇರಿದಂತೆ ಅನೇಕರು ಇದ್ದರು.