ಜೀವ ಸಂಕುಲದ ಉಳಿವಿಗೆ ಉತ್ತಮ ಹವಾಮಾನ ಅಗತ್ಯ

ಜಿಲ್ಲೆ

ಕಲಬುರಗಿ: ಯಾವುದೆ ಜೀವಿಯು ಜನಿಸಿ, ಬೆಳವಣಿಗೆ ಹೊಂದಿ, ತನ್ನ ಜೀವನ ಸಾಗಿಸಬೇಕಾದರೆ ನಿಸರ್ಗ, ಹವಾಮಾನ ಅತ್ಯಂತ ಅವಶ್ಯಕವಾಗಿದೆ. ಉತ್ತಮವಾದ ನಿಸರ್ಗ, ಪರಿಸರವಿದ್ದರೆ ಎಲ್ಲಾ ಜೀವರಾಶಿಗಳು ಸದೃಢವಾಗಿ, ದೀರ್ಘಕಾಲ ಜೀವಿಸಲು ಸಾಧ್ಯವಾಗಿದೆ. ನಿಸರ್ಗದಲ್ಲಿ ಏನಾದರೂ ಏರುಪೇರಾದರೆ, ಎಲ್ಲಾ ಜೀವರಾಶಿಗಳಿಗೂ ತೊಂದರೆಯಿದ್ದು, ನಿಸರ್ಗವನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಮಹಾದೇವ ನಗರದಲ್ಲಿರುವ ಸ್ವಾತಿ ಪ್ರೌಢಶಾಲೆ ಮತ್ತು ಶಿವಾ ವಿದ್ಯಾ ಮಂದಿರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ಹವಾಮಾನ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ನೈಸರ್ಗಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳಿಂದ ಸಂಪತ್ಬರಿತ ರಾಷ್ಟ್ರವಾಗಿದೆ. ನಮ್ಮ ದೇಶದಲ್ಲಿ 45,000 ಸಸ್ಯ ಪ್ರಬೇಧಗಳಿದ್ದು, 15,000 ಹೂ ಬಿಡುವ ಸಸ್ಯಗಳು, 1676 ಪಾಚಿ, 1940 ಕಲ್ಲು ಹೂಗಳು, 12,480 ಅಣಬೆ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸಸ್ಯರಾಶಿ ಇದೆ. ಒಟ್ಟು 81,000 ಪ್ರಾಣಿ ಪ್ರಬೇಧಗಳಲ್ಲಿ, 372 ಸಸ್ತನಿಗಳು, 1228 ಪಕ್ಷಿ ಸಂಕುಲ, 428 ಸರಿಸೃಪಗಳು, 204 ಉಭಯ ಜೀವಿಗಳು, 2546 ಮೀನು 57525 ಕೀಟಗಳು ಮತ್ತು ಅನೇಕ ಅಕಶೇರಕಗಳನ್ನು ಹೊಂದಿರುವ ಅತ್ಯಂತ ನೈಸರ್ಗಿಕ ಸಂಪತ್ಬರಿತ ರಾಷ್ಟ್ರ ನಮ್ಮದಾಗಿದೆ ಎಂದರು.

ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಮಾನವ ನಿಸರ್ಗದ ಮೇಲೆ ಸವಾರಿ ಮಾಡಲು ಹೊರಟಿದ್ದಾನೆ. ಇದರಿಂದ ಅನೇಕ ಸಸ್ಯ ಮತ್ತು ಪ್ರಾಣಿಗಳು ನಾಶಹೊಂದಿವೆ ಮತ್ತು ಇನ್ನೂ ಕೆಲವು ಅಳವಿನಂಚಿನಲ್ಲಿವೆ. ಅಧೀಕ ಪ್ರಮಾಣದ ಕಾರ್ಬನ ಡೈಆಕ್ಸೆöÊಡ ವಾತಾವರಣೆಕ್ಕೆ ಸೇರಿ, ಜಾಗತೀಕ ತಾಪಮಾನ ಉಂಟಾಗುತ್ತಿದೆ. ಅರಣ್ಯಗಳು ನಾಶಹೊಂದಿತ್ತಿವೆ. ಹೀಗೆ ಅನೇಕ ಕಾರಣಗಳಿಂದ ಪರಿಸರವು ಅಸಮತೋಲನಾವಾಗುತ್ತಿದೆ. ಇದರಿಂದ ಸೂಕ್ತ ಕಾಲಕ್ಕೆ ಮಳೆ ಬೆಳೆಯಾಗದೇ ರೈತರು ಸಂಕಷ್ಟಕ್ಕಿಡಾಗಿದ್ದಾರೆಂದು ನುಡಿದರು.

ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿ, ನಮ್ಮ ಮನೆ ಸುತ್ತಮುತ್ತಲು ಗಿಡಮರಗಳನ್ನು ನೆಟ್ಟು ಪೋಷಿಸಬೇಕು. ಸಸ್ಯ ಮತ್ತು ಪ್ರಾಣಿ ಸಂಪತ್ತು ನಾಶಮಾಡಬಾರದು. ಪರಿಸರ ರಕ್ಷಣೆ ಅರಿವು ಪ್ರತಿಯೊಬ್ಬರಲ್ಲಿ ಮೂಡಬೇಕು. ಉತ್ತಮವಾದ ಹವಮಾನ ಅಗತ್ಯವಾಗಿದೆ ಎಂದರು.

ಕಾರ್ಯಕ್ರದಮಲ್ಲಿ ಕರಾವಿಪ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಿ.ಗಾರಂಪಳ್ಳಿ, ಶಿಕ್ಷಕರಾದ ಚಂದ್ರಲೇಖಾ ಪೂರ್ಮಕರ್, ಕಾಶಮ್ಮ ಎಸ್.ಚಿಂಚೋಳಿ, ರೋಹಿತ್ ಸಿ.ವೈ., ಖಮರುನ್ನಿಸ್ ಬೇಗಂ, ಶಿಲ್ಪಾ ಎಸ್.ಕೆ., ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *