ಮತಗಳ್ಳತನದ ಬಗ್ಗೆ ದಾಖಲಾತಿ ಇವೆ, ರಾಹುಲ್ ಗಾಂಧಿ ಬಿಡುಗಡೆ ಮಾಡುತ್ತಾರೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಮತಗಳ್ಳತನದ ಬಗ್ಗೆ ದಾಖಲಾತಿಗಳು ಇವೆ. ನಾಳೆ ರಾಹುಲ್ ಗಾಂಧಿ ಅದನ್ನು ಬಿಡುಗಡೆ ಮಾಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಮಂಗಳವಾರ ರಾಹುಲ್ ಗಾಂಧಿ ಪ್ರತಿಭಟನೆ ಮಾಡುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಮತಗಳವು ಬಗ್ಗೆ ಹೇಳಿದ್ದರು. ಅದರ ಬಗ್ಗೆ ಇಂದು ಸುದ್ದಿಗೋಷ್ಠಿ ಮಾಡಬೇಕಿತ್ತು. ಆದರೆ ಜಾರ್ಖಂಡ್ ಸಿಎಂ ಶಿಬು ಸೊರೇನ್ ಅವರು ತೀರಿಕೊಂಡಿದ್ದಾರೆ. ಹೀಗಾಗಿ ಸುದ್ದಿಗೋಷ್ಠಿ ಮುಂದೂಡಿಕೆಯಾಗಿರಬಹುದು. ಇಲ್ಲದಿದ್ದರೆ ದಾಖಲೆ ಬಿಡುಗಡೆ ಮಾಡುತ್ತಿದ್ದರು ಎಂದರು. ರಾಹುಲ್ ಗಾಂಧಿ ಪ್ರತಿಭಟನೆ ಮಾಡ್ತಾರೆ. […]

Continue Reading

ರುದ್ರಾಕ್ಷಿ ಧಾರಣೆಯಿಂದ ಆಧ್ಯಾತ್ಮಿಕ ಮತ್ತು ಭೌತಿಕ ಲಾಭ: ಚರಲಿಂಗ ಶ್ರೀ

ಕಲಬುರಗಿ: ರುದ್ರಾಕ್ಷಿ ಒಂದು ಪವಿತ್ರ ವಸ್ತುವಾಗಿದ್ದು, ಇದನ್ನು ಧರಿಸುವುದರಿಂದ ಆಧ್ಯಾತ್ಮಿಕ ಮತ್ತು ಭೌತಿಕ ಪ್ರಯೋಜನ ಪಡೆಯಬಹುದು ಎಂದು ಗದ್ದುಗೆ ಮಠದ ಪೂಜ್ಯ ಶ್ರೀ ಚರಲಿಂಗ ಮಹಾಸ್ವಾಮಿಗಳು ಹೇಳಿದರು. ನಗರದ ಬಸವೇಶ್ವರ ಆಸ್ಪತ್ರೆ ಎದುರುಗಡೆಯ ವಿದ್ಯಾನಗರ ಕಾಲೋನಿಯಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ 8ರ ವರೆಗೆ ವೆಲ್‌ಫೇರ ಸೊಸೈಟಿಯ ಭಕ್ತರ ಮನೆಗಳಿಗೆ ಹೋಗಿ ರುದ್ರಾಕ್ಷಿ ಧಾರಣೆ ಮಾಡಿ ಮಾತನಾಡಿದದ ಅವರು, ರಕ್ತದೊತ್ತಡ ಮತ್ತು ಚರ್ಮದ ಸಮಸ್ಯೆಗಳಿಗೆ ಪರಿಹಾರ ಇದರಲ್ಲಿವೆ. ಇದು ಆಧ್ಯಾತ್ಮಿಕ ಪ್ರಗತಿಗೆ ಸಹಾಯ ಮಾಡುತ್ತದೆ. ಧ್ಯಾನ ಮತ್ತು […]

Continue Reading

ಸಿಎಂ ಪದಕ ಪುರಸ್ಕೃತ ಪ್ರಶಾಂತ ದೇಶೆಟ್ಟಿಗೆ ಅಭಿನಂದನೆ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯ ರೈಟರ್ ಪ್ರಶಾಂತ ಎಸ್ ದೇಶೆಟ್ಟಿ ಅವರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸತ್ಕರಿಸಿ, ಅಭನಂದಿಸಲಾಯಿತು. ನಗರದ ಖಾಸಗಿ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಸೋಮಶೇಖರ ಬಿ ಮುಲಗೆ ಮಾತನಾಡಿ, ದೇಶೆಟ್ಟಿ ಅವರು ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿ ಪದಕ ದೊರೆತಿರುವದು ಸೂಕ್ತವಾಗಿದೆ. ಕಾರ್ಯನಿರ್ವಹಿಸಲು ಪ್ರಶಸ್ತಿ ಮತ್ತಷ್ಟು ಪ್ರೇರಣೆ ನೀಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖಂಡರಾದ ಎಚ್.ಬಿ ಪಾಟೀಲ, ಶಿವಯೋಗೆಪ್ಪಾ ಎಸ್. ಬಿರಾದಾರ, ರವಿ ಬಿರಾದಾರ, ಶ್ರೀಶೈಲ ಕುಂಬಾರ, […]

Continue Reading

ಪವಿತ್ರ ಪಾಟೀಲರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಕಲ್ಯಾಣರಾವಡೊಣ್ಣೂರ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಸನ್ಮಾನ ಕಾಳಗಿ : ತಾಲೂಕಿನ ಡೊಣ್ಣೂರ್ ಗ್ರಾಮದ ಅಂಗನವಾಡಿಕಾರ್ಯಕರ್ತೆ ಪಾರ್ವತಿ ಡೊಣ್ಣೂರ್ ಅವರಿಗೆ ಜುಲೈ2024ಮತ್ತು ಸೆಪ್ಟೆಂಬರ್ 2024ರ ಸಾಲಿನಲ್ಲಿ ನಡೆದಸಂಪೂರ್ಣ ಅಭಿಯಾನ ಕಾರ್ಯಕ್ರಮದಲ್ಲಿ ಸಮರ್ಪಿತ ಸೇವೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಸೇವೆ ಸಲ್ಲಿಸಿದಕ್ಕೆ ಪಾರ್ವತಿ ಕಲ್ಯಾಣ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಲ್ಬುರ್ಗಿ ದಕ್ಷಿಣ ಮತ್ ಕ್ಷೇತ್ರ ಶಾಸಕರಾದಅಲ್ಲಮಪ್ರಭು ಪಾಟೀಲ್ ಜಿಲ್ಲಾ ಮಹಿಳಾ […]

Continue Reading

6 ಜನರಿಂದ ಬಾಲಕಿ ಮೇಲೆ ನಿರಂತರ ಅತ್ಯಾಚಾರ: ಮೂವರು ಕಾಮುಕರ ಬಂಧನ

ಕೋಲಾರ: ಬಾಲಕಿಯೊಬ್ಬಳ ಮೇಲೆ ನಿರಂತರ ಪ್ರತ್ಯೇಕವಾಗಿ 6 ಜನ ಅತ್ಯಾಚಾರವೆಸಗಿರುವುದು ಕೋಲಾರ ಜಿಲ್ಲೆಯ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ರಾಹುಲ್, ನಾಗೇಶ್ ಮತ್ತು ಪುನೀತ್ ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಚೇತನ್, ಕಿರಣ್, ಮಹೇಂದ್ರಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಾಲಕಿ ನೀಡಿದ ಹೇಳಿಕೆ ಆಧರಿಸಿ 6 ಜನರ ವಿರುದ್ದ ಜು.18 ರಂದು ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Continue Reading

ಆ.10 ರಂದು ನಮ್ಮ ಮೆಟ್ರೋ ಯೆಲ್ಲೋ ಲೈನ್ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಆ.10 ರಂದು ನಮ್ಮ ಮೆಟ್ರೋ ಯೆಲ್ಲೋ ಲೈನ್ ಉದ್ಘಾಟನೆ ಮಾಡಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಕೇಂದ್ರ ಸಚಿವ ಮನೋಹರ ಲಾಲ್ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಮೆಟ್ರೋ ಫೇಸ್ 3ಗೂ ಮೋದಿ ಅವರು ಆವತ್ತೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದ ವರೆಗಿನ ಹಳದಿ ಮಾರ್ಗ ಸುಮಾರು 19.5 ಕಿ.ಮೀ ಇದ್ದು, ಸಂಚಾರ ಮುಕ್ತಕ್ಕೆ ಸಿದ್ಧವಾಗಿದೆ. ಈ ಮಾರ್ಗ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸಲಿದೆ. ಪ್ರತಿದಿನ […]

Continue Reading

ಅತ್ಯಾಚಾರ ಕೇಸಲ್ಲಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು – ಸಂತ್ರಸ್ತೆಗೆ 11 ಲಕ್ಷ ಪರಿಹಾರ

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಕರಣದಲ್ಲಿ ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆಗೆ 11 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶ ಹೊರಡಿಸಿದೆ. ಪ್ರಕರಣದ ವಾದ-ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ (ಸೆಷನ್ಸ್) ನ್ಯಾಯಾಲಯವು, ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ತೀರ್ಪು ನೀಡಿತ್ತು. ಶಿಕ್ಷೆ ಪ್ರಮಾಣ ಶನಿವಾರ ಪ್ರಕಟಿಸಿದೆ. ನ್ಯಾ. ಗಜಾನನ ಭಟ್ ಅವರಿದ್ದ ಪೀಠವು, ಅಪರಾಧಿಗೆ ಜೀವನ ಪರ್ಯಂತ ಕಾರಾಗೃಹ ವಾಸ ಶಿಕ್ಷೆ ಪ್ರಕಟಿಸಿದೆ. ಅಪರಾಧಿ […]

Continue Reading

ದೇಹದ ಆರೋಗ್ಯವೇ ದೇಶದ ನಿಜವಾದ ಸಂಪತ್ತು: ಸಿದ್ದಲಿಂಗ ಶ್ರೀ

ಚಿತ್ತಾಪುರ: ಭಗವಂತ ಸುಂದರವಾದ ದೇಹವನ್ನು ಕೊಟ್ಟಿದ್ದಾನೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮೂಲಕ ದೇಹವನ್ನು ಸದೃಢ ಮಾಡಿಕೊಳ್ಳಬೇಕು. ದೇಹದ ಆರೋಗ್ಯವೇ ದೇಶದ ನಿಜವಾದ ಸಂಪತ್ತು ಎಂದು ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಸಮೀಪದ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ದಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವ್ಯಸನ ಮುಕ್ತ ದಿನಾಚರಣೆ’ ಉದ್ದೇಶಿಸಿ ಮಾತನಾಡಿದ ಅವರು, ಇಳಕಲ್ ಮಹಾoತ ಶಿವಯೋಗಿಗಳು ಮಹಾಂತ ಜೋಳಿಗೆ ಮೂಲಕ ಜನರನ್ನು ವ್ಯಸನದಿಂದ ದೂರವಿಡುವ ಪ್ರಯತ್ನ ಮಾಡಿದರು. ವಿವಿಧ ಚಟಗಳಿಂದ ನಿತ್ಯ […]

Continue Reading

ಕಸ ಗುಡಿಸುತ್ತಿದ್ದವನ ಬಳಿ 100 ಕೋಟಿ ರೂ. ಆಸ್ತಿ

ಕೊಪ್ಪಳ: ನಗರದ ಕೆಆರ್‌ಐಡಿಎಲ್‌ (ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ) ದಲ್ಲಿ ಕೆಲವು ವರ್ಷ ಹೊರಗುತ್ತಿಗೆ ಆಧಾರದ ಮೇಲೆ ಕಚೇರಿಯಲ್ಲಿ ಸಹಾಯಕನಾಗಿ ಸೇವೆ ಸಲ್ಲಿಸಿದ್ದನು, ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ಕಳಕಪ್ಪ ನಿಡಗುಂದಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಈ ವೇಳೆ 24 ಮನೆಗಳು, 50 ನಿವೇಶನ, 40 ಎಕರೆ ಜಮೀನು, ಬಂಗಾರ, ಬೆಳ್ಳಿ ಸೇರಿದಂತೆ ಒಟ್ಟು 100 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಮೊದಲು ಕಸ ಗುಡಿಸುವ […]

Continue Reading

UPI ಬಳಕೆಯಲ್ಲಿ ಇಂದಿನಿಂದ ಈ ಬದಲಾವಣೆಗಳು, ಎಚ್ಚರವಿರಲಿ

ನವದೆಹಲಿ: ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) 2025 ಆಗಸ್ಟ್ 1ರಿಂದ ಏಕೀಕೃತ ಪಾವತಿ ಇಂಟರ್ಫೇಸ್ (UPI)ಗಾಗಿ ಹಲವಾರು ಹೊಸ ನಿಯಮಗಳು ಪರಿಚಯಿಸಲಿದೆ. ಈ ಬದಲಾವಣೆಗಳು ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಸುಧಾರಿಸುವದು, ಪ್ರತಿಕ್ರಿಯೆ ಸಮಯವನ್ನು ವೇಗಗೊಳಿಸುವುದು ಮತ್ತು ಡಿಜಿಟಲ್ ಪಾವತಿಗಳ ಉತ್ತಮ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿವೆ. ಈ ಬದಲಾವಣೆಗಳು ಯೂಸರ್‌ಗಳು ಮತ್ತು Google Pay, PhonePe ಮತ್ತು Paytm ನಂತಹ ಅಪ್ಲಿಕೇಶನ್‌ಗಳ ಮೇಲೆ ಪರಿಣಾಮ ಬೀರುತ್ತವೆ. ಹೆಚ್ಚುತ್ತಿರುವ UPI ಪಾವತಿಗಳನ್ನು ಸರಾಗವಾಗಿ ನಿರ್ವಹಿಸಲು ಬ್ಯಾಂಕುಗಳು ಮತ್ತು ಅಪ್ಲಿಕೇಶನ್‌ಗಳಿಗೆ […]

Continue Reading