ವಾಡಿಯಲ್ಲಿ ಬಿಳಿ ಜೋಳದ ಕಣಕಿ ಬಣವಿಗೆ ಬೆಂಕಿ: ರೈತ ಕಂಗಾಲು

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ವಾಡಿ
ಪಟ್ಟಣದ ನ್ಯೂಟೌನ್‌‌ ರಸ್ತೆಯಲ್ಲಿರುವ ಸತೀಶ್ ನಾಯಕ ಅವರ ಹೊಲದಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ಬಿಳಿ ಜೋಳದ ಕಣಿಕಿ ಬಣವಿ ಭಸ್ಮವಾಗಿದೆ.

ಸುಮಾರು 50 ಸಾವಿರ ಮೌಲ್ಯದ ಕಣಿಕಿ ಬಣವಿ ಸಂಗ್ರಹವಾಗಿತ್ತು. ಮಧ್ಯಾಹ್ನ ಬಿರಿ ಬಿಸಿಲು ಮತ್ತು ಗಾಳಿಗೆ ಬೆಂಕಿ ಹೊತ್ತಿಕೊಂಡಿತು.

ಈ ಅವಘಡದಿಂದ ಬಡ ರೈತನಿಗೆ ನಷ್ಟವಾಗಿದೆ, ಆದಾನಿ ಕಂಪನಿಯ ಎಚ್.ಆರ್ ಮುಖ್ಯಸ್ಥ ಕೊಟೇಶ್ವರ ಅವರ ಸಹಾಯದಿಂದ ಬೆಂಕಿ ನಂದಿಸುವ ವಾಹನ ಸಮಯಕ್ಕೆ ಸರಿಯಾಗಿ ಆಗಮಿಸಿದ ಪರಿಣಾಮ ಇನ್ನೂ ಹೆಚ್ಚಿನ ಪ್ರಮಾಣದಲ್ಲಿನ ಅವಘಡವಾಗಲಿಲ್ಲ ಎಂದು ಯುವ ಮುಖಂಡ ವಿಠಲ ನಾಯಕ ಮತ್ತು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ತಿಳಿಸಿದರು.

ಕೃಷಿ ಇಲಾಖೆಯ ಅಧಿಕಕಾರಿಗಳು ರೈತರಿಗೆ ಮುಂಜಾಗ್ರತಾ ಕ್ರಮ ಮತ್ತು ಅಗ್ನಿ ಶಾಮಕ ವಾಹನ ತಕ್ಷಣ ಘಟನಾ ಸ್ಥಳಕ್ಕೆ ಬರುವ ಹಾಗೆ ಜವಾಬ್ದಾರಿ ಹೊಂದಬೇಕು. ಎಸಿಸಿ ಅವರ ವಾಹನ ಒಂದು ವೇಳೆ ಇಲ್ಲದೆ ಹೊದರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಡ ರೈತರಿ ಪರಿಹಾರ ಕೊಡಿಸುವ ಕೆಲಸವಾಗಲಿ, ಬರಿ ಬಾಯಿ ಮಾತಿನಲ್ಲಿ ರೈತರ ಪರ ಸರ್ಕಾರ ಎನ್ನದೆ, ರೈತರ ಸಂಕಷ್ಟಕ್ಕೆ ಸ್ಪಂದಿಸುವಂತಾಗಲಿ ಎಂದರು.

ಈ ಸಂದರ್ಭದಲ್ಲಿ ನಷ್ಟಕ್ಕೊಳಗಾದ ರೈತ ಸತೀಶ್ ನಾಯಕ, ಕಮಲ ಚವ್ಹಾಣ, ಸಂದೀಪ ನಾಯಕ‌ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *