ಸುದ್ದಿ ಸಂಗ್ರಹ ಕಲಬುರಗಿ
ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಕಾದಿದ್ದ ವಾತಾವರಣಕ್ಕೆ ತಂಪೆರೆಯಿತು.
ನಗರದಲ್ಲಿ ದಿನವಿಡಿ ಬಿಸಿಲಿನ ವಾತಾವರಣ ಇತ್ತು, ಸಂಜೆ ಹೊತ್ತಿಗೆ ಆಗಸದಲ್ಲಿ ಮೋಡಗಳು ದಟ್ಟೈಸಿ ಧಾರಾಕಾರವಾಗಿ ಮಳೆ ಸುರಿಸಿದವು. ಬೇಸಿಗೆಯಂಥ ಸೆಕೆಯಿಂದ ಬಳಲಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿಸಿತು.
ಕೆಲವೇ ನಿಮಿಷಗಳ ಮಳೆಯಿಂದ ರಸ್ತೆಗಳ ಮೇಲೆ ನೀರು ಹರಿಯಿತು. ತಗ್ಗು ಪ್ರದೇಶಗಳಲ್ಲಿ ನೀರು ಜಮಾಯಿಸಿ, ವಾಹನಗಳ ಸವಾರರು ಪರದಾಡಿದರು.
ಜಿಲ್ಲೆಯ ಚಿತ್ತಾಪುರ ಮತ್ತು ಕಾಳಗಿ ತಾಲೂಕಿನಲ್ಲೂ ಉತ್ತಮ ಮಳೆ ಸುರಿದ ಬಗ್ಗೆ ವರದಿಯಾಗಿದೆ.