ವಾಡಿ: ಮಂಗಳವಾರ ಮಧ್ಯಾಹ್ನ ಬೀಸಿದ ಬಿರುಗಾಳಿಗೆ ಹೆದ್ದಾರಿಯ ಪಕ್ಕದ ಮರಗಳು ಧರೆಗುರುಳಿವೆ.
ಬಿರುಗಾಳಿಗೆ ಹಲಕರ್ಟಿ ಲಾಡ್ಲಾಪುರ ರಾಷ್ಟ್ರೀಯ ಹೆದ್ದಾರಿ-150ರ ಎರಡು ಬದಿಗಳಲ್ಲಿ ಸಾಲು ಸಾಲು ಮರಗಳು ಉರುಳಿ ಬಿದ್ದಿದ್ದು, ಭೀಕರ ಗಾಳಿಗೆ ಸಾಕ್ಷಿಯಾದವು.
ಸುಮಾರು ಅರ್ಧಗಂಟೆಗಿಂತ ಹೆಚ್ಚು ಕಾಲ ಜೋರಾದ ಗಾಳಿ ಬೀಸಿತು ಮತ್ತು ಅಲ್ಲಲ್ಲಿ ಮಳೆಯೂ ಸುರಿಯಿತು. ಗಾಳಿ ಮಳೆಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.