225 ಪ್ರಕರಣದಲ್ಲಿ 345 ಆರೋಪಿಗಳ ಬಂಧನ: 7 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ

ವಿಜಯಪುರ: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, 7 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, 225 ಕೇಸ್‌ನಲ್ಲಿದ್ದ 345 ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಬೇಧಿಸಿ, ಚಿನ್ನ, ಬೆಳ್ಳಿ ಹಾಗೂ ಇನ್ನಿತರ ವಸ್ತುಗಳು ಸೇರಿದಂತೆ ಒಟ್ಟು 7 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಒಟ್ಟು 5,145.02 ಗ್ರಾಂ ಚಿನ್ನದ ಆಭರಣ ಮತ್ತು 1,723 ಗ್ರಾಂ ಬೆಳ್ಳಿ ಆಭರಣ, 1,06,72,000 ರೂ. ಮೌಲ್ಯದ 73 […]

Continue Reading

ನಾಲವಾರ ರೈಲ್ವೆ ನಿಲ್ದಾಣದ ಸಲಹಾ ಸಮಿತಿಗೆ ನೇಮಕ

ನಾಲವಾರ: ದಕ್ಷಿಣ ಮಧ್ಯ ರೈಲ್ವೆಯ ಗುಂತಕಲ್ ವಿಭಾಗದ ನಾಲವಾರ ರೈಲ್ವೆ ನಿಲ್ದಾಣದ ಸಲಹಾ ಸಮಿತಿಯ ಸದಸ್ಯರನ್ನಾಗಿ ರಾಮರೆಡ್ಡಿ ಪಾಟೀಲ ಕೊಳ್ಳಿ, ವೀರಣ್ಣ ಯಾರಿ ಹಾಗೂ ಸರ್ವರ್ ಬೇಗ್ ಅವರನ್ನು ದಕ್ಷಿಣ ಮಧ್ಯ ರೈಲ್ವೆ ಗುಂತಕಲ್ ವಿಭಾಗದ ವ್ಯವಸ್ಥಾಪಕ ಧನಂಜಯಕುಮಾರ ಸಿಂಗ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಹಾಗೂ ರಾಜ್ಯ ತೊಗರಿ ಮಂಡಳಿ ಮಾಜಿ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ ನೂತನ ಸದಸ್ಯರುಗಳಿಗೆ ಪತ್ರ ನೀಡಿದರು. ಈ ಸಲಹಾ ಸಮಿತಿಯ ಸದಸ್ಯರುಗಳು ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ […]

Continue Reading

ಮುಂದಿನ 4 ದಿನ ಗುಡುಗು ಸಹಿತ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಒಣಹವೆಯ ವಾತಾವರಣ ಇದೆ, ತಿಂಗಳಾಂತ್ಯಕ್ಕೆ ತಾತ್ಕಾಲಿಕವಾಗಿ ಕೊನೆಯಾಗಲಿದೆ. ಎಲ್ಲೆಡೆ ಮಬ್ಬು ವಾತಾವರಣ ಸೃಷ್ಟಿಯಾಗಲಿದೆ. ಸಾಧಾರಣದಿಂದ ಭಾರಿ ಮಳೆಯಾಗುವ ಲಕ್ಷಣಗಳು ಇವೆ. ಏಪ್ರಿಲ್ 28 ರಿಂದ ಮೇ 1ರವರೆಗೆ 4 ದಿನಗಳ ಕಾಲ ರಾಜ್ಯಾದ್ಯಂತ ವರುಣ ಆರ್ಭಟಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಭಾಗ ಮತ್ತು ಒಳನಾಡು ಜಿಲ್ಲೆಗಳು ಸೇರಿದಂತೆ ರಾಜ್ಯದಲ್ಲಿ ಏಪ್ರಿಲ್ 28ರವರೆಗೆ ಅಧಿಕ ತಾಪಮಾನದ ವಾತವರಣ ಮುಂದುವರೆಯಲಿದೆ. ಕೆಲವೆಡೆ ಲಘು ಮಳೆಯಾಗಬಹುದು. ನಂತರ 4 ದಿನಗಳ ಕಾಲ ಗುಡುಗು ಮಿಂಚು […]

Continue Reading

ಏ.27 ರಂದು ನಾಲವಾರದಲ್ಲಿ ಹಳೆಯ ಜಾತ್ರೆ, ಸದ್ಭಕ್ತರ ಹರಕೆಯ ತನಾರತಿ ಉತ್ಸವ

ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಏ. 27 ರಂದು ರವಿವಾರ ಪೀಠಾಧಿಪತಿ ಪೂಜ್ಯಶ್ರೀ ಡಾ. ಸಿದ್ದತೋಟೆಂದ್ರ ಮಹಾಸ್ವಾಮಿಗಳ ದಿವ್ಯ ಸನ್ನಿಧಿಯಲ್ಲಿ ಶ್ರೀಮಠದ ಹಳೆಯ ಜಾತ್ರೆ ಹಾಗೂ ಪ್ರಸಕ್ತ ವರ್ಷದ ಎರಡನೆಯ ತನಾರತಿ ಉತ್ಸವ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ. ಅಕ್ಷಯತದಿಗೆ ಅಮಾವಾಸ್ಯಯ ದಿನ ಬೆಳಿಗ್ಗೆ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ನಡೆಯಲಿದೆ, ಸಂಜೆ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ, ನಾಡಿನ ಹಲವು […]

Continue Reading

ಸಿದ್ದಲಿಂಗ ಮಹಾಸ್ವಾಮಿಗಳ ಜನ್ಮದಿನದ ಪ್ರಯುಕ್ತ ಉಚಿತ ಕ್ಷೌರ ಸೇವೆ

ಚಿತ್ತಾಪುರ: ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳ 33ನೇ ಜನ್ಮದಿನದ ಪ್ರಯುಕ್ತ ರಾವೂರನ ಬಾಳಿ ಕಾಂಪ್ಲೆಕ್ಸ್’ನಲ್ಲಿನ ಗುರು ಮೆನ್ಸ್ ಪಾರ್ಲರ್ ವತಿಯಿಂದ ಉಚಿತ ಕ್ಷೌರ ಸೇವೆ ಮಾಡಲಾಯಿತು. ಎರಡು ವರ್ಷಗಳಿಂದ ತಮ್ಮ ವೃತ್ತಿಯಲ್ಲಿ ದುಡಿಯುತ್ತಾ ಪೂಜ್ಯರ ಜನ್ಮದಿನದ ಪ್ರಯುಕ್ತ ಎರಡನೇ ವರ್ಷ ಒಂದು ದಿನ ಸಾರ್ವಜನಿಕರಿಗೆ ಉಚಿತ ಕ್ಷೌರ ಸೇವೆ ಮಾಡುವ ಸಂಕಲ್ಪದೊಂದಿಗೆ ಮಹಾದೇವ ವಡಗೇರಿ, ಅಂಬರೀಷ್ ವಡಗೇರಿ, ಶರಣು ವಡಗೇರಿ, ಭಾಗಣ್ಣ ವಡಗೇರಿ ಮತ್ತು ಗಂಗಾಧರ ವಡಗೇರಿಯವರು ಇಂತಹ ಸತ್ಕಾರ್ಯ […]

Continue Reading

ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಎಚ್​ಎಎಲ್​ನಲ್ಲಿ 33.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, 33.4 […]

Continue Reading

ಮಕ್ಕಳಿಗೆ ಮನೆಯಲ್ಲೆ ಮಾಡಿಕೊಡಿ ಶೇಂಗಾ ಚಿಕ್ಕಿ

ಸಿಹಿತಿಂಡಿ ಅಂದರೆ ಯಾರಿಗೆ ಇಷ್ಟ ಇಲ್ಲಾ ಹೇಳಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟ. ಸ್ವೀಟ್‌ ಅಲ್ಲಿ ಚಿಕ್ಕಿ ಅಂದರೆ ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಶೇಂಗಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಂಗಡಿಗಳಿಂದ ಚಿಕ್ಕಿ ತೆಗೆದುಕೊಂಡು ತಿಂತೀರಾ, ಹಾಗಿದ್ದರೆ ಇಲ್ಲಿದೆ ಮನೆಯಲ್ಲೆ ಚಿಕ್ಕಿ ತಯಾರಿಸುವ ಸುಲಭ ವಿಧಾನ. ಬೇಕಾಗುವ ಸಾಮಾಗ್ರಿ ಶೇಂಗಾ – 200 ಗ್ರಾಂಬಿಳಿ ಬೆಲ್ಲ – 250 ಗ್ರಾಂತುಪ್ಪ – 2 ಟೀ ಸ್ಪೂನ್ಅಡುಗೆ ಸೋಡಾ – ಸ್ವಲ್ಪತುರಿದ ಒಣ ಕೊಬ್ಬರಿ- 50 ಗ್ರಾಂರೋಸ್ […]

Continue Reading

ಇನ್ವರ್ಟರ್ ಬ್ಯಾಟರಿ ಎಷ್ಟು ವರ್ಷಗಳ ಕಾಲ ಬಾಳಿಕೆ ಬರುತ್ತದೆ ? ಯಾವಾಗ ಬದಲಿಸಬೇಕು ?

ಬೆಂಗಳೂರು: ಬೇಸಿಗೆ ಬಂದ ತಕ್ಷಣ, ಅನೇಕ ರಾಜ್ಯಗಳಲ್ಲಿ ವಿದ್ಯುತ್ ಕಡಿತ ಪ್ರಾರಂಭವಾಗುತ್ತದೆ. ಇದಕ್ಕಾಗಿಯೇ ಜನರು ಮನೆಯಲ್ಲಿ ಇನ್ವರ್ಟರ್‌ಗಳನ್ನು ಸ್ಥಾಪಿಸುತ್ತಾರೆ. ಆದರೆ ಇನ್ವರ್ಟರ್‌ನಲ್ಲಿರುವ ಬ್ಯಾಟರಿ ಎಷ್ಟು ಕಾಲ ಇರುತ್ತದೆ ಎಂಬುದು ನೀವು ಯೋಚಿಸಿದ್ದಿರಾ ? ಪ್ರತಿಯೊಂದು ಬ್ಯಾಟರಿಯೂ ಜೀವಿತಾವಧಿ ಹೊಂದಿರುತ್ತದೆ, ಆ ಸಮಯ ಮುಗಿದ ಮೇಲೆ ಬ್ಯಾಟರಿಯನ್ನು ಬದಲಾಯಿಸುವುದು ಅವಶ್ಯಕ. ನಿಮ್ಮ ಮನೆಯಲ್ಲಿ ಅಳವಡಿಸಿರುವ ಇನ್ವರ್ಟರ್‌ನ ಬ್ಯಾಟರಿಯನ್ನು ಬದಲಾಯಿಸುವ ಸಮಯ ಬಂದಿದೆಯಾ ಅಥವಾ ಇಲ್ಲವಾ ? ಅದನ್ನು ಈ ರೀತಿ ತಿಳಿದುಕೊಳ್ಳಿ. ಎಷ್ಟು ವರ್ಷಗಳ ಕಾಲ ಬ್ಯಾಟರಿ ಬಾಳಿಕೆ […]

Continue Reading

ರಾಷ್ಟ್ರದ ಅಭಿವೃದ್ಧಿಯಲ್ಲಿ ಪಂಚಾಯತರಾಜ್ ವ್ಯವಸ್ಥೆಯ ಪಾತ್ರ ಅನನ್ಯ

ಕಲಬುರಗಿ: ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಬಹುದೊಡ್ಡ ಜವಾಬ್ದಾರಿ ಮಾಡುವ ಮೂಲಕ ರಾಷ್ಟ್ರದ ಅಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ಅನನ್ಯ ಕೊಡುಗೆ ನೀಡುತ್ತಿದೆ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಓಂಕಾರ ವಠಾರ ಅಭಿಮತಪಟ್ಟರು. ನಗರದ ಖಾದ್ರಿ ಚೌಕ್‌ನ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ ‘ರಾಷ್ಟ್ರೀಯ ಪಂಚಾಯತ ರಾಜ್ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರ ವಿಕೇಂದ್ರಿಕರಣದ ಪ್ರಮುಖ ಧ್ಯೇಯದೊಂದಿಗೆ ಉದಯಿಸಿದ ಪಂಚಾಯತ್ ರಾಜ್ ಪದ್ಧತಿಯು […]

Continue Reading

ಕನ್ನಡ ನಾಡಿಗೆ ಡಾ.ರಾಜಕುಮಾರ ಕೊಡುಗೆ ಅನನ್ಯ

ಕಲಬುರಗಿ: ನಾಡಿನ ಪ್ರಸಿದ್ಧ ವ್ಯಕ್ತಿಯಾಗಿ, ಮೇರು ನಟ, ಗಾಯಕ, ಕನ್ನಡಪರ ಚಳುವಳಿಯ ಹೋರಾಟಗಾರರಾಗಿ, ಸಮಾಜ ಸೇವಕರಾಗಿ ಐದು ದಶಕಗಳ ಕಾಲ ತಮ್ಮದೆಯಾದ ಅಮೂಲ್ಯ ಸೇವೆ ಸಲ್ಲಿಸಿ ಜನಮಾನಸದಲ್ಲಿ ‘ಅಣ್ಣಾವ್ರ’ ಸ್ಥಾನ ಪಡೆದ ‘ಬಂಗಾರದ ಮನುಷ್ಯ’ ಡಾ.ರಾಜಕುಮಾರ ಅವರದು ಬಹುಮುಖ ವ್ಯಕ್ತಿತ್ವ. ಕನ್ನಡ ನಾಡಿಗೆ ಅವರ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ […]

Continue Reading