ಶಹಾಬಾದ್: ಡಯಾಲಿಸಿಸ್ ಘಟಕ ಮತ್ತು ರಕ್ತದಾನ ಘಟಕ ಉದ್ಘಾಟನೆ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ರಕ್ತದಾನ ಘಟಕ ಮತ್ತು ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಿದ್ದು ತುಂಬಾ ಸಂತೋಷದ ವಿಷಯ ಎಂದು ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.

ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಡಯಾಲಿಸಿಸ್ ಕೇಂದ್ರ ಮತ್ತು ರಕ್ತದಾನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಘೋಷಣೆಯಾದ ನಂತರ ಆಸ್ಪತ್ರೆಯಲ್ಲಿ ಅತಿ ಹೆಚ್ಚು ಸೌಲಭ್ಯ ದೊರೆಯುವಂತೆ ಗಮನ ಹರಿಸುತ್ತಿದ್ದೆನೆ, ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ, ಮಾತ್ರೆಗಳ ಮತ್ತು ಔಷಧಿಗಳ ಅವಶ್ಯಕತೆ ಇರುವಷ್ಟು ಪೂರೈಕೆ ಆಗದಿರುವುದು ಅನೇಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದಾರೆ, ಕೂಡಲೆ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೆನೆ ಹಾಗೂ 108 ತುರ್ತು ಸೇವೆ ವಾಹನವು ಕೆಕೆಆರ್‌ಡಿಬಿ ಹಣದಲ್ಲಿ ಒದಗಿಸಲಾಗುವುದು ಮತ್ತು ಇತರ ಸಮಸ್ಯೆಗಳು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ತಾಲೂಕು ವೈದ್ಯಾಧಿಕಾರಿ ಡಾ. ವೀರನಾಥ ಕನಕ ಮಾತನಾಡಿ, ದಿನನಿತ್ಯ 400 ಕ್ಕಿಂತ ಹೆಚ್ಚು ಒಪಿಡಿ ತಪಾಸಣೆ ಮಾಡಲಾಗುತ್ತಿದೆ, ಅಪಘಾತ, ತುತ್ತು ಸೇವೆಗಾಗಿ ಇನ್ನು ಹೆಚ್ಚಿನ ಕೋಣೆಗಳ ಅವಶ್ಯಕತೆ ಇರುವುದು ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಲು ಶಾಸಕರಿಗೆ ಪತ್ರ ಸಲ್ಲಿಸಿ ಮನವಿ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಟಿಎಚ್’ಓ ಡಾ.ವೀರನಾಥ ಕನಕ, ವೈದ್ಯರಾದ ಡಾ.ಜಮೀರ್ ಬೇಗ್, ಡಾ.ಸಂಜಯ್ ರಾಠೋಡ್, ಡಾ. ಎಂ.ಎ ರಶೀದ್, ಪ್ರಮುಖರಾದ ಮರಿಯಪ್ಪ ಹಳ್ಳಿ, ಅಣವೀರ ಇಂಗಿನಶೆಟ್ಟಿ, ನಿಂಗಣ್ಣ ಹುಳುಗುಳಕರ್, ಅಬ್ದುಲ್ ಘನಿ ಸಾಬಿರ್, ಸಿದ್ರಾಮ ಕುಸಾಳೆ, ರವಿ ರಾಠೋಡ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *