ಲಂಚ ಪಡೆದ ಗ್ರಾ.ಪಂ ಕರವಸೂಲಿಗಾರ ಸಂತೋಷ ರಾಠೋಡ ಲೋಕಾಯುಕ್ತ ಬಲೆಗೆ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಚಿತ್ತಾಪುರ
ಯುಪಿಐ ಮೂಲಕ ಲಂಚ ಪಡೆದ ಚಿತ್ತಾಪುರ ತಾಲೂಕಿನ ಕರದಾಳ ಗ್ರಾಮ ಪಂಚಾಯಿತಿ ಕರ ವಸೂಲಿಗಾರ ಸಂತೋಷ ರಾಠೋಡ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕರದಾಳ ಪಂಚಾಯಿತಿ ವ್ಯಾಪ್ತಿಯ ಹನ್ನಿಕೇರಿ ಗ್ರಾಮದ ರಾಮನಾಯಕ ತಾಂಡಾ ನಿವಾಸಿ ಸವಿತಾ ಎಂಬುವವರಿಗೆ ಸರ್ಕಾರ ಡಾ. ಬಿ.ಆರ್‌ ಅಂಬೇಡ್ಕರ್‌ ನಿವಾಸ ಯೋಜನೆಯಡಿಯ ಮನೆ ಮಂಜೂರು ಮಾಡಿತ್ತು. ಆ ಮನೆ ಕಟ್ಟಡದ 3 ಹಾಗೂ 4ನೇ ಕಂತಿನ ಹಣ ಬಿಡುಗಡೆಗೆ ಬಿಲ್‌ ಕಲೆಕ್ಟರ್‌ ಸಂತೋಷ 22 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಕುರಿತು ಸಿಖಂದರ್‌ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಬೇಡಿಕೆ ಇಟ್ಟ ಲಂಚದ ಹಣದಲ್ಲಿ 15 ಸಾವಿರ ಯುಪಿಐ ಮೂಲಕ ಪಡೆದಿದ್ದ ಸಂತೋಷ ರಾಠೋಡನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *