ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 128ನೇ ಜನ್ಮದಿನಾಚರಣೆ

ಜಿಲ್ಲೆ

ಚಿತ್ತಾಪುರ: ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ದಿನಾಚರಣೆಯನ್ನು ಇಂದು ಮಹಾತ್ಮಾ ಗಾಂಧೀಜಿ ಪ್ರೌಢಶಾಲೆ AIDSO ವಿದ್ಯಾರ್ಥಿ ಸಂಘಟನೆಯಿಂದ ಆಚರಿಸಲಾಯಿತು.

AIDSO ಜಿಲ್ಲಾ ಸಮಿತಿ ಸದಸ್ಯ ದೇವರಾಜ ರಾಜೋಳಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಮಕ್ಕಳು ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ನೇತಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳುವದು ಬಹಳ ಅವಶ್ಯಕ. ಮಕ್ಕಳು ಮೊಬೈಲ್’ಗಳಿಂದ ಹೊರ ಬರಬೇಕು. ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳುವುದು ಉತ್ತಮ. ಮಕ್ಕಳನ್ನು ಸಾಂಸ್ಕೃತಿಕ, ನೈತಿಕವಾಗಿ ಸಾಗಲು ನಮ್ಮ AIDSO ವಿದ್ಯಾರ್ಥಿ ಸಂಘಟನೆ ಸದಾಕಾಲವೂ ಕಾರ್ಯಪ್ರವೃತ್ತರಾಗಿದೆ ಎಂದರು.

ಮುಖ್ಯ ಭಾಷಣಕಾರ AIDSO ರಾಜ್ಯ ಉಪಾಧ್ಯಕ್ಷ ಹಣಮಂತ ಎಸ್.ಎಚ್ ಮಾತನಾಡಿ, ಇವತ್ತು ನಮ್ಮನ್ನು ಆಳುತ್ತಿರುವ ಪಕ್ಷಗಳು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿಕರಣ ಮಾಡುತ್ತಿವೆ. 4 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆದಿದೆ. ಬಡ ಮಕ್ಕಳಿಗೆ ಶಿಕ್ಷಣ ದೂರಗೊಳ್ಳುತ್ತಿದೆ, ಮತ್ತೊಂದೆಡೆ ರೈತ ಕಾರ್ಮಿಕರ ವಿರೋಧಿ ನೀತಿಗಳನ್ನು ತಂದು ರೈತ ಕಾರ್ಮಿಕರನ್ನು ಸಂಕಷ್ಟದಲ್ಲಿ ಇರಿಸಿದೆ. ಇವತ್ತು ಶಿಕ್ಷಣದಲ್ಲಿ ಕೋಮುವಾದಿ ಜಾತಿ, ಧರ್ಮ ವಿಷಯಗಳನ್ನು ಹರಡಿಬಿಡುತ್ತಿದೆ. ಇನ್ನೊಂದೆಡೆ ಸಮಾಜದಲ್ಲಿ ಕುಸಿಯುತ್ತಿರುವ ನೈತಿಕ ಮೌಲ್ಯಗಳ ಕೊರತೆ ವಿದ್ಯಾರ್ಥಿ ಯುವಕರನ್ನು ನೈಜ ವಿಷಯಗಳಿಂದ ದಾರಿ ತಪ್ಪಿಸುತ್ತಿವೆ. ಇದರಿಂದ ಪ್ರತಿದಿನ ವಯಸ್ಸಿನ ಮಿತಿ ಇಲ್ಲದೆ ಸಣ್ಣ ಮಕ್ಕಳಿಂದ ವೃದ್ಧರವರೆಗೆ ಅತ್ಯಾಚಾರ ದೌರ್ಜನ್ಯ ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರ ಇಂತಹ ಮಹಾನ್ ವ್ಯಕ್ತಿಗಳು ಸಂಘರ್ಷ ಭರಿತ ಜೀವನ ಹಾಗೂ ವಿಚಾರಗಳ ಅವಶ್ಯಕತೆ ಇದೆ ಎಂದರು.

ಮಹಾತ್ಮಾ ಗಾಂಧೀಜಿ ಪ್ರೌಢ ಶಾಲೆಯ ಮುಖ್ಯಗುರು ಮಹೇಶಬಾಬು ಎಂ ಬಟಗೇರಿ ಮಾತನಾಡಿ, ವಿದ್ಯಾರ್ಥಿಗಳ ಮದ್ಯೆ ಇಂತಹ ಮಹಾನ್ ವ್ಯಕ್ತಿಗಳ ಕಾರ್ಯಕ್ರಮ ತೆಗೆದುಕೊಂಡು ಹೋಗುವುದು ಬಹಳ ಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಖಜಾಂಚಿ ವೆಂಕಟೇಶ ದೇವದುರ್ಗ, ಉಪಾಧ್ಯಕ್ಷ ಗೋವಿಂದ ಹೆಳವರ, ಶಿಕ್ಷಕ ರಂಗನಾಥ ದೊರೆ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಯುವಜನರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *