ವಾಡಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಬಿಜೆಪಿ ಮುಖಂಡರು ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿದ ಅವರು, ಕೇವಲ ಒಂದು ದಿನ ಪರಿಸರ ದಿನಾಚರಣೆ ಮಾಡಿದರೆ ಸಾಲದು. ವರ್ಷಪೂರ್ತಿ ಪರಿಸರ ದಿನಾಚರಣೆ ನಡೆಸಬೇಕಾಗಿದೆ ಎಂದರು.
ಅರಣ್ಯ ನಾಶದಿಂದ ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ, ಕುಡಿಯುವ ನೀರಿಗೂ ಪರಿತಪಿಸಬೇಕಾದ ದಿನಗಳು ಎದುರಾಗುತ್ತಿವೆ. ಗಿಡಮರಗಳನ್ನು ಕಡಿದು ಕಾಡನ್ನು ಬರಿದಾಗಿಸುತ್ತಿರುವುದರಿಂದ ಮಳೆ ಕೊರತೆಯಾಗಿದೆ ಪರಿಸರ ಸಂರಕ್ಷಣೆ ಹಾಗೂ ಉತ್ತಮ ಮಳೆಗಾಗಿ ಪ್ರತಿದಿನವೂ ಸಸಿ ನೆಟ್ಟು ಅವುಗಳನ್ನು ಬೆಳೆಸಲು ಪಣತೊಡಬೇಕು. ಪರಿಸರವನ್ನು ಸಂರಕ್ಷಿಸಿ, ನೆಲ-ಜಲವನ್ನು ಉಳಿಸುವುದು ಅನಿವಾರ್ಯವಾಗಿದೆ ಎಂದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರವನ್ನು ಇಂದು ನಾವು ಉಳಿಸಿದರೆ ಮುಂದಿನ ಪೀಳಿಗೆ ಸುಖವಾಗಿರಬಹುದು. ಮರಗಳನ್ನು ಕಡಿಯುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಏರುಪೇರಾಗುತ್ತಿದೆ.
ನಮ್ಮ ಆರೋಗ್ಯದ ಮೇಲು ಗಂಭೀರ ಪರಿಣಾಮ ಉಂಟಾಗತ್ತಿರುವುದರಿಂದ ಪ್ರತಿ ಮನೆ ಹಾಗೂ ವಾರ್ಡ್ ಮಟ್ಟದಲ್ಲಿ ಗಿಡನೇಡುವ ಕಾರ್ಯ ನಮ್ಮ ಪಕ್ಷದ ಕಾರ್ಯಕರ್ತರಿಂದ ನಡೆಯಲಿದೆ ಎಂದರು.
ಈ ಸಂಧರ್ಭದಲ್ಲಿ ಮುಖಂಡರಾದ ಕಿಶನ ಜಾಧವ, ಪ್ರಕಾಶ ಪುಜಾರಿ, ಮಲ್ಲಿಕಾರ್ಜುನ ಸಾತಖೇಡ,ಮಲ್ಲಿಕಾರ್ಜುನ ಆಣಿಕೇರಿ,ಗುಂಡುಗೌಡ ಚಾಮನೂರ, ರಾಜಶೇಖರ ಧೂಪದ್,ದತ್ತಾತ್ರೇಯ ಗೌಡಗಾಂವ ಹಾಗೂ ಆಸ್ಪತ್ರೆಯ ಡಾ ಕಿರಣ ಅವರಾದ್,ಸಿಬ್ಬಂದಿಗಳಾದ ಲಕ್ಷ್ಮಣ ಚವ್ಹಾಣ, ರಾಜು ಕೊಲ್ಲೂರ,ಪಾಡುರಂಗ, ಮಹಾದೇವ ಸೇರಿದಂತೆ ಅನೇಕರು ಇದ್ದರು.