ಇಂದಿನ ಅತ್ಯಾಧುನಿಕ ಯುಗದಲ್ಲಿ ಫೋನ್ ಪೇ ಸೇರಿದಂತೆ ಎಲ್ಲಾ ರೀತಿಯ ಪೇಗಳಲ್ಲಿ (Digital Pay) ಬಳಸುವ UPI (Unified Payments Interface) ಗೂ ಕೂಡ ಇನ್ನುಮುಂದೆ ಕಮರ್ಷಿಯಲ್ ಆಗಲಿದೆ, ಎಲ್ಲಿಯಾದರೂ ಪೇ ಮಾಡಬೇಕಾದರೆ ಶುಲ್ಕ ವಿಧಿಸಲಿದೆ ಎಂದು ವರದಿಯಾಗಿದೆ.
ಪೋನ್‌ನಂತೆ ಯುಪಿಐ ಕೂಡ ನಮ್ಮ ಜೀವನದ
ಅಂಗವಾಗಿದೆ. ಒಬ್ಬ ವ್ಯಕ್ತಿಯ ದೈನಂದಿನ ವಹಿವಾಟಿನ ಶೇ.60 ರಿಂದ 80ರಷ್ಟು ಯುಪಿಐ ಮೂಲಕ ಪಾವತಿ ಮಾಡುತ್ತಾನೆ. ಭಾರತದಲ್ಲಿ ಪ್ರತಿದಿನ ಕೋಟ್ಯಾಂತರ ಯುಪಿಐ ವಹಿವಾಟುಗಳು ನಡೆಯುತ್ತವೆ. Paytm, Google Pay ಮತ್ತು PhonePe ಹೆಚ್ಚು ಬಳಸಲ್ಪಡುತ್ತವೆ. ಈ ಕಂಪನಿಗಳಲ್ಲಿ ಹೆಚ್ಚಿನವು UPI ವಹಿವಾಟುಗಳಿಗೆ ಯಾವುದೆ ರೀತಿಯ ಶುಲ್ಕ ವಿಧಿಸುವುದಿಲ್ಲ.
ಆದರೆ ಉಚಿತ ಸೇವೆಗಳು ಶೀಘ್ರದಲ್ಲೆ ನಿಲ್ಲಬಹುದು. ವಿವಿಧ ಸೇವೆಗಳಿಗೆ ಶುಲ್ಕ
ಪಾವತಿಸಬೇಕಾಗಬಹುದು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಈ ಕಂಪನಿಗಳು ಈಗಾಗಲೆ UPI ಮೂಲಕ ಮೊಬೈಲ್ ರಿಚಾರ್ಚ್ ಮಾಡಲು ಶುಲ್ಕ ವಿಧಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಮೊಬೈಲ್ ರಿಚಾರ್ಚ್‌ಗೆ ಸೀಮಿತವಾಗಿಲ್ಲ. ಗೂಗಲ್ ಅದನ್ನು
ಪ್ರಾರಂಭಿಸಿದೆ. ಇನ್ನು ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ವಿದ್ಯುತ್ ಬಿಲ್ ಪಾವತಿಸಲು ಗೂಗಲ್ ಪೇ ಅನುಕೂಲಕರ ಶುಲ್ಕದ ಹೆಸರಿನಲ್ಲಿ ಗ್ರಾಹಕರಿಂದ 15 ರೂ. ವಿಧಿಸಿದೆ. ವರದಿಯ ಪ್ರಕಾರ ಬಳಕೆದಾರರು ಕ್ರೆಡಿಟ್ ಕಾರ್ಡ್ ಬಳಸಿ ಗೂಗಲ್ ಪೇ ಮೂಲಕ ವಿದ್ಯುತ್ ಬಿಲ್ ಪಾವತಿಸಿದ್ದಾರೆ.
ಗೂಗಲ್ ಪೇ ಪ್ರಕ್ರಿಯೆಯನ್ನು “ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಸಂಸ್ಕರಣಾ ಶುಲ್ಕ” ಇದರಲ್ಲಿ ಜಿಎಸ್‌ಟಿ ಸೇರಿದೆ ಎಂದು ವಿವರಿಸಿದೆ. ಇನ್ನು UPI ಅನ್ನು ಅಂಗಡಿಗಳಲ್ಲಿ ಶಾಪಿಂಗ್ ಮಾಡಲು ಮಾತ್ರವಲ್ಲದೆ ಇತರ ಹಲವು ಸೇವೆಗಳಿಗೂ ಬಳಸಲಾಗುತ್ತಿದೆ.(ಏಜೆನ್ಸಿಸ್)