ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ವಿದ್ಯಾರ್ಥಿಗಳು ಈ ದೇಶದ ಭವಿಷ್ಯದ ಪ್ರಜೆಗಳು, ಅವರಲ್ಲಿ ಏನು
ಬೇಕಾದರೂ ಸಾಧಿಸಬಹುದಾದ ಕೌಶಲ್ಯಗಳು ಅಡಗಿವೆ.
ಅವುಗಳನ್ನು ಹೊರಗೆ ತರುವಂತಹ ಪ್ರಾಮಾಣಿಕ ಪ್ರಯತ್ನಗಳಾದಾಗ ಉತ್ತಮ ಪ್ರಜೆಗಳಾಗಿ ರೂಪಗೊಳ್ಳುತ್ತಾರೆ ಎಂದು ಜೆಪಿ ಕಾರ್ಖಾನೆಯ ಘಟಕದ ಮುಖ್ಯಸ್ಥ ಮಂಜುನಾಥ ಪ್ರಭು ಹೇಳಿದರು.

ನಗರದ ಜೆಪಿ ಕಾಲೋನಿಯ ಅನುದಾನಿತ ಕನ್ನಡ ಮಾಧ್ಯಮ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಅಗಾಧವಾದ ಶಕ್ತಿ ಅಡಗಿದೆ. ಅದನ್ನು ಉಪಯೋಗಿಸುವಂತಹ ಕಲೆ ಅವರಿಗೆ ಕಲಿಸಬೇಕು. ವಿದ್ಯಾರ್ಥಿ ದೆಸೆಯಲ್ಲಿ ಏನು ಬೇಕಾದರೂ ಕಲಿತುಕೊಳ್ಳುವಂತಹ ಸಾಮರ್ಥ್ಯ ಅವರು ಹೊಂದಿರುತ್ತಾರೆ. ನಿರಂತರ ಕಲಿಕೆಯ ಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಉತ್ತಮವಾಗಿ
ಬೆಳೆಸಬೇಕು ಎಂದರು.‌‌

ನಗರಸಭೆ ಮಾಜಿ ಸದಸ್ಯ ಶರಣು ಪಗಲಾಪೂರ, ದಿವಂಗತ ಅನಿಲ
ಮಂಜುನಾಥ ಪ್ರಭು ಅವರ ಹುಟ್ಟುಹಬ್ಬದ ನಿಮಿತ್ತ ಪ್ರತಿ ವರ್ಷ ಬಡ
ವಿದ್ಯಾರ್ಥಿಗಳಿಗೆ ಸಮವಸ್ತ್ರ, ನೋಟ್ ಪುಸ್ತಕ ಮತ್ತು ಅನ್ನಸಂತರ್ಪಣೆ
ಮಾಡುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸು ಕಾರ್ಯ
ಮಾಡುತ್ತಿರುವುದು ಶ್ಲಾಘನೀಯ ಎಂದರು.

ವೇದಿಕೆಯ ಮೇಲೆ ಶಾಲೆಯ ಕಾರ್ಯದರ್ಶಿ ಸುನೀಲ ಭಗತ, ಮುಖ್ಯಗುರು ಬಸವಂತರಾವ ಓಲೆಕರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ, ಕಾರ್ಖಾನೆಯ ಪ್ರಮುಖರಾದ ಕೇದಾರನಾಥ, ರಾಘವೇಂದ್ರ ಸೂರಿ, ಸುನೀಲ ಚವ್ಹಾಣ್, ಮೋಹನ ಚವ್ಹಾಣ್, ಬಬ್ಬರು ಚವ್ಹಾಣ್, ಸುಶೀಲಕುಮಾರ ಸಿಂಗ್, ಮುನ್ನಾಕುಮಾರ, ಸಂದೀಪನ ಪೋಸ್ಟೆ ಸೇರಿದಂತೆ ಅನೇಕರು ಪಾಲ್ಗೊಂಡಿದರು.

Leave a Reply

Your email address will not be published. Required fields are marked *