ಸಚಿವ ಸ್ಥಾನ ಬಿಟ್ಟು ಪಕ್ಷದ ಕೆಲಸ ಮಾಡಿ ಅಂತ ಹೈಕಮಾಂಡ್ ಹೇಳಿದ್ರೆ ಎಲ್ಲರೂ ಮಾಡಬೇಕು: ಪ್ರಿಯಾಂಕ್ ಖರ್ಗೆ

ನಗರದ

ಸುದ್ದಿ ಸಂಗ್ರಹ ಬೆಂಗಳೂರು
ಹೈಕಮಾಂಡ್ ಸಚಿವ ಸ್ಥಾನ ಬಿಟ್ಟು ಪಕ್ಷದ ಕೆಲಸ ಮಾಡಬೇಕು ಅಂದರೆ ನಾನು ಸೇರಿ ಎಲ್ಲರೂ ಮಾಡಬೇಕಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ನೂತನ ಸಚಿವರಿಗೆ ಖಾತೆ ಹಂಚಿಕೆ ಆಗದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವ ಮಂತ್ರಿಗೆ ಯಾವ ಜವಾಬ್ದಾರಿ ಕೊಡಬೇಕು ಅನ್ನೋದು ಸಿಎಂ ವಿವೇಚನೆ. ಹೈಕಮಾಂಡ್ ಜೊತೆ ಮಾತಾಡಿ ಸಿಎಂ ಅವರು ಸರ್ಕಾರ ಯಾರಿಗೆ ಜವಾಬ್ದಾರಿ ಕೊಟ್ಟರೆ ಉತ್ತಮ ಅಂತ ತೀರ್ಮಾನ ಮಾಡ್ತಾರೆ. ಇದರಲ್ಲಿ ಯಾವುದೆ ಗೊಂದಲ ಇಲ್ಲ ಎಂದರು.

ಈಗಿರುವ ಸಚಿವರಲ್ಲಿ ಇಬ್ಬರಿಗೆ ರಾಜೀನಾಮೆ ಕೊಡಿಸೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರಿಗೂ ಸ್ಥಾನ ಕೊಡೋದು ಸಾಧ್ಯವಿಲ್ಲ. 33 ಸಚಿವ ಸ್ಥಾನ ಮಾತ್ರ ಇರೋದು. ಎಲ್ಲರಿಗೂ ತೃಪ್ತಿ ಪಡಿಸೋದು ಬಹಳ ಕಷ್ಟ. ಸಾಮಾಜಿಕ ‌ನ್ಯಾಯ ಕೊಡೋದು ಕಷ್ಟದ ಕೆಲಸ. ಪ್ರಾದೇಶಿಕ ಪ್ರಾತಿನಿಧ್ಯ ಕೊಡೋದು ಕಷ್ಟ. ಆದರೂ‌ ಎಲ್ಲರೂ‌ ಸೇರಿ ಪ್ರಾಮಾಣಿಕ‌ ಪ್ರಯತ್ನ ಮಾಡಿದ್ದಾರೆ. ಅದಾದ ಮೇಲೂ ಅಕಸ್ಮಾತ್ ಹೈಕಮಾಂಡ್‌ಗೆ ಅನಿಸಿದ್ರೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಬೇಕು ಪಕ್ಷದ ಕೆಲಸ ಮಾಡಿ ಎಂದರೆ ಎಲ್ಲರೂ ಬದ್ದವಾಗಿ ಇರಬೇಕು. ನಾನು ಇದಕ್ಕೆ ಬದ್ದ ನಿದ್ದೇನೆ ಎಂದರು.

ಹೈಕಮಾಂಡ್ ಏನು ಹೇಳುತ್ತೋ ಹಾಗೆ ಮಾಡುತ್ತೆವೆ. ಪಕ್ಷ ನಿರ್ಧಾರ‌ ಮಾಡಲಿ. ಯಾರಿಗೆ ಏನು ಜವಾಬ್ದಾರಿ ಕೊಡಬೇಕು ಅಂತ. ಪಕ್ಷದ ಜವಾಬ್ದಾರಿ ಕೊಡಬೇಕು ಅಂದರೆ ಅದನ್ನ ಸ್ವೀಕಾರ ಮಾಡೋಕೆ ನಾನು ರೆಡಿ ಇದ್ದೆನೆ. ಪಕ್ಷದ ಆಶೀರ್ವಾದ, ಜನರು, ಕಾರ್ಯಕರ್ತರ ಆಶೀರ್ವಾದಿಂದ ನಾವು ಇಲ್ಲಿ ಇದ್ದೆವೆ. ಪಕ್ಷದ ಕೆಲಸ‌ ಮಾಡು ಅಂದರೆ ನಾವು ಮಾಡಬೇಕು. ಇದು ಎಲ್ಲರಿಗೂ ಅನ್ವಯ ಆಗುತ್ತದೆ. ಅಸಮಾಧಾನ ಪಡೋದು ನನ್ನಲ್ಲಿ‌‌ ಇಲ್ಲ ಎಂದರು.

ಕೃಷ್ಣಪ್ಪ ಸೇರಿ ಹಲವರ ಅಸಮಾಧಾನ ವಿಚಾರಕ್ಕೆ, ಯಾರು ಏನು ಹೇಳ್ತಾ ಇದ್ದಾರೆ ಅದಕ್ಕೆ ಬೇರೆ ಅರ್ಥ ಹೇಳೋಕೆ ಆಗೊಲ್ಲ. ಅದೇನೆ ಇದ್ದರೂ ವರಿಷ್ಠರು ಇದ್ದಾರೆ ಅವರು ತೀರ್ಮಾನ ಮಾಡ್ತಾರೆ. ಕೃಷ್ಣಪ್ಪ ಅನುಭವಬೇಕು ನಮಗೆ, ಜೊತೆಗೆ ಪ್ರಿಯಕೃಷ್ಣ ಅವರ ಯುವ ಉತ್ಸಾಹವೂ ಬೇಕು. ಎಲ್ಲರಿಗೂ ಇದು ಸೀಮಿತ. ನಾವೆಲ್ಲರೂ ಸೇರಿದ್ರೆ ಮಾತ್ರ ಪಕ್ಷ ಕಟ್ಟೋಕೆ ಆಗುತ್ತದೆ. ಎಲ್ಲರೂ ಮುಖ್ಯವೇ ನಮಗೆ ಎಂದರು.

ಅಧಿವೇಶನ ಇದೆ, ಒಂದು ವಾರ ಸಮಯ ಕೊಟ್ಟರೆ ಇಲಾಖೆ ಬಗ್ಗೆ ಎಲ್ಲವನ್ನು ತಿಳಿದುಕೊಳ್ಳಬಹುದು. ಇವತ್ತಿಲ್ಲ ನಾಳೆ ಖಾತೆ ಹಂಚಿಕೆ ಆಗುತ್ತದೆ ಎಂದರು.

ಸಿದ್ದರಾಮಯ್ಯ ಮೇಲೆ ಕುರುಬ ಸಮುದಾಯದ ಶಾಸಕರು ಅಸಮಾಧಾನ ಆಗಿರುವ ವಿಚಾರಕ್ಕೆ, ಸಾಮಾಜಿಕ ‌ನ್ಯಾಯ ಕೊಡೊದು ಕಷ್ಟ. ಆದರೂ ಒಂದು ಪ್ರಯತ್ನ ‌ಮಾಡಲಾಗಿದೆ. ಹಿಂದಿನ ಕ್ಯಾಬಿನೆಟ್‌‌ನಲ್ಲಿ ಸಿದ್ದರಾಮಯ್ಯ ಸಿಎಂ ಇದ್ದರು, ಭೈರತಿ ಅವರು ಇದ್ದರು. ಈಗಲೂ ಅಂಕಿ ಪ್ರಕಾರ ಅಷ್ಟೆ ಇದ್ದಾರೆ. ಹೆಚ್ಚು ಬೇಕು ಅಂತ ಎಲ್ಲಾ ಸಮುದಾಯದ ಬೇಡಿಕೆ ಇರುತ್ತದೆ. ಅಧಿಕಾರ ಸಿಕ್ಕರೆ ಸಮಾಜಕ್ಕೆ ಬಲ ಬರುತ್ತದೆ, ಸೇವೆ ಮಾಡಬಹುದು ಅಂತ ಇರುತ್ತದೆ. ಆದರೆ ಸಂವಿಧಾನಾತ್ಮವಾಗಿ 15% ಮಾತ್ರ ಮಂತ್ರಿ ಮಾಡೋಕೆ ಸಾಧ್ಯ ಎಂದು ತಿಳಿಸಿದರು.

ಆಡಿಯೋ ಬಗ್ಗೆ ಛಲವಾದಿ ನಾರಾಯಣಸ್ವಾಮಿ ದೂರು ಕೊಡಲಿ
ತಿಮ್ಮಾಪುರ್- ನಂಜಯ್ಯಮಠ ಆಡಿಯೋ ಬಗ್ಗೆ ಛಲವಾದಿ ನಾರಾಯಣಸ್ವಾಮಿ ದೂರು ಕೊಡಲಿ ಎಂದು ಪುನುರುಚ್ಚಾರ ಮಾಡಿದ್ದಾರೆ.

ತಿಮ್ಮಾಪುರ್- ನಂಜಯ್ಯಮಠ ಆಡಿಯೋ ಬಗ್ಗೆ ಸುಮೋಟೋ ಕೇಸ್ ದಾಖಲು ಮಾಡಿ ಎಂಬ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಛಲವಾದಿ ನಾರಾಯಣಸ್ವಾಮಿ ಹೇಳೋದಕ್ಕೆಲ್ಲಾ ಸುಮೋಟೋ ಕೇಸ್ ತಗೊಳ್ಳೊಕೆ ಆಗುತ್ತಾ ?ಎಲ್ಲರೂ ಹೇಳಿದ್ದಕ್ಕೆ ಸುಮೋಟೋ ತಗೊಳ್ಳೋಕೆ ಹೋದರೆ ಅದೆ ಕೆಲಸ ನನಗೆ ಆಗುತ್ತದೆ.

ಸುಮೋಟೋ ಕೇಸ್ ಪ್ರಕರಣ ಗಂಭೀರವಾಗಿ ಇದ್ದಾಗ. ನಿಮ್ಮ ಪ್ರಕಾರ ಗಂಭೀರವಾಗಿದೆ. ನಾವು ಪರಿಗಣಿಸಬೇಕಾದ್ರೆ ದೂರು ಕೊಡಿ. ಮೂಲ ನಿಮ್ಮ ಬಳಿ ಇದೆ. ಸುಮೋಟೋ ತಗೋತೀನಿ ಅವರೇ ಆ ಬಗ್ಗೆ ಮಾಹಿತಿ ಕೊಡಬೇಕು ಎಂದರು.

ಹಿಂದೆ ನಾನು PSI ಹಗರಣದಲ್ಲಿ ಪತ್ರಿಕೆ, ಮಾಧ್ಯಮಗಳಲ್ಲಿ ಬಂದಿದ್ದನ್ನ ಮಾತಾಡಿದ್ದಕ್ಕೆ 3 ಬಾರಿ ಸಿಐಡಿ ಅವರು ನೊಟೀಸ್ ಕೊಟ್ಟಿದ್ರು. ನಾವು ಹಂಗೆ ಮಾಡೊಲ್ಲ. ಛಲವಾದಿ ನಾರಾಯಣಸ್ವಾಮಿ ಶಾಸಕರು ಅವರಿಗೆ ನಾವು ಹಾಗೆ ನಡೆಸಿಕೊಳ್ಳಲು ಆಗೊಲ್ಲ ಎಂದು ತಿರುಗೇಟು ಕೊಟ್ಟರು.

Leave a Reply

Your email address will not be published. Required fields are marked *