ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣೆಯಲ್ಲಿ ಜೂಜಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಪೊಲೀಸ್ ಠಾಣೆಯೊಳಗೆ ಜೂಜಾಟದಲ್ಲಿ ತೊಡಗಿದ್ದ ಎಎಸ್ಐ ಮಹಿಮೂದ್’ಮಿಯಾ, ಹೆಡ್ ಕಾನ್ಸ್ಟೇಬಲ್ಗಳಾದ ನಾಗರಾಜ, ಸಾಯಿಬಣ್ಣಾ, ಇಮಾಮ್, ಕಾನ್ಸ್ಟೇಬಲ್ ನಾಗಭೂಷಣ ಅವರನ್ನು ಅಮಾನತುಗೊಳಿಸಿ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಆದೇಶ ಹೊರಡಿಸಿದ್ದಾರೆ.
ಜೊತೆಗೆ ವಾಡಿ ಠಾಣೆಯ ಪಿಎಸ್ಐ ತಿರುಮಲೇಶ್ ಅವರಿಗೂ ನೋಟಿಸ್ ಜಾರಿ ಮಾಡಿದ್ದು, ಕಾರಣ ನೀಡುವಂತೆ ಎಸ್ಪಿ ಕೇಳಿದ್ದಾರೆ.