ಸುದ್ದಿ ಸಂಗ್ರಹ ಶಹಾಬಾದ
ಪಟ್ಟಣದ ಎಸ್’ಎಸ್ ಮರಗೋಳ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಂಪಮ್ಮ ಹಿರೇಮಠ ಮಹಿಳೆಯರ ದೂರು ಪೆಟ್ಟಿಗೆ ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಡಾ.ಬಸವರಾಜ್ ಹಿರೇಮಠ, ಡಾ.ಸುರೇಖಾ ನಾಟೆಕರ್, ಡಾ.ಹಣಮಂತ ಸೇಡಂಕರ್, ಡಾ.ಗಂಗಾಧರ್ ಸ್ಥಾವರ ಮಠ, ಡಾ.ಕಾವೇರಿ, ಡಾ.ನಾಗರಾಜ ದೇವತಕಲ್, ಡಾ.ಲಕ್ಷ್ಮಣ ರಾಠೋಡ , ಪ್ರಮುಖರಾದ ಲಾಲಿತ, ಶಿವುಶಂಕರ್ ಹಿರೇಮಠ ಸೇರಿದಂತೆ ಬೋಧಕ ಬೋಧಕ್ಕೆತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.