ಜಾಗತಿಕ ತಾಪಮಾನ ತಡೆಗೆ ಮರ ಗಿಡ ಬೆಳೆಸಿ: ಶೈಲೇಂದ್ರ ಕಾವಡಿ

ತಾಲೂಕು

ಸುದ್ದಿ ಸಂಗ್ರಹ ಕಲಬುರಗಿ
ಜಾಗತಿಕ ತಾಪಮಾನ ಮನುಷ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಗಿಡ ನೆಟ್ಟು ಬೆಳೆಸುವುದರಿಂದ ತಾಪಮಾನ ನಿಯಂತ್ರಿಸಬಹುದು ಎಂದು ಬೀದರ ಪರಿಸರವಾನಿ ಅಧ್ಯಕ್ಷ, ಖ್ಯಾತ ಪರಿಸರವಾದಿ ಶೈಲೇಂದ್ರ ಕಾವಡಿ ಹೇಳಿದರು.

ತಾಲೂಕಿನ ಅವರಾದ್ (ಬಿ) ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಪರಿಸರ ಸಂರಕ್ಷಣೆ ಜನ ಜಾಗೃತಿ ಮತ್ತು ವನಮೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ, ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಭೂತಾಪಮಾನ ಹೆಚ್ಚಳದಿಂದಾಗಿ ಜೀವ ವೈವಿಧ್ಯತೆಗಳ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಹಲವಾರು ಪ್ರಾಣಿ ಪಕ್ಷಿಗಳು ಕೂಡ ಭೂತಾಪನ ಹೆಚ್ಚಳದಿಂದ ಕಣ್ಮರೆಯಾಗಲಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಪರಾಗಸ್ಪರ್ಶೆಯಲ್ಲಿ ಸಹಾಯ ಮಾಡುವ ಒಂದು ಚಿಕ್ಕ ಚಿಟ್ಟೆ ಕಣ್ಮರೆಯಾದರೆ ಮುಂದಿನ್ ದಿನಗಳಲ್ಲಿ ಜೇನುತುಪ್ಪ ಸಿಗಲಾರದು ಹಾಗೂ ಕಾಫಿ ತೋಟದ ಮೇಲೆ ಭಾರಿ ಪರಿಣಾಮ ಬೀರುವುದು ಎಂದು ಎಚ್ಚರಿಕೆ ನೀಡಿದರು.

ಅಧಿಕ ಪ್ರಮಾಣದಲ್ಲಿ ಮರ-ಗಿಡ ಬೆಳೆಸಿ ಭೂ ತಾಪಮಾನ ಕಡಿಮೆ ಮಾಡಲು ಪ್ರತಿಯೊಬ್ಬರು ಶ್ರಮಿಸಬೇಕು, ಈ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಅವರಾದ್ (ಬಿ) ಗ್ರಾಮದಲ್ಲಿ 44. ರಿಂದ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿತ್ತು ಅದೆ ರೀತಿ ಚಿಂಚೋಳಿ ತಾಲೂಕಿನ ಐನಾಪುರದಲ್ಲಿ 45.5 ಡಿಗ್ರಿ ಸೆಲ್ಸಿಯಸ್ ವರದಿಯಾಗಿತ್ತು ಎಂದರು.

ಚಿಂಚೋಳಿ ಹಾಗೂ ಕಲಬುರಗಿ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಹೆಚ್ಚಳವಾದ ಭೂ ತಾಪಮಾನ ಇಳಿಸಲು ಮರ ಗಿಡಗಳು ಬೆಳೆಸಿ ಪರಿಸರ ಸಂರಕ್ಷಣೆಗೆ ಶ್ರಮಿಸಬೇಕು ಎಂದು ಆಗ್ರಹಿಸಿದರು.

ಶಾಲೆಯ ಎಲ್ಲಾ ವಿದಾರ್ಥಿಗಳು ‘ಕಾಡು ಬೆಳೆಸಿ ನಾಡು ಉಳಿಸಿ’, ಪೇಡ್ ಮಾ ಕೆ ನಾಮ್ ಅಡಿಯಲ್ಲಿ ಸಸಿ ನೆಟ್ಟು ಪೋಷಿಸಿ ಎಂದು ಕರೆ ನೀಡಿದರು.

ಪ್ರೌಢ ಶಾಲೆಯ ಮುಖ್ಯಗುರು ಮಾತನಾಡಿ, ಶಿಸ್ತು ಜೀವನದ ತಳಹದಿ ಎಲ್ಲ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು ಮತ್ತು ಪರಿಸರದಲ್ಲಿ ಆಗುವ ಎಲ್ಲ ಬದಲಾವಣೆಗೆ ಮಾನವನ ಹಸ್ತಕ್ಷೇಪವೇ ಕಾರಣ ಎಂದರು.

ಎಲ್ಲ ವಿದ್ಯಾರ್ಥಿಗಳು ತಮ್ಮ ವ್ಯಾಪ್ತಿಯಲ್ಲಿ ಒಂದೊಂದು ಸಸಿ ನೆಟ್ಟು ಅವರಾದ್ (ಬಿ) ಗ್ರಾಮ ಹಸಿರುಮಯವಾಗುವಂತೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖಂಡ ಶಿವಶಂಕರ್, ಪ್ರಭಾರಿ ಪ್ರಾಂಶುಲ ಸಂತೋಷ ಚಿಕ್ಕಬಸ್ತಿ, ಶಾಲೆಯ ಶಿಕ್ಷಕ ಸಿಬ್ಬಂದಿಗಳಾದ ಜಿಲ್ಲಾ ಮಾಧ್ಯಮಿಕ ಶಿಕ್ಷಕರ ಸಂಘದ ಅಧಕ್ಷ ಸಂಜೀವಕುಮಾರ್ ಪಾಟೀಲ್, ಜಿಲ್ಲಾ ಮಹಿಳಾ ಶಿಕ್ಷಕರ ಸಂಘದ ಉಪಾಧ್ಶಕ್ಷೆ ರಾಜೇಶ್ವರಿ ತಪಲಿ, ಹಿರಿಯ ಶಿಕ್ಷಕರಾದ ದತ್ತಾತ್ರೇಯ ಕುಲಕರ್ಣಿ, ವಿಜಯಲಕ್ಷ್ಮಿ, ಮಧುಮತಿ, ಬಾಲಗಂಗಾಧರ, ಬಂದೇನವಾಜ್, ಅಕ್ಕಮಹಾದೇವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕು.ಭಾಗ್ಯಶ್ರೀ ಪ್ರಾರ್ಥನಾ ಗೀತೆ ಹಾಡಿದರು.
ಕಾರ್ಯಕ್ರಮವನ್ನು ಶಿಕ್ಷಕ ಪ್ರದೀಪಕುಮಾರ ಸ್ವಾಗತಿಸಿದರು, ಶಿಕ್ಷಕ ರಾಜೇಶ ನಾಗೂರೆ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *