ವಿಶ್ವದಲ್ಲಿಯೇ ಭಾರತ ಸಂವಿಧಾನ ಸರ್ವಶ್ರೇಷ್ಠ ಸಂವಿಧಾನ: ಸತ್ಯಬ್ರತ್ ಶರ್ಮಾ

ತಾಲೂಕು

ಚಿತ್ತಾಪುರ: ವಿಶ್ವದಲ್ಲಿಯೇ ಭಾರತ ಸಂವಿಧಾನ ಸರ್ವಶ್ರೇಷ್ಠ ಸಂವಿಧಾನ ಹೀಗಾಗಿ ಸಂವಿಧಾನಕ್ಕೆ ಸರ್ವರು ಗೌರವಿಸಬೇಕು ಎಂದು ಓರಿಯಂಟ್ ಸಿಮೆಂಟ್ ಕಂಪನಿ ಮುಖ್ಯಸ್ಥ ಸತ್ಯಬ್ರತ್ ಶರ್ಮಾ ಹೇಳಿದರು.

ತಾಲೂಕಿನ ದಿಗ್ಗಾಂವ ಗ್ರಾಮದ ಡಿಎವಿ ಓರಿಯಂಟ್ ಜ್ಞಾನ ಮಂದಿರ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2015 ರಲ್ಲಿ ವಿಶ್ವಸಂಸ್ಥೆಯು 17 ಸುಸ್ಥಿರ ಅಭಿವೃದ್ಧಿ ಗುರಿಗಳು ರಚಿಸಿತು. 2030ರ ವೇಳೆಗೆ ಅವುಗಳನ್ನು ಸಾಧಿಸುವ ಗುರಿ ಹೊಂದಿದೆ ಎಂದರು.

ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.‌

ನರ್ಸರಿ, ಎಲ್’ಕೆಜಿ, ಯುಕೆಜಿ, ಒಂದನೇ, ಎರಡನೇ ತರಗತಿಯ ವಿದ್ಯಾರ್ಥಿಗಳಿಂದ ವಿವಿಧತೆಯಲ್ಲಿ ಏಕತೆ ಕುರಿತು ಎಲ್ಲಾ ರಾಜ್ಯಗಳ ವೇಷಭೂಷಣ ಪ್ರದರ್ಶಿಸಿದರು.

ಒಂಬತ್ತನೇ ತರಗತಿ ವಿದ್ಯಾರ್ಥಿ ಅಫರಾಜ್ ಸ್ವಾಮಿ ವಿವೇಕಾನಂದರ ಅಮೇರಿಕಾದ ಭಾಷಣವನ್ನು ಪ್ರಸ್ತುತ ಪಡಿಸಿದನು. ಯೋಗಾಸನದ ಮಹತ್ವವನ್ನು ವಿದ್ಯಾರ್ಥಿಗಳು ಮೈನವಿರೇಳುವ ರೀತಿಯಲ್ಲಿ ಯೋಗ ಮಾಡುವುದರ ಮೂಲಕ ತಿಳಿಸಿದರು.

ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಂದ ವಿವಿಧ ಭಾಷೆಯಲ್ಲಿ ವಿವಿಧ ದೇಶಭಕ್ತಿ ಗೀತೆಗಳನ್ನು ವಿವಿಧ ಸಂಗೀತ ವಾದ್ಯಗಳ ಮೂಲಕ ಇಂಪಾಗಿ ನುಡಿಸಿದರು.

ಏಳನೇ ತರಗತಿ ವಿದ್ಯಾರ್ಥಿನಿ ಕುಮಾರಿ ಪ್ರಗತಿ ರೇಷ್ಮೆ ಭಾಷಣ ಮಾಡಿದಳು. ಡಿಎವಿ ಶಾಲೆಯ ವಿದ್ಯಾರ್ಥಿಗಳು ಮತ್ತು ಓರಿಯಂಟ್ ಕಾರ್ಖಾನೆಯ ಸೆಕ್ಯೂರಿಟಿಗಳು ಪಥಸಂಚಲನ ಪದರ್ಶಿಸಿದರು.

ಹತ್ತನೇ ತರಗತಿಯ 2023-24ನೇ ಸಾಲಿನ ಶೈಕ್ಷಣಿಕ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದ ಕು. ವಿಜಯಲಕ್ಷ್ಮಿ, ದ್ವಿತೀಯ ಸ್ಥಾನ ಪಡೆದ ಕು. ಸ್ನೇಹ ಮತ್ತು ತೃತೀಯ ಸ್ಥಾನ ಪಡೆದ ಕು. ಅನುಷ್ಕಾ ಇವರನ್ನು ಸನ್ಮಾನಿಸಲಾಯಿತು.

ಶಿಕ್ಷಕರ ತರಬೇತುದಾರರಾಗಿ ಆಯ್ಕೆಯಾದ ಸುಭಾಷ ರೆಡ್ಡಿ, ಸಂಜಯ್ ಕುಮಾರ್ ಮತ್ತು ಅನೀತಾ ರೆಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹತ್ತನೇ ತರಗತಿಯಲ್ಲಿ ನೂರಕ್ಕೆ ನೂರು ಅಂಕ ತರಲು ಶ್ರಮಿಸಿದ ಸಮಾಜ ವಿಜ್ಞಾನ ಶಿಕ್ಷಕ ಪವನಕುಮಾರ ಅವರನ್ನು ಸನ್ಮಾನಿಸಲಾಯಿತು.

ಶಾಲೆಯ ಪ್ರಾಂಶುಪಾಲರಾದ ಜಿ ಜ್ಯೋತಿ ವಂದನಾರ್ಪಣಿ ಮಾಡಿದರು.

ಕಾರ್ಯಕ್ರಮದಲ್ಲಿ ಓರಿಯಂಟ್ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಸ್ಥ ಸಜ್ಜಿಕುಮಾರ, ಶಾಲೆಯ ಪ್ರಾಚಾರ್ಯ ಜಿ.ಜ್ಯೋತಿ ಸೇರಿದಂತೆ ಹಲವು ವಿಭಾಗದ ಮುಖ್ಯಸ್ಥರು, ಪಾಲಕರು, ಪೋಷಕರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *