ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿ ಮಾತ್ರೆ ಕೇಳಿದ ಸೊಸೆ

ರಾಜ್ಯ

ಬೆಂಗಳೂರು: ಅತ್ತೆಯನ್ನು ತಾಯಿ ಸ್ಥಾನದಲ್ಲಿ ನೋಡುತ್ತಾರೆ. ಆದರೆ ನಗರದಲ್ಲಿ ಅತ್ತೆಯನ್ನು ಕೊಲ್ಲಲು ಸೊಸೆ ವೈದ್ಯರ ಬಳಿ ಮಾತ್ರೆ ಕೇಳಿದ ಘಟನೆ ನಡೆದಿದೆ.

ಡಾಕ್ಟರ್ ಒಬ್ಬರಿಗೆ ನನ್ನ ಅತ್ತೆಯನ್ನು ಸಾಯಿಸಲು ಮಾತ್ರೆ ಬರೆದುಕೊಡಿ ಎಂದು ಕೇಳಿದ್ದು, ಡಾಕ್ಟರ್ ಒಂದು ಕ್ಷಣ ಶಾಕ್ ಆಗಿದ್ದಾರೆ.

ಅತ್ತೆ ಜೊತೆಗಿನ ಜಗಳಕ್ಕೆ ರೋಸಿ ಹೋದ ಸೊಸೆಯೊಬ್ಬರು, ಅತ್ತೆಯನ್ನು ಕೊಲ್ಲುವ ಪ್ಲ್ಯಾನ್‌ ಮಾಡಿದ್ದಾರೆ. ಬಳಿಕ ಡಾಕ್ಟರ್ ಸುನೀಲಕುಮಾರ ಎನ್ನುವವರಿಗೆ ವಾಟ್ಸಾಪ್‌ನಲ್ಲಿ ಸಂಪರ್ಕಿಸಿದ್ದಾರೆ. ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರಿಗೆ ವಯಸ್ಸಾಗಿದೆ. ಅವರನ್ನು ಹೇಗೆ ಸಾಯಿಸೋದು ? ಒಂದೆರೆಡು ಮಾತ್ರೆ ತೆಗೆದುಕೊಂಡರೆ ಸಾಯುತ್ತಾರಲ್ಲ, ಅದನ್ನು ಹೇಳಿ ಎಂದು ಮೆಸೇಜ್ ಮೂಲಕ ಕೇಳಿದ್ದಾರೆ. ಇದನ್ನು ಕೇಳಿ ಶಾಕ್ ಆದ ಡಾಕ್ಟರ್ ಸಂಜಯ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಹಿಳೆ ಮಾತ್ರೆ ಕೇಳುವಾಗ ಈ ತರ ಮಾತ್ರೆ ಕೇಳುವುದು ತಪ್ಪು ಎಂದು ವೈದ್ಯರು ಬುದ್ಧಿಮಾತು ಹೇಳಿದ್ದಾರೆ. ವೈದ್ಯರು ಬುದ್ಧಿ ಹೇಳುತ್ತಿದ್ದಂತೆ, ವಾಟ್ಸಾಪ್ ಚಾಟ್ ಡಿಲೀಟ್ ಮಾಡಿದ ಮಹಿಳೆ ಡಾಕ್ಟರ್ ನಂಬರ್‌ನ ಬ್ಲಾಕ್ ಮಾಡಿದ್ದಾರೆ. ಇದಕ್ಕಿಂತ ಮುಂಚೆಯೇ ಸ್ಕ್ರೀನ್‌ಶಾಟ್‌ ಪಡೆದಿದ್ದ ವೈದ್ಯ ಸುನೀಲಕುಮಾರ ಸಂಜಯ್ ನಗರ ಪೊಲೀಸರಿಗೆ ಮಾಹಿತಿ ನೀಡಿ, ತನಿಖೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಅತ್ತೆಯನ್ನು ಸಾಯಿಸಲು ಮಾತ್ರೆ ಕೇಳಿದ ಮಹಿಳೆಯ ಫೋನ್ ಈಗ ಸ್ವಿಚ್ಡ್ಆಫ್ ಆಗಿದೆ, ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿದ ಬಳಿಕ ಅಸಲಿ ಸತ್ಯ ಬಯಲಾಗಲಿದೆ.

ಮೆಸೇಜ್‌ ಮೂಲಕ ಡಾಕ್ಟರ್’ಗೆ ಕೇಳಿದ್ದು
ಡಾಕ್ಟರ್: ಸಂಪರ್ಕ ಮಾಡಿದ ವಿಷಯ ಹೇಳಿ
ಸೊಸೆ: ಭಯ ಆಗ್ತಾ ಇದೆ ಹೇಳಕ್ಕೆ
ಡಾಕ್ಟರ್: ಹೇಳಿ
ಸೊಸೆ: ಸಾಯಿಸುವ ವಿಚಾರ, ಹೇಗೆ ಸಾಯಿಸುವುದು ಅಂತ
ಡಾಕ್ಟರ್: ಯಾರನ್ನ
ಸೊಸೆ: ಅತ್ತೆನ
ಡಾಕ್ಟರ್: ಯಾಕೆ
ಸೊಸೆ: ತುಂಬಾ ಹಿಂಸೆ ಕೊಡ್ತಾ ಇದ್ದಾರೆ, ಅದಕ್ಕೆ ನಿಮ್ಮನ್ನ ಕೇಳೋಣ ಅಂತ, ಏನಾದ್ರು ಹೇಳ್ತೀರಾ ಹೇಗೆ ಸಾಯಿಸೋದು ಅಂತ, ಪ್ಲೀಸ್ ಹೇಳಿ, ತುಂಬಾ ಏಜ್ ಆಗಿದೆ,
ಡಾಕ್ಟರ್: ನಾವು ಪ್ರಾಣ ಉಳಿಸೋ ಜನ
ಸೊಸೆ: ಟ್ಯಾಬ್ಲೆಟ್ ಇರುತ್ತಲ್ಲ ಅದು ಹೇಳಿ
ಒಂದು ಎರಡು ತಗೊಂಡ್ರೆ ಸಾಯ್ತಾರಲ್ವ ಆತರ ಇಲ್ವಾ….ಈ ರೀತಿಯಾಗಿ ಒಂದು ನಂಬರಿಂದ ವೈದ್ಯರಿಗೆ ದಿನಾಂಕ ಫೆ.17 ರಂದು ಮಧ್ಯಾಹ್ನ 2 ಗಂಟೆಗೆ ಮೆಸೇಜ್ ಬಂದಿದೆ. ತಕ್ಷಣವೇ ಸಂಜೆ 4-38ಕ್ಕೆ ವೈದ್ಯರು ಮೆಸೇಜ್ ಸ್ಕ್ರೀನ್ ಶಾಟ್ ನೊಂದಿಗೆ ದೂರು ಸಲ್ಲಿಕೆ ಮಾಡಿದ್ದಾರೆ.

ಇನ್ಸ್’ಸ್ಟಾಗ್ರಾಂ ಮೂಲಕ ನಂಬರ್ ಪಡೆದ ಮಹಿಳೆ, ವೈದ್ಯರಿಗೆ ಮೆಸೇಜ್ ಮಾಡಿ ಈ ರೀತಿ ಸಾಯಿಸುವ ಮಾತ್ರೆ ಕೇಳಿದ್ದಾರೆ. ವೈದ್ಯರು ನಿರಾಕರಿಸಿದ ತಕ್ಷಣ ಮಹಿಳೆ ಮಾಡಿದ ಮೆಸೇಜ್ ಡಿಲೀಟ್ ಮಾಡಿ, ವೈದ್ಯರ ನಂಬರನ್ನು ಬ್ಲಾಕ್ ಮಾಡಿದ್ದಾಳೆ. ನಂತರ ಕರೆಮಾಡಿ ಕ್ಷಮೆ ಕೂಡಾ ಕೇಳಿದ್ದಾಳೆ.

ಈ ಪ್ರಕರಣದ ಬಗ್ಗೆ ವೈದ್ಯರಿಗೆ ಅನುಮಾನ ಇದೆ, ಗೊಂದಲ ಇದೆ. ನಾನು ಸಾಮಾಜಿಕವಾಗಿ ಸಕ್ರಿಯನಾಗಿದ್ದೆನೆ, ವಿಜಯಪುರದಿಂದ ಶಾಸಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಯಾರಾದರೂ ಟ್ರ್ಯಾಪ್ ಮಾಡಲು ಈ ರೀತಿ ಮೆಸೇಜ್ ಮಾಡಿರಬಹುದು, ಈ ಹಿಂದೆ ಒಂದು ಬಾರಿ ಇದೆ ರೀತಿ ದೂರವಾಣಿ ಕರೆ ಬಂದಿತ್ತು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *