ಕಿತ್ತೂರ ರಾಣಿ ಚನ್ನಮ್ಮ ಕೊಡುಗೆ ಅವಿಸ್ಮರಣೀಯ

ಕಲಬುರಗಿ: ದೇಶದ ಪ್ರಥಮ ಸ್ವಾತಂತ್ರ ಹೋರಾಟಗಾರ್ತಿಯಾಗಿ ಬಲಿದಾನವಾದ ವೀರ ಮಹಿಳೆ ಕಿತ್ತೂರ ರಾಣಿ ಚನ್ನಮ್ಮ ಶೂರ, ತ್ಯಾಗ, ಸ್ವಾಭಿಮಾನ, ದೇಶಪ್ರೇಮ, ಕೊಡುಗೆ ಅವಿಸ್ಮರಣೀಯ ಎಂದು ಶಿಕ್ಷಕಿ ಪೂಜಾ ಜಮಾದಾರ ಹೇಳಿದರು. ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿರುವ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ವೀರಮಾತೆ ಕಿತ್ತೂರ ರಾಣಿ ಚನ್ನಮ್ಮರ 196ನೇ ಪುಣ್ಯಸ್ಮರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ ದೊರೆಕಿಸಿಕೊಡುವಲ್ಲಿ, ಸಾಮಾಜಿಕ […]

Continue Reading

Google Pay, PhonePe ಬಳಕೆದಾರರಿಗೆ ಬಿಗ್ ಶಾಕ್: ಇನ್ಮುಂದೆ UPI ಗೂ ಶುಲ್ಕ ಪಾವತಿಸಬೇಕಂತೆ

ಇಂದಿನ ಅತ್ಯಾಧುನಿಕ ಯುಗದಲ್ಲಿ ಫೋನ್ ಪೇ ಸೇರಿದಂತೆ ಎಲ್ಲಾ ರೀತಿಯ ಪೇಗಳಲ್ಲಿ (Digital Pay) ಬಳಸುವ UPI (Unified Payments Interface) ಗೂ ಕೂಡ ಇನ್ನುಮುಂದೆ ಕಮರ್ಷಿಯಲ್ ಆಗಲಿದೆ, ಎಲ್ಲಿಯಾದರೂ ಪೇ ಮಾಡಬೇಕಾದರೆ ಶುಲ್ಕ ವಿಧಿಸಲಿದೆ ಎಂದು ವರದಿಯಾಗಿದೆ. ಪೋನ್‌ನಂತೆ ಯುಪಿಐ ಕೂಡ ನಮ್ಮ ಜೀವನದಅಂಗವಾಗಿದೆ. ಒಬ್ಬ ವ್ಯಕ್ತಿಯ ದೈನಂದಿನ ವಹಿವಾಟಿನ ಶೇ.60 ರಿಂದ 80ರಷ್ಟು ಯುಪಿಐ ಮೂಲಕ ಪಾವತಿ ಮಾಡುತ್ತಾನೆ. ಭಾರತದಲ್ಲಿ ಪ್ರತಿದಿನ ಕೋಟ್ಯಾಂತರ ಯುಪಿಐ ವಹಿವಾಟುಗಳು ನಡೆಯುತ್ತವೆ. Paytm, Google Pay ಮತ್ತು PhonePe […]

Continue Reading

ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸಾಮಾಜಿಕ ನ್ಯಾಯ ಅಗತ್ಯ

ಕಲಬುರಗಿ: ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಾನವಾದ ಅವಕಾಶ ಒದಗಿಸಿಕೊಡುವ ಪರಿಕಲ್ಪನೆಯೇ ಸಾಮಾಜಿಕ ನ್ಯಾಯವಾಗಿದ್ದು, ಇದರಿಂದ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆ ಎಂದು ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ ಪಾಟೀಲ ಹೇಳಿದರು. ನಗರದ ಗಂಗಾ ನಗರದಲ್ಲಿರುವ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ ‘ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು.‌ ಜಾತಿ, ಧರ್ಮ, ಭಾಷೆ, ಪ್ರಾಂತ್ಯ, […]

Continue Reading

10 ವರ್ಷ ಜೈಲು, 5 ಲಕ್ಷ ದಂಡ: ಲೇವಾದೇವಿದಾರರ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಅನುಮೋದನೆ

ಬೆಂಗಳೂರು: ಲೇವಾದೇವಿದಾರರ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅಧಿವೇಶನದಲ್ಲಿ ತಿದ್ದುಪಡಿ ವಿಧೇಯಕ ಮಂಡನೆಗೆ ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಇನ್ನುಮುಂದೆ ಮಿತಿಮೀರಿ ಬಡ್ಡಿ ವಿಧಿಸುವ ಲೇವಾದೇವಿಗಾರರು, ಪಾನ್ ಬ್ರೋಕರ್ಸ್, ಯಾವುದೆ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ತಿದ್ದುಪಡಿ ತರುವ ಕರ್ನಾಟಕ ಅಧಿಕ ಬಡ್ಡಿ ನಿಷೇಧ (ತಿದ್ದುಪಡಿ) ವಿಧೇಯಕ – 2025ಕ್ಕೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಮಾರ್ಚ್ 3 ರಿಂದ‌ ಆರಂಭವಾಗುವ ಅದಿವೇಶನದಲ್ಲಿ‌ ಈ ಬಾರಿ ತಿದ್ದುಪಡಿ ವಿಧೇಯಕ‌ ಮಂಡನೆಗೆ ತೀರ್ಮಾನಿಸಲಾಗಿದೆ. ಮಿತಿ […]

Continue Reading

ಇನ್ನುಮುಂದೆ 10 ನಿಮಿಷದಲ್ಲಿ ಮುಗಿಯುತ್ತೆ ಜಮೀನು ಸರ್ವೆ

ಬೆಂಗಳೂರು: ಜಮೀನು ಸರ್ವೆ ಮಾಡುವ ವಿಧಾನದಲ್ಲಿ ಕಂದಾಯ ಇಲಾಖೆಯು ಐತಿಹಾಸಿಕ ಬದಲಾವಣೆ ತಂದಿದೆ. ದಶಕಗಳಿಂದ ಚಾಲ್ತಿಯಲ್ಲಿದ್ದ ಚೈನ್ ಹಿಡಿದು ಜಮೀನು ಅಳತೆ ಮಾಡುವ ಪದ್ಧತಿಗೆ ಗುಡ್‌ಬೈ ಹೇಳಿದೆ. ಚೈನ್‌ ಬದಲಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್‌ ಭೂ ಮಾಪಕರಿಗೆ ವಿತರಿಸಿದೆ. ಸರ್ವೆ ಆಯುಕ್ತರ ಕಚೇರಿಯಲ್ಲಿ ಫೆ.20 ರಂದು ಗುರುವಾರ ನಡೆದ ಕಾರ್ಯಕ್ರಮದಲ್ಲಿ 465 ಭೂ ಮಾಪಕರಿಗೆ ಈ ಆಧುನಿಕ ತಂತ್ರಜ್ಞಾನವುಳ್ಳ ರೋವರ್ ಅನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ವಿತರಿಸಿದರು. ಸರ್ವೆ ಕೆಲಸವನ್ನು ಮೊದಲಿನಿಂದಲೂ ಚೈನ್ ಹಿಡಿದು ಭೂಮಿ […]

Continue Reading

ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿ ಮಾತ್ರೆ ಕೇಳಿದ ಸೊಸೆ

ಬೆಂಗಳೂರು: ಅತ್ತೆಯನ್ನು ತಾಯಿ ಸ್ಥಾನದಲ್ಲಿ ನೋಡುತ್ತಾರೆ. ಆದರೆ ನಗರದಲ್ಲಿ ಅತ್ತೆಯನ್ನು ಕೊಲ್ಲಲು ಸೊಸೆ ವೈದ್ಯರ ಬಳಿ ಮಾತ್ರೆ ಕೇಳಿದ ಘಟನೆ ನಡೆದಿದೆ. ಡಾಕ್ಟರ್ ಒಬ್ಬರಿಗೆ ನನ್ನ ಅತ್ತೆಯನ್ನು ಸಾಯಿಸಲು ಮಾತ್ರೆ ಬರೆದುಕೊಡಿ ಎಂದು ಕೇಳಿದ್ದು, ಡಾಕ್ಟರ್ ಒಂದು ಕ್ಷಣ ಶಾಕ್ ಆಗಿದ್ದಾರೆ. ಅತ್ತೆ ಜೊತೆಗಿನ ಜಗಳಕ್ಕೆ ರೋಸಿ ಹೋದ ಸೊಸೆಯೊಬ್ಬರು, ಅತ್ತೆಯನ್ನು ಕೊಲ್ಲುವ ಪ್ಲ್ಯಾನ್‌ ಮಾಡಿದ್ದಾರೆ. ಬಳಿಕ ಡಾಕ್ಟರ್ ಸುನೀಲಕುಮಾರ ಎನ್ನುವವರಿಗೆ ವಾಟ್ಸಾಪ್‌ನಲ್ಲಿ ಸಂಪರ್ಕಿಸಿದ್ದಾರೆ. ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರಿಗೆ ವಯಸ್ಸಾಗಿದೆ. ಅವರನ್ನು ಹೇಗೆ ಸಾಯಿಸೋದು […]

Continue Reading

ಅನ್ನಭಾಗ್ಯ ಯೋಜನೆ ಅಡಿ ಇನ್ಮುಂದೆ ಹಣದ ಬದಲು 10 ಕೆಜಿ ಅಕ್ಕಿ: ಸಚಿವ ಮುನಿಯಪ್ಪ

ಬೆಂಗಳೂರು: ಅನ್ನಭಾಗ್ಯ ಯೋಜನೆ ಅಡಿ ಇನ್ನು ಮುಂದೆ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ಸಿಗಲಿದೆ. ಇಷ್ಟು ದಿನ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿ ಬದಲಿಗೆ 170 ರೂ. ಕೊಡ್ತಿದ್ದ ಸರ್ಕಾರ ಇನ್ನು ಮುಂದೆ ಹಣದ ಬದಲಾಗಿ 10 ಕೆಜಿ ಅಕ್ಕಿಯೇ ನೀಡಲಿದೆ ಅಂತ ಆಹಾರ ಸಚಿವ ಮುನಿಯಪ್ಪ ತಿಳಿಸಿದ್ದಾರೆ. ಈ ತಿಂಗಳಿಂದಲೇ 10 ಕೆಜಿ ಅಕ್ಕಿ ಹಂಚಿಕೆಯಾಗಲಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಇಷ್ಟು ದಿನ ಕೇಂದ್ರ ಸರ್ಕಾರ ಅಕ್ಕಿ […]

Continue Reading

ಇಂಜಿನಿಯರ್ ನೇಮಕಾತಿ ಆಕ್ರಮ: ಎಐಡಿವೈಒ ಖಂಡನೆ

ಸುದ್ದಿ ಸಂಗ್ರಹ ಶಹಾಬಾದ ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ 24 ನೇಮಕಾತಿಯಲ್ಲಿ 10 ಅಭ್ಯರ್ಥಿಗಳ ನೇಮಕಾತಿ ನಡೆಸಿರುವದು ಭಾರಿ ಅಕ್ರಮ ಇದನ್ನು ಎಐಡಿವೈಓ ತೀವ್ರವಾಗಿ ಖಂಡಿಸುತ್ತದೆ ಎಂದು ಎಐಡಿವೈಒ ಶಹಾಬಾದ ಕಾರ್ಯದರ್ಶಿ ರಮೇಶ ದೇವಕರ್ಹೇಳಿದ್ದಾರೆ.‌ 24 ಹುದ್ದೆಗಳ ನೇಮಕಾತಿಯಲ್ಲಿ 2023 ಜುಲೈ 1 ಮತ್ತು 2ರಂದು ಪರೀಕ್ಷೆ ನಡಸಿ ಸೆಪ್ಟೆಂಬರ್ ತಿಂಗಳಲ್ಲಿ ಫಲಿತಾಂಶಪ್ರಕಟಿಸಲಾಗಿತ್ತು. ಈ ಕುರಿತು ಅನೇಕ ದೂರು ಬಂದಿದ್ದರಿಂದ ಕೆಪಿಎಸ್‌ಸಿ ನೇಮಿಸಿದ ತನಿಖಾ ಸಮಿತಿ ಯಾವುದೇ ಪ್ರಲೋಭನಕ್ಕೆ […]

Continue Reading

ವಾಡಿ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತಿ ನಿಮಿತ್ಯ ಯುವ ಮುಖಂಡ ವಿಠಲ ನಾಯಕ ಹಾಗೂ ಮರಾಠ ಸಮಾಜದ ಅಧ್ಯಕ್ಷ ಅಶೋಕ ಪವಾರ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಭಾರತದ ಇತಿಹಾಸದಲ್ಲಿ ಸಾಮ್ರಾಜ್ಯ ಕಟ್ಟಿ ಆಳಿದ ವೀರಾಧಿವೀರ ರಾಜರುಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಪ್ರಮುಖರಾಗಿದ್ದರು ಎಂದರು. ಆವಾಗ ದೇಶದಲ್ಲಿ ಮೊಗಲ್‌ ಸಾಮ್ರಾಜ್ಯ ತುಂಬಾ ಪ್ರಬಲವಾಗಿತ್ತು. ಮಹಾರಾಷ್ಟ್ರ, ಕರ್ನಾಟಕ, ಆಂಧ್ರದಲ್ಲಿ ಪ್ರಬಲವಾಗಿದ್ದ ಸುಲ್ತಾರು. ತಮ್ಮ […]

Continue Reading

5-6 ತಿಂಗಳಲ್ಲಿ ಮಹಿಳೆರಿಗೆ ಕ್ಯಾನ್ಸರ್‌ ಲಸಿಕೆ ಲಭ್ಯ: ಕೇಂದ್ರ ಸಚಿವ ಜಾಧವ್‌

ನವದೆಹಲಿ: ಮಹಿಳೆಯರ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ವಿರುದ್ಧ ಹೋರಾಡಲು ಅಭಿವೃದ್ಧಿಪಡಿಸಿರುವ ಲಸಿಕೆ ಮುಂದಿನ 5-6 ತಿಂಗಳೊಳಗೆ ಲಭ್ಯವಾಗಲಿದೆ ಎಂದು ಕೇಂದ್ರ ಸಚಿವ ಪ್ರತಾಪರಾವ ಜಾಧವ್‌ ತಿಳಿಸಿದ್ದಾರೆ. ಲಸಿಕೆಯ ಸಂಶೋಧನೆ ಬಹುತೇಕ ಪೂರ್ಣಗೊಂಡಿದೆ, ಪ್ರಯೋಗಗಳು ನಡೆಯುತ್ತಿವೆ. ಇದು ಐದರಿಂದ ಆರು ತಿಂಗಳಲ್ಲಿ ಲಭ್ಯವಾಗಲಿದೆ. ಒಂಬತ್ತರಿಂದ 16 ವರ್ಷ ವಯಸ್ಸಿನ ಹುಡುಗಿಯರು ಲಸಿಕೆಗೆ ಅರ್ಹರಾಗಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಂಡಿದೆ. 30 ವರ್ಷಕ್ಕಿಂತ […]

Continue Reading