ಹೊಸ ಸಿಮ್ ಪಡೆಯಲು ಇನ್ನುಮುಂದೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ

ನವದೆಹಲಿ

ಸುದ್ದಿ ಸಂಗ್ರಹ ನವದೆಹಲಿ
ಹೊಸ ಸಿಮ್ ಕಾರ್ಡ್ ಪಡೆಯಲು ಇನ್ನುಮುಂದೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.

ಕೇಂದ್ರದ ಆದೇಶದ ಹಿನ್ನೆಲೆ ಹೊಸ ಸಿಮ್ ಕಾರ್ಡ್‌ ಪಡೆಯುವ ಮುನ್ನ ಗ್ರಾಹಕರು ಬಯೋಮೆಟ್ರಿಕ್ ಪರಿಶೀಲಿಸಬೇಕು. ಗ್ರಾಹಕರ ಮಾಹಿತಿ ಅಪ್‌ಡೇಟ್ ಮತ್ತು ಮರುಪರಿಶೀಲನೆ ಸಂದರ್ಭದಲ್ಲೂ ಬಯೋಮೆಟ್ರಿಕ್ ವೆರಿಫಿಕೇಶನ್ ಅಗತ್ಯ ಎಂದು ಸೂಚಿಸಿದೆ.

ಸಿಮ್ ಕಾರ್ಡ್‌ ಸ್ಥಗಿತಗೊಳಿಸುವ ಪ್ರಕ್ರಿಯೆಯಲ್ಲೂ ಗುರುತು ಪರಿಶೀಲನೆ ನಿಯಮ ಅನ್ವಯವಾಗಲಿದೆ. ಸೈಬರ್ ವಂಚನೆ ಹಾಗೂ ನಕಲಿ ಸಿಮ್ ಕಾರ್ಡ್ ಕನೆಕ್ಷನ್‌ಗಳಿಗೆ ಕಡಿವಾಣ ಹಾಕಲು ಕೇಂದ್ರ ಈ ಕ್ರಮ ಕೈಗೊಂಡಿದೆ. ಈ ಹೊಸ ನಿಯಮಗಳನ್ನು ಸಿಮ್ ಕಾರ್ಡ್ ಮತ್ತು ಟೆಲಿಕಾಂ ಸೇವೆ ಒದಗಿಸುವ ಕಂಪನಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆದೇಶಿಸಿದೆ.

Leave a Reply

Your email address will not be published. Required fields are marked *