ಸುದ್ದಿ ಸಂಗ್ರಹ ರಾವೂರ
ಕಲಿಯುವ ವಯಸ್ಸಿನಲ್ಲಿ ಮಕ್ಕಳ ದುಡಿಮೆ ಆತoಕಾರಿ ಬೆಳವಣಿಗೆಯಾಗಿದೆ. ಬಾಲಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಕಠಿಣ ಕಾನೂನು ಕ್ರಮ ಹಾಗೂ ಜನಜಾಗೃತಿ ಅವಶ್ಯಕ ಎಂದು ಶಿಕ್ಷಕ ಸಿದ್ದಲಿಂಗ ಬಾಳಿ ಹೇಳಿದರು.
ಶಹಾಬಾದ್ ತಾಲೂಕಿನ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ “ವಿಶ್ವ ಬಾಲಕಾರ್ಮಿಕ ವಿರೋಧಿ ದಿನ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಶಿಕ್ಷಣ, ಆಟ, ವಿರಾಮ, ಆಹಾರ ಎಲ್ಲಾ ರೀತಿಯ ಹಕ್ಕಗಳನ್ನು ಪಡೆಯಬೇಕು ಇಲ್ಲವಾದರೆ ಅವರ ಬೆಳವಣಿಗೆ ಕುಂಠಿತವಾಗುತ್ತದೆ. ಬಡತನ ನೆಪಮಾಡಿಕೊಂಡು ಬಾಲಕಾರ್ಮಿಕತನಕ್ಕೆ ಇಳಿಯುವ ಮಕ್ಕಳು, ಮಕ್ಕಳ ಹಕ್ಕುಗಳಿಂದ ವoಚಿತರಾಗುತ್ತಿದ್ದಾರೆ ಅದನ್ನು ತಡೆಗಟ್ಟಲು ಮತ್ತು ಜಾಗೃತಿ ಮೂಡಿಸಲು ವಿಶ್ವ ಸಂಸ್ಥೆಯು ಪ್ರತಿ ವರ್ಷ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವೆಂದು ಆಚರಿಸಲಾಗುತ್ತದೆ ಎಂದರು.
ಮಕ್ಕಳಿಗೆ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ವೇದಿಕೆಯ ಮೇಲೆ ಶಿಕ್ಷಕರಾದ ಈಶ್ವರಗೌಡ ಪಾಟೀಲ, ಶಿವಕುಮಾರ ಸರಡಗಿ, ವಿಜಯಲಕ್ಷ್ಮಿ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.