ಸುದ್ದಿ ಸಂಗ್ರಹ ಚಿತ್ತಾಪುರ
ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಅನಾವರಣಗೊಳ್ಳುವುದು ವಾರ್ಷಿಕೋತ್ಸವ ಕಾರ್ಯಕ್ರಮದ ಮೂಲಕ. ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವುದು ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಬಾಲಭವನ ಉಪಾಧ್ಯಕ್ಷ ಅನೀಲ ಜಮಾದಾರ ಹೇಳಿದರು.
ಸಮೀಪದ ರಾವೂರ ಗ್ರಾಮದಲ್ಲಿ ನಡೆದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ 43ನೇ ವಾರ್ಷಿಕೋತ್ಸವ ಹಾಗೂ ಲಿo.ಸಿದ್ದಲಿಂಗ ಮಹಾಸ್ವಾಮಿಗಳ ಪುಣ್ಯಸ್ಮರಣೆ ಸಮಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಲಿನ ಗಣಿಗರಿಕೆಯಂತಹ ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆ ಜಿಲ್ಲೆಯಲ್ಲಿಯೆ ಮಾದರಿ ಎನ್ನುವಂತೆ ಬೆಳೆಸುತ್ತಿರುವುದು ನಿಜಕ್ಕೂ ಮಾದರಿ. ಶಿಕ್ಷಣ ಸಂಸ್ಥೆ ಗಟ್ಟಿಯಾಗಿ ನಿಲ್ಲಲು ಮುಖ್ಯವಾಗಿ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಸಂಸ್ಕಾರಯುತ ಬುನಾದಿ ಬಹಳ ಮುಖ್ಯ. ಅದೆಲ್ಲವೂ ಈ ಸಂಸ್ಥೆ ಮೈಗೂಡಿಸಿಕೊಂಡು ಬೆಳೆಯುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಮಾತನಾಡಿ, ಮಕ್ಕಳ ಸರ್ವಾoಗಿಣ ವಿಕಾಸಕ್ಕೆ ಏನು ಬೇಕೊ ಅದೆಲ್ಲವನ್ನು ಗ್ರಾಮೀಣ ಭಾಗದ ಶಾಲೆ ನೀಡುತ್ತಿರುವುದು ನಮ್ಮ ತಾಲೂಕಿನ ಹೆಮ್ಮೆಯಾಗಿದೆ. ಪ್ರತಿ ವರ್ಷ ಈ ಸಂಸ್ಥೆಯ ಮಕ್ಕಳು ಕ್ರೀಡೆ, ಎನ್’ಸಿಸಿ ಹಾಗೂ ಪಠ್ಯ ಚಟುವಟಿಕೆಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸದಾ ಮುಂಚೂಣಿಯಲ್ಲಿದ್ದಾರೆ. ಮಕ್ಕಳು ಜ್ಞಾನ ಹಾಗೂ ಮನೋವಿಕಾಸಕ್ಕಾಗಿ ವಾರ್ಷಿಕೋತ್ಸವ ಬಹಳ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಸಂಸ್ಥೆಯ ಅಧ್ಯಕ್ಷ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ವಹಿಸಿದ್ದರು…..ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪo ಅಧ್ಯಕ್ಷೆ ಸುಮಿತ್ರಾ ಎಚ್ ತುಮಕೂರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಮಹಾದೇವ ಬಂದಳ್ಳಿ, ರಾಜಶೇಖರ ಯಾದಲಾಪುರ ಇದ್ದರು.
ಕಾರ್ಯಕ್ರಮದಲ್ಲಿ ಮಕ್ಕಳಿಂದ ಆಕರ್ಷಕ ಎನ್’ಸಿಸಿ ಪೆರೇಡ್ ಶಾರೀರಿಕ ಕವಾಯತು, ನೃತ್ಯ, ಗೋಪುರ ರಚನೆ, ಘೋಷ್ ರಚನೆ ಹಾಗೂ ಮಲ್ಲಕಂಬ ಪ್ರದರ್ಶನ ಪ್ರೇಕ್ಷಕರ ನಮಸೂರೆಗೊಂಡವು. ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಸ್ಥೆ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಸಹಕಾರ್ಯದರ್ಶಿ ಈಶ್ವರ ಬಾಳಿ ವಾರ್ಷಿಕ ವರದಿ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಮಾಜಿ ತೊಗರಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಪ್ರಮುಖರಾದ ಶಿವಲಿಂಗಪ್ಪ ವಾಡೆದ, ಚೆನ್ನಣ್ಣ ಬಾಳಿ, ಗುರುನಾಥ ಗುದಗಲ್, ತಿಪ್ಪಣ್ಣ ವಗ್ಗರ್, ಸೂರ್ಯಕಾoತ ಕಾಳೆಕರ್, ಅಣ್ಣಾರಾವ ಬಾಳಿ, ಶರಣು ಜ್ಯೋತಿ, ಮೋಹನ ಸೂರೆ, ದತ್ತಾತ್ರೇಯ ಕಾಳೆಕರ್, ಪಿಡಿಓ ಕಾವೇರಿ ರಾಠೋಡ, ಉಷಾ ಬಾಳಿ ಸೇರಿದಂತೆ ಸಾವಿರಾರು ಪಾಲಕರು, ಮಕ್ಕಳು ಉಪಸ್ಥಿತರಿದ್ದರು.
ಸಂಸ್ಥೆಗೆ ಐವತ್ತು ಸಾವಿರ ದೇಣಿಗೆ: ರಾವೂರ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಇವತ್ತು ಸಮಾಜದಲ್ಲಿ ಗಣ್ಯವ್ಯಕ್ತಿಯಾಗಿ ಗುರುತಿಸಿಕೊಂಡಿರುವ ತೋನಸನಹಳ್ಳಿ ಗ್ರಾಮದ ಖ್ಯಾತ ಉದ್ದಿಮೆದಾರ ಮಹಾದೇವ ಬಂದಳ್ಳಿ, ತಮ್ಮ ತಾಯಿ ನೀಲಮ್ಮ ಶಾಂತಲಿಂಗಪ್ಪ ಬಂದಳ್ಳಿ ಅವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಸಂಸ್ಥೆಗೆ 50 ಸಾವಿರ ರೂ ಘೋಷಣೆ ಮಾಡಿದರು.
ಕಾರ್ಯಕ್ರಮವನ್ನು ಈರಣ್ಣ ಹಳ್ಳಿ ಪ್ರಾರ್ಥಿಸಿದರು, ಈಶ್ವರಗೌಡ ಪಾಟೀಲ್, ಭುವನೇಶ್ವರಿ ಎಂ, ಸುಗುಣಾ ಕೊಳಕೂರ, ವಿಜಯಲಕ್ಷ್ಮಿ ಬಮ್ಮನಳ್ಳಿ, ಸಿದ್ಧಾರೂಡ ಬಿರಾದಾರ ನಿರೂಪಿಸಿದರು. ಸಿದ್ದಲಿಂಗ ಜ್ಯೋತಿ ವಂದಿಸಿದರು.