ಸುದ್ದಿ ಸಂಗ್ರಹ ಕಲಬುರಗಿ
ಅತ್ಯುತ್ತಮ ಸೇವೆಗಾಗಿ ಕಲಬುರಗಿ ವಲಯದ ಡಿಐಜಿ ಶಾಂತನು ಸಿನ್ಹಾ ಸೇರಿದಂತೆ ಜಿಲ್ಲೆಯ ಆರು ಪೊಲೀಸರು 2025–26ನೇ ಸಾಲಿನ ಡಿಜಿ–ಐಜಿಪಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಕಲಬುರಗಿ ಪೊಲೀಸ್ ಕಮಿಷನರೇಟ್‌ನ ಸಿಸಿಬಿ ಇನ್‌ಸ್ಪೆಕ್ಟರ್ ಅರುಣಕುಮಾರ, ಆಳಂದ ಸಿಪಿಐ ಶರಣಬಸಪ್ಪ ಕೊಡ್ಲಾ, ಡಿಎಆರ್‌ನ ಆರ್‌ಪಿಐ ಚಂದ್ರಶೇಖರ ಹಾಗೂ ಈಶಾನ್ಯ ವಲಯ ಪೊಲೀಸ್ ಕಚೇರಿಯ ಹೆಡ್ ಕಾನ್‌ಸ್ಟೆಬಲ್ ಅರುಣಕುಮಾರ ಈ ಪ್ರಶಸ್ತಿಗೆ ಪಾತ್ರರಾದ ಇತರ ಪೊಲೀಸರು.
ದೆಹಲಿ ಮೂಲದ ಶಾಂತನು ಸಿನ್ಹಾ 2009ರ ಬ್ಯಾಚ್‌ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ. ಅವರು ಕಳೆದ ಎರಡು ವರ್ಷಗಳಿಂದ ಈಶಾನ್ಯ ವಲಯ ಕಲಬುರಗಿ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಂಧ್ರಪ್ರದೇಶದ ಅಡ್ಡೂರು ಶ್ರೀನಿವಾಸುಲು 2017ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. 2021ರಿಂದ ಕಲಬುರಗಿ ಕಮಿನಷರೇಟ್‌ನಲ್ಲಿ ಡಿಸಿಪಿಯಾಗಿ ಕೆಲಸ ಮಾಡಿದ್ದರು. ಬಳಿಕ 2023ರಿಂದ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾರೆ.
2010ರಲ್ಲಿ ಪಿಎಸ್‌ಐ ಆಗಿ ಪೊಲೀಸ್ ಸೇವೆ ಆರಂಭಿಸಿದ್ದ ಅರುಣಕುಮಾರ ಇದೀಗ ಕಲಬುರಗಿ ಸಿಸಿಬಿ ಇನ್‌ಸ್ಪೆಕ್ಟರ್ ಆಗಿದ್ದಾರೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ವಿವಿಧ ಠಾಣೆಗಳಲ್ಲಿ ಪಿಎಸ್‌ಐ ಆಗಿ, ಬಳಿಕ ಯಾದಗಿರಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಆಗಿ, ನಂತರ ಕಲಬುರಗಿಯ ಅಶೋಕನಗರ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.
2002ಲ್ಲಿ ಪೊಲೀಸ್ ಇಲಾಖೆ ಸೇರಿದ ಅರುಣಕುಮಾರ ಇದೀಗ ಹೆಡ್ ಕಾನ್‌ಸ್ಟೆಬಲ್ ಆಗಿದ್ದಾರೆ. ಯೋಗ ಪಟುವಾಗಿಯೂ ಗುರುತಿಸಿಕೊಂಡಿದ್ದಾರೆ.