ಮಹಾತ್ಮರ ಸಂದೇಶ ಸಮಾಜಕ್ಕೆ ದಾರಿದೀಪ: ಗಾರಂಪಳ್ಳಿ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಮಹಾತ್ಮರ ಸಂದೇಶ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಸಮಾಜ ಸೇವಕ ಚನ್ನಬಸಪ್ಪ ಗಾರಂಪಳ್ಳಿ ಹೇಳಿದರು.

ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಏರ್ಪಡಿಸಿದ್ದ ‘ಸವಿತಾ ಮಹರ್ಷಿಯವರ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಅನೇಕ ಮಹನೀಯರು ತಮ್ಮದೆಯಾದ ಕೊಡುಗೆ ನೀಡಿ, ದೇಶದ ಸಂಸ್ಕೃತಿ, ಪರಂಪರೆ ಹೆಚ್ಚಿಸಿದ್ದಾರೆ. ಯಾವುದೆ ಜಾತಿ, ಧರ್ಮ, ಜಯಂತಿಗೆ ಮಾತ್ರ ಸೀಮಿತವಾಗದೆ, ಅವರು ನೀಡಿರುವ ತತ್ವ, ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಸವಿತಾ ಮಹರ್ಷಿ ಬಗ್ಗೆ ಪುರಾಣಗಳಲ್ಲಿ ಉಲ್ಲೇಖಿಸಲಾದಂತೆ, ಆಯುರ್ವೇದ ವೈದ್ಯರಾಗಿ ದೇವತೆಗಳ ಸೇವೆ ಮಾಡುತ್ತಿದ್ದರು. ಶಿವನು ಯಜ್ಞ ಮಾಡುತ್ತಿರುವಾಗ ಆಕಸ್ಮಿಕವಾಗಿ ಅಗ್ನಿ ಸ್ಪರ್ಶವಾಗಿ ಶಿವನ ಕೂದಲು ಸುಟ್ಟವು. ಆಗ ಶಿವನು ಬಲಗಣ್ಣಿನಿಂದ ಪುರುಷನನ್ನು ಸೃಷ್ಟಿಸಿದನು. ಸವಿತಾ ಮಹರ್ಷಿಯು ನಾನಾ ವಿಧದ ಸಲಕರಣೆಗೆಳೊಂದಿಗೆ ಪೆಟ್ಟಿಗೆಯೊಂದಿಗೆ ಬಂದು ಶಿವನ ಕೇಶ ಸರಿಪಡಿಸಿದನು. ಅವನ ಸೇವೆಗೆ ಕೊಡುಗೆಯಾಗಿ ಕೆಲವು ವಾದ್ಯಗಳನ್ನು ದಯಪಾಲಿಸಿ. ಆತನೇ ಕ್ಷೌರಿಕ ಜನಾಂಗದ ಮೂಲ ಪುರುಷನೆಂದು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಶಿವನ ಕಣ್ಣಿನಿಂದ ಹುಟ್ಟಿದ ಮನುಷ್ಯನಿಗೆ ಸವಿತಾ ಮಹರ್ಷಿ ಎಂದು ಕರೆದರು. ಅದಕ್ಕಾಗಿಯೆ ಈ ಸಮಾಜವನ್ನು ನಯನಜರು ಎಂದು ಕರೆಯಲಾಗುತ್ತದೆ. ರಥ ಸಪ್ತಮಿ ದಿನದಂದು ಸೂರ್ಯ ಆರಾಧನೆಯ ದಿನ ಸವಿತಾ ಮಹರ್ಷಿ ಜಯಂತಿ ಆಚರಿಸಲಾಗುತ್ತದೆ. ಗಾಯಿತ್ರಿದೇವಿ ಸವಿತಾ ಮಹರ್ಷಿಯ ಮಗಳಾಗಿದ್ದು, ಸಾಮವೇದಕ್ಕೆ ಕೊಡುಗೆ ನೀಡಿದ್ದಾಳೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಎಸ್.ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸಾಲಿ ಸಂಗೀತಾ, ಶಿಕ್ಷಕಿಯರಾದ ಶಿಲ್ಪಾ, ಖಮರುನ್ನೀಸಾ, ಪ್ರೀತಿ, ಪೂರ್ಣಿಮಾ, ಪ್ರಿಯಾಂಕಾ, ವರ್ಷಾರಾಣಿ, ಚಂದ್ರಲೇಖಾ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *