ನಟಿ ರನ್ಯಾರಾವ ಮನೆಯಲ್ಲಿ ಅತಿ ದೊಡ್ಡ ಕಾರ್ಯಾಚರಣೆ

ರಾಜ್ಯ

ಬೆಂಗಳೂರು: ನಟಿ ರನ್ಯಾರಾವ ಮನೆ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ(DRI) ದಾಳಿ ನಡೆಸಿ 17.29 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ.

ದಾಳಿಯ ಸಂದರ್ಭದಲ್ಲಿ 2.67 ಕೋಟಿ ರೂ. ನಗದು ಮತ್ತು 2.06 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 17.29 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ, ಇದೊಂದು ಅತಿ ದೊಡ್ಡ ಕಾರ್ಯಾಚರಣೆ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.

ಖೈದಿ ನಂ 2198
14.2 ಕೆಜಿ ಚಿನ್ನ ಕಳ್ಳಸಾಗಾಟದಲ್ಲಿ ಜೈಲು ಸೇರಿದ್ದ ನಟಿ ರನ್ಯಾರಾವಗೆ ಜೈಲಾಧಿಕಾರಿಗಳು ವಿಚಾರಣಾಧೀನ ಖೈದಿ ಸಂಖ್ಯೆ ನೀಡಿದ್ದಾರೆ.

ಮಂಗಳವಾರ 14 ದಿನಗಳ ಕಾಲ ಮಾರ್ಚ್ 18ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ನೀಡಿದ್ದರು. ಕಳೆದ ರಾತ್ರಿಯೇ ರನ್ಯಾರಾವ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಬಿಡಲಾಗಿತ್ತು.

ಇಂದು ವಿಚಾರಣಾಧೀನ ಕೈದಿ ನಂಬರ್ ನೀಡಿರುವ ಜೈಲಾಧಿಕಾರಿಗಳು ಇನ್ಮುಂದೆ ನಟಿ ರನ್ಯಾ ಜೈಲಿನಲ್ಲಿ ಇರುವವರೆಗೂ ಇದೆ 2198 /25 ಎಂದೆ ಕರೆಯಲಾಗುತ್ತದೆ.

Leave a Reply

Your email address will not be published. Required fields are marked *