ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ನಗರದ ಮೌಂಟ್ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ಸಂರಕ್ಷಣಾ ಸಪ್ತಾಹ ಕಾರ್ಯಕ್ರಮ ಜರುಗಿತು.

ಶಾಲೆಯ ಮುಖ್ಯಗುರು ಸಿಸ್ಟರ್ ಲೋವಿಟಾ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ನಾಶ ಮಾಡಿದರೆ ಮುಂದಿನ ದಿನಗಳಲ್ಲಿ ಭೂಮಿಗೆ ಬಹಳಷ್ಟು ಹಾನಿಯಾಗಲಿದೆ. ಪರಿಸರವನ್ನು ರಕ್ಷಿಸುವದು ಕೇವಲ ಒಂದು ದಿನದ
ಆಚರಣೆಗೆ ಅಥವಾ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು, ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ ಎಂದರು.‌

ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ವಾಸುದೇವ ಚವ್ಹಾಣ ಮಾತನಾಡಿ, ನಮಗೆ ಕುಡಿಯಲು ನೀರು, ಉಸಿರಾಡಲು ಶುದ್ಧ ಗಾಳಿ ಹಾಗೂ ತಿನ್ನಲು ಆಹಾರ ನೀಡುವ ಈ ಭೂಮಿ ತಾಯಿಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಮಾನವನು ಆಧುನಿಕ ಬದುಕಿನ ಗೀಳಿಗೆ ಬಿದ್ದು, ಕೈಗಾರಿಕರಣ ಹಾಗೂ ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದ ಪ್ರಕೃತಿಯನ್ನು ಹಾಳು ಮಾಡುತ್ತಿದ್ದಾನೆ, ಮನುಷ್ಯನ ದುರಾಸೆಯಿಂದಾಗಿ ಗಾಳಿ, ನೀರು, ಮಣ್ಣು ಸೇರಿ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ, ಪರಿಸರ ನಾಶ ತಡೆಯುವುದು ಅತ್ಯಗತ್ಯವಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕುರಿತು ವಿವಿಧ ಸ್ಪರ್ಧೆಗಳು ಹಾಗೂ ಕಾರ್ಯಕ್ರಮ ಆಯೋಜಿಸಲಾಗಿತ್ತು.‌ ಶಾಲೆಯ ವಿದ್ಯಾರ್ಥಿಗಳು ಪ್ರಕೃತಿಯ ಮಹತ್ವ, ಕಾಡುಗಳ ರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ಸಮಾಜದ ಕುರಿತು ನಡೆಸಿಕೊಟ್ಟ ಜಾಗೃತಿ ಅಭಿನಯ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ಜಾಗೃತಿ ಅಭಿನಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.‌

ಪರಿಸರ ಕಾಳಜಿಯನ್ನು ನಿರಂತರವಾಗಿ ಕಾಯ್ದುಕೊಳ್ಳುವ ಉದ್ದೇಶದಿಂದ, ಶಾಲೆಯ ಇಕೋ ಕ್ಲಬ್‌ ಸದಸ್ಯರಿಗೆ ಶಾಲೆಯ ಪರವಾಗಿ ಸಸಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಈ ಸಸಿಗಳನ್ನು ತಮ್ಮ ಮನೆ ಹಾಗೂ ನೆರೆಹೊರೆಯಲ್ಲಿ ನೆಟ್ಟು ಪೋಷಿಸುವ ಭರವಸೆ ನೀಡಿದರು.

ಈ ವೇಳೆ ಪ್ರೌಢ ಶಾಲೆಯ ಮುಖ್ಯಗುರು ಸಿಸ್ಟರ್‌ ಸೆರೆನೆ, ನರ್ಸರಿ ಮುಖ್ಯಸ್ಥರಾದ ಸಿಸ್ಟ‌ರ್ ಲಿಂಡಾ, ಶಿಸ್ತು ಕಮಿಟಿ ಮುಖ್ಯಸರಾದ ಹರ್ಷಿತಾ
ಸಿಸ್ಟರ್, ಮಹ್ಮದ ಸೋಹೆಲ್, ಶ್ವೇತಾ ಮಂತ್ರಿ, ಮೇರಿ ವಿದ್ಯಾಸಾಗರ, ಬಸವರಾಜ ಬಳವಾಟ, ಸುನೀತಾ ಚವ್ಹಾಣ್‌ ಸೇರಿ ಶಾಲೆಯ ಶಿಕ್ಷಕರು,
ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *