ವಾಡಿ: ವಾರದಿಂದ ನೀರಿಲ್ಲದೆ ಜನರ ಪರದಾಟ

ಪಟ್ಟಣದ

ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಕೆಲವು ವಾರ್ಡ್ ಗಳಲ್ಲಿ ಸುಮಾರು 10 ದಿನಗಳಿಂದ ನೀರಿಲ್ಲದೆ ಜನರು ಹನಿ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ನಮ್ಮನ್ನು ಯಾಕೆ ಗೋಳಾಡಿಸುತ್ತಿದ್ದಿರಿ ಎಂದು ಅಳಲು ಹೇಳಲು ಪುರಸಭೆ ಕಛೇರಿಗೆ ಖಾಲಿ ಕೊಡ ತೆಗೆದುಕೊಂಡು ಮಹಿಳೆಯರೊಂದಿಗೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ ಅವರನ್ನು ಭೇಟಿಯಾಗಿ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಪಕ್ಕದಲ್ಲಿ ಎರಡು ನದಿಗಳಿದ್ದರೂ ಪುರಸಭೆ ಅನುದಾನದಲ್ಲಿ ಅನೇಕ ಬೋರವೆಲ್’ಗಳ ರಿಪೇರಿಗೊಳಿಸಿ, ಹೊಸ ಬೊರ್ವೆಲ್’ಗಳು ಹಾಕಿಸಿದ್ದೆವೆ ಎಂದು ಹೇಳುತ್ತಿರಿ ಅವು ಎಲ್ಲಿವೆ ? ಚಳಿಗಾಲದಲ್ಲೆ ಈ ರೀತಿ ಸಮಸ್ಯೆಯಾದರೆ ಮುಂದೆ ಬೆಸಿಗೆ ಕಾಲದಲ್ಲಿ ಏನು ಗತಿ ? ಎಂದರು…..ನೀರಿನ ಸಮಸ್ಯೆ ಮೋಟರ್ ರಿಪೇರಿ, ಪಂಪ್ ರಿಪೇರಿ, ವಿದ್ಯುತ್ ಸಮಸ್ಯೆಯಾದರೆ ಅದಕ್ಕೆ ಪರ್ಯಾಯವಾಗಿ 50 ಲಕ್ಷ ರೂ ವೆಚ್ಚದ ಪೈಪ್ ಲೈನ್ ವ್ಯವಸ್ಥೆ ಮಾಡಿದ್ದರೂ ಕೂಡ ಜನರಿಗೆ ಯಾಕೆ ತೊಂದರೆ ಕೊಡುತ್ತಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿಯ ಯಂಕಮ್ಮ ಗೌಡಗಾಂವ, ರಮೇಶ ಜಾಧವ, ಭರತ ರಾಠೋಡ ಮತ್ತು ವಾರ್ಡ್‌ ಸಂಖ್ಯೆ 2ರ ದೇವಲಿ ಬಾಯಿ ರಾಠೋಡ, ಲಕ್ಷ್ಮಿಬಾಯಿ ಕೋಲಿ, ಪಾರ್ವತಿ ಕೊಲಿ, ಅನಿತಾ ಗಂಟ್ಯಾಳ, ವಸಂತಾ ಮಾರಬಾಯಿ, ಜಾಹಿದಾಬೇಗಂ, ರುಕ್ಸಾನಾಬೇಗಂ, ಹರ್ಷಾ ಬೇಗಂ, ಮೈತಾಬಿ ಬೇಗಂ, ರಿಜ್ವಾನಾ ಬೇಗಂ, ಮಾಲನಬಿ ಬೇಗಂ, ಕಮಲಾ ರಾಠೋಡ, ನೀಲಮ್ಮ ಬನಸೋಡೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *