ಜವಳಿ ಪಾರ್ಕ್ ಅಭಿವೃದ್ಧಿಗೆ ಕ್ರಮವಹಿಸಲು ಸಂಪುಟ‌ ನಿರ್ಣಯ

ಜಿಲ್ಲೆ

ಸುದ್ದಿ ಸಂಗ್ರಹ ಕಲಬುರಗಿ
ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಮಹತ್ವಾಕಾಂಕ್ಷೆಯ ಜವಳಿ ಪಾರ್ಕ್‌ ಅನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿಪಡಿಸಲು ಕ್ರಮ ವಹಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

1,000 ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಈ ಜವಳಿ ಪಾರ್ಕ್ ಸುಮಾರು 1,700 ಕೋಟಿ ಯೋಜನಾ ಮೊತ್ತದೊಂದಿಗೆ ಅಭಿವೃದ್ಧಿಪಡಿಸಲಾಗುವುದು. 320 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಅಭಿವೃದ್ಧಿ ಕಾರ್ಯ ಕೆಐಎಡಿಬಿ ಕೈಗೆತ್ತಿಕೊಳ್ಳಲಿದೆ. ಕಲಬುರಗಿಯ ನದಿಸಿನ್ನೂರು, ಹೊನ್ನಕಿರಣಗಿ ಗ್ರಾಮಗಳಲ್ಲಿ 1,000 ಎಕರೆಯನ್ನು ಕೈಮಗ್ಗ ಮತ್ತು ಜವಳಿ ಇಲಾಖೆಯಡಿಯಲ್ಲಿ ಅಭಿವೃದ್ದಿಪಡಿಸಲಾಗುತ್ತದೆ. ಪಿಎಂ ಮಿತ್ರ ಪಾರ್ಕ್ ಯೋಜನೆಯಡಿಯಲ್ಲಿನ 500 ಕೋಟಿ ಬಂಡವಾಳ ಸಹಾಯಧನ ಬಳಸಿಕೊಳ್ಳುವುದರೊಂದಿಗೆ ಕೆಐಎಡಿಬಿ ಅನುದಾನದೊಂದಿಗೆ ಜವಳಿ ಪಾರ್ಕಿನ ಅಭಿವೃದ್ಧಿಗೆ ವೇಗ ನೀಡಲಾಗುವುದು. ಈ ಜವಳಿ ಪಾರ್ಕ್‌ನಿಂದ ಅಂದಾಜು 1 ಲಕ್ಷ ಜನರಿಗೆ ನೇರ ಉದ್ಯೋಗ ಮತ್ತು ಅಂದಾಜು 2 ಲಕ್ಷ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಈಗಾಗಲೇ ಹಲವು ಜವಳಿ ಉದ್ಯಮಗಳು ಕಲಬುರಗಿ ಜವಳಿ ಪಾರ್ಕಿನಲ್ಲಿ ಬಂಡವಾಳ ಹೂಡಿಕೆಗೆ ಮುಂದೆ ಬಂದಿರುವುದು ಈ ಯೋಜನೆ ಯಶಸ್ಸಿನತ್ತ ಮುನ್ನಡೆಯುವ ಸಕಾರಾತ್ಮಕ ಸೂಚನೆಯಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *