ಸೇಡಂ ದಸರಾ ಉತ್ಸವದಲ್ಲಿ ಇಂದು ನಟಿ ಸಿತಾರಾ

ಸುದ್ದಿ ಸಂಗ್ರಹ

ಸೇಡಂ: ಇಲ್ಲಿಯ ಪಂಚಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ 43ನೇ ವರ್ಷದ ದಸರಾ ಉತ್ಸವದಲ್ಲಿ ಅ. 10 ರಂದು ಗುರುವಾರ ಸಂಜೆ 7 ಕ್ಕೆ ಕಿರುತೆರೆ ಹಾಗೂ ಸಿನಿಮಾ ನಟಿ ಸಿತಾರಾ ಭಾಗವಹಿಸುವರು ಎಂದು ದೇವಾಲಯ ಕಮಿಟಿಯ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಹಳೆ ಬಜಾರದಲ್ಲಿರುವ ಐತಿಹಾಸಿಕ ಚಾಲುಕ್ಯ ಕಾಲದ ದೇವಾಲಯದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಪ್ರತಿಭಾನ್ವಿತ ನಟಿ ಸಿತಾರಾ ಅವರನ್ನು ಸತ್ಕರಿಸಲಾಗುವದು. 2005 ರಲ್ಲಿ ವಿಶ್ವವಿಖ್ಯಾತ ಹೆಗ್ಗೋಡಿನ ನೀನಾಸಂನಲ್ಲಿ ರಂಗ ತರಬೇತಿಯಾಗಿದ್ದು, 2011 ರಲ್ಲಿ ಡ್ಯಾನ್ಸ್ ವಿಭಾಗದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ನೀನಾಸಂ ತಿರುಗಾಟದಲ್ಲಿ 4 ವರ್ಷ ಅನುಭವ, ಎರಡು ವರ್ಷ ಡ್ಯಾನ್ಸ್ ವಿಭಾಗದಲ್ಲಿ ಕಾರ್ಪೋರೇಟ್ ಶೋಗಳನ್ನು ನೀಡಿದ್ದಾರೆ. 15 ಕಿರುಚಿತ್ರಗಳಲ್ಲಿ ನಟನೆ, 20 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ ಎಂದರು.‌

ಸಿತಾರಾ ಅವರು ಇದೂವರೆಗೆ 7 ಪ್ರಶಸ್ತಿಗಳು ಪಡೆದಿದ್ದಾರೆ, ಅವುಗಳಲ್ಲಿ ಜೀ ಕನ್ನಡ ಚಾನೆಲ್’ನಲ್ಲಿ ಎರಡು ಬಾರಿ ಬೆಸ್ಟ್ ಕಾಮಿಡಿಯನ್, ಉಡುಪಿ ರಂಗಭೂಮಿ ವತಿಯಿಂದ ಬೆಸ್ಟ್ ನಟಿ, ಇವಳೆ ವೀಣಾ ಪಾಣಿ ಎನ್ನುವ ಧಾರಾವಾಹಿಗೆ ಬೆಸ್ಟ್ ಆರ್ಟ್ ಡೈರೆಕ್ಟರ್, ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್ ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇಂತಹ ಪ್ರತಿಭಾವಂತ ಕಲಾವಿದೆ ಸಿತಾರಾ ಅವರನ್ನು ದಸರಾ ಉತ್ಸವದಲ್ಲಿ ಗೌರವಿಸಲಾಗುವದು ಎಂದು ತಿಳಿಸಿದ್ದಾರೆ.

ನಂತರ ಕಲಬುರಗಿಯ ಸುಕಿ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.

ಕಿರಣ್ ಪಾಟೀಲ, ಶರಣು ಪಟ್ಟಣಶೆಟ್ಟಿ, ಪ್ರಕಾಶ ದಂಡೋತಿ, ಕವಿರಾಜ್ ನಿಂಬಾಳ, ಮಹೇಶ ನಿಪ್ಪಾಣಿ ಹಾಗೂ ಸಿ.ಎಸ್ ಮಾಲಿಪಾಟೀಲ ಅವರು ‘ಗಾನ ಸುಧೆ’ ಕಾರ್ಯಕ್ರಮ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *