ಸುದ್ದಿ ಸಂಗ್ರಹ ಶಹಾಬಾದ್
ತಾಲೂಕಿನ ಸಮೀಪದ ಮಹಾನಗರ ತಾಂಡದ ಶ್ರೀ ಯಲ್ಲಾಲಿಂಗ ಪುಣ್ಯಾಶ್ರಮದ ಪೀಠಾಧಿಪತಿ ಸದ್ಗುರು ಶ್ರೀ ಜೇಮಸಿಂಗ ಮಹಾರಾಜರ 78ನೇ ಹುಟ್ಟು ಹಬ್ಬದ ನಿಮಿತ್ತ ಜೂನ್ 24 ರಂದು ಬೆಳಗ್ಗೆ 10 ಗಂಟೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಮಠದ ಪರವಾಗಿ ಪ್ರಕಾಶ ರಾಠೋಡ, ನೀಲಕಂಠ ಚವ್ಹಾಣ್ ಹೇಳಿದ್ದಾರೆ.
ಆಶ್ರಮದ ಯಲ್ಲಾಲಿಂಗ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ ನಡೆಯುವುದು ನಂತರ ಆಯುಷ್ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ, ಇದರಲ್ಲಿ ಅಲೋಪತಿ ಚಿಕಿತ್ಸೆ ಕೂಡ ಮಾಡಲಾಗುತ್ತದೆ. ಹಾಗೂ ಸುರಕ್ಷಾ ಬ್ಲಡ್ ಬ್ಯಾಂಕ್‌ಯಿಂದ ಉಚಿತ ರಕ್ತದಾನ ಶಿಬಿರ ನಡೆಸಲಾಗುತ್ತದೆ. ಪೂಜ್ಯರ ಹುಟ್ಟು ಹಬ್ಬದ ನಿಮಿತ್ತ ಭಕ್ತರಿಂದ ಗುರುವಂದನಾ ಕಾರ್ಯಕ್ರಮ, ಸಸಿ ನೆಡುವ ಕಾರ್ಯಕ್ರಮ, ಸರಕಾರಿ ಶಾಲೆಗಳಲ್ಲಿ ನೋಟ್ ಪುಸ್ತಕ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದರು.
ಗುರುವಂದನಾ ಕಾರ್ಯಕ್ರಮದಲ್ಲಿ ಮಠಾಧೀಶರು, ವಿವಿಧ ಸಮಾಜದ ಮುಖಂಡರು ಮತ್ತು ವಿವಿಧ ಪಕ್ಷದ ಮುಖಂಡರು ಪಾಲ್ಗೊಳ್ಳುವವರು, ಗುರುವಂದನಾ ಕಾರ್ಯಕ್ರಮ ಹಾಗೂ ಆರೋಗ್ಯ ಶಿಬಿರದ ಪ್ರಯೋಜನ ಪಡೆಯಬೇಕು ಎಂದರು.
ಹೆಚ್ಚಿನ ಮಾಹಿತಿಗೆ ಪ್ರಕಾಶ ರಾಠೋಡ 9902625534 ಮತ್ತು ಡಾ.ಶ್ರೀನಾಥ ರಾಠೋಡ 9880032561 ಅವರನ್ನು ಸಂಪರ್ಕಿಸಬಹುದು ಎಂದರು.