ಯೋಗಯುಕ್ತ ಜೀವನದಿಂದ ರೋಗ ಮುಕ್ತ ರಾಷ್ಟ್ರ ನಿರ್ಮಾಣ

ಕಲಬುರಗಿ: ಪ್ರತಿಯೊಬ್ಬರು ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡರೆ ರೋಗ ಮುಕ್ತ ದೇಹ, ರಾಷ್ಟ್ರ‌ ನಿರ್ಮಾಣವಾಗುತ್ತದೆ ಎಂದು ಯೋಗ ತರಬೇತಿದಾರ ಚನ್ನಬಸಪ್ಪ ಗಾರಂಪಳ್ಳಿ ಅಭಿಮತಪಟ್ಟರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಅಂತರಾಷ್ಟ್ರೀಯ ಯೋಗ ದಿನಾಚರಣೆ’ ಉದ್ಘಾಟಿಸಿ, ಯೋಗಾಸನದ ವಿವಿಧ ಬಗೆಗಳನ್ನು ಪ್ರಾತ್ಯಕ್ಷಿಯ ಮೂಲಕ ತೋರಿಸಿ, ನಂತರ ಮಾತನಾಡಿದ ಅವರು, ಯೋಗವು ದೈಹಿಕ ಮತ್ತು ಮಾನಸಿಕವಾಗಿ ವ್ಯಕ್ತಿಯನ್ನು ಸದೃಢವಾಗಿರುವಂತೆ ಮಾಡುವ ವೈಜ್ಞಾನಿಕ ಪದ್ದತಿಯಾಗಿದೆ ಎಂದರು. ಉಪನ್ಯಾಸಕ, ಎನ್.ಎಸ್.ಎಸ್ ಅಧಿಕಾರಿ […]

Continue Reading

ತೆಂಗಳಿ ಗ್ರಾ.ಪಂ ಅವ್ಯವಹಾರ: ಬಿಲ್ ಕಲೆಕ್ಟರ್ ಅಮಾನತು

ಕಾಳಗಿ: ತಾಲೂಕಿನ ತೆಂಗಳಿ ಗ್ರಾಮ ಪಂಚಾಯತಿಯ ಒಟ್ಟು 19 ಸದಸ್ಯರ ಗೌರವ ಧನದ 19 ಚೇಕ್ ಗಳನ್ನು ತನ್ನ ಹೆಸರಿಗೆ ಡ್ರಾ ಮಾಡಿಕೊಂಡ ಆರೋಪದಡಿ ತೆಂಗಳಿ ಗ್ರಾ.ಪಂ ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನ ಶಾಮರಾವ ತಳವಾರ ಅವರನ್ನು‌ ಕರ್ನಾಟಕ ಗ್ರಾಮ ಸ್ವರಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಆದೇಶದ ಮೇರೆಗೆ ಗ್ರಾ.ಪಂ ಅಧ್ಯಕ್ಷರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಗ್ರಾ.ಪಂ ಹಿಂದಿನ ಅಧ್ಯಕ್ಷೆ ಸುಮಿತ್ರಾ ಚೌವ್ಹಾಣ ದೂರು ನೀಡಿದ ಹಿನ್ನೆಲೆಯಲ್ಲಿ ಈ ಸಿಬ್ಬಂದಿಯನ್ನು ಇಲಾಖೆ ವಿಚಾರಣೆಗೆ ಒಳಪಡಿಸಲಾಗಿತ್ತು, ಪಂಚಾಯತಿ […]

Continue Reading

ಭಾಗೋಡಿ: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದ ಪತ್ನಿ

ಚಿತ್ತಾಪುರ: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಘಟನೆ ಶುಕ್ರವಾರ ಬೆಳಗಿನ ಜಾವ ಭಾಗೋಡಿ ಗ್ರಾಮದಲ್ಲಿ ನಡೆದಿದೆ. ತಿಪ್ಪಣ್ಣ ಅಲಿಯಾಸ್ ಕುಪೇಂದ್ರ (30) ಕೊಲೆಯಾಗಿರುವ ವ್ಯಕ್ತಿಯಾಗಿದ್ದು, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಬಾರದು ಎಂದು ಶಾಂತಮ್ಮ ಮತ್ತು ಆಕೆಯ ಪ್ರಿಯಕರ ಸೇರಿ ಕುಪೇಂದ್ರನನ್ನು ತಲೆದಿಂಬಿನಿಂದ ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಶಾಂತಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಿಯಕರ ಪರಾರಿಯಾಗಿದ್ದಾನೆ, ಆತನನ್ನು ಆದಷ್ಟು ಬೇಗನೆ ಬಂಧಿಸಲಾಗುವುದು ಎಂದು ಪಿಎಸ್‌ಐ ಶ್ರೀಶೈಲ್ ಅಂಬಾಟಿ ತಿಳಿಸಿದ್ದಾರೆ. ತಲೆದಿಂಬಿನಿಂದ […]

Continue Reading

ರಾವೂರ: ಜೂ.28 ರಂದು ಜಿಲ್ಲಾ ಮಟ್ಟದ ವಚನ ಕಂಠಪಾಠ ಸ್ಪರ್ಧೆ

ಚಿತ್ತಾಪುರ: ವಚನ ಪಿತಾಮಹ ಡಾ.ಫ.ಗು ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ವತಿಯಿಂದ ಜಿಲ್ಲಾ ಮಟ್ಟದ ವಚನ ಕಂಠಪಾಠ ಸ್ಪರ್ಧೆ ಜೂ.28 ರಂದು ಶನಿವಾರ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕ ಸಿದ್ದಲಿಂಗ ಬಾಳಿ ತಿಳಿಸಿದ್ದಾರೆ. ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕನಿಷ್ಠ 5 ವಚನ ಮೇಲ್ಪಟ್ಟು ಹೇಳುವವರು ಭಾಗವಹಿಸಬೇಕು. ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಹೇಳುವ ವಚನಗಳನ್ನು ಬರೆದು […]

Continue Reading

500 ರೂ. ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿಗೆ 30 ವರ್ಷಗಳ ಬಳಿಕ ಶಿಕ್ಷೆ

ಬೆಳಗಾವಿ: ಅಣ್ಣ-ತಮ್ಮಂದಿರರ ಜಾಗದ ವಿವಾದದಲ್ಲಿ ಪಹಣಿ ಪತ್ರ ನೀಡಲು 500 ರೂ. ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿಗೆ 30 ವರ್ಷಗಳ ಬಳಿಕ ಸುಪ್ರೀಂಕೋರ್ಟ್ ಬುಧವಾರ ಒಂದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವ ಮೂಲಕ ಕೆಲ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ. ತಾಲೂಕಿನ ಕಡೋಲಿ‌ ಗ್ರಾಮದ ಲೆಕ್ಕಾಧಿಕಾರಿ ನಾಗೇಶ ಧೋಂಡು ಶಿವಂಗೇಕರ ಎಂಬಾತನಿಗೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದು, ಆಪಾದಿತರನ್ನು ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ. ಕಡೋಲಿಯ ಲಕ್ಷ್ಮಣ ರುಕ್ಕಣ್ಣ ಕಟಾಂಬಳೆ ಇವರ ಸಹೋದರರ ಜಮೀನನ್ನು […]

Continue Reading

ತರಕಾರಿ ಸೇವನೆಯಿಂದ ಸದೃಢ ಆರೋಗ್ಯ

ಕಲಬುರಗಿ: ದೈಹಿಕ, ಮಾನಸಿಕವಾಗಿ ಜೀವಿಸಿ, ಬೆಳವಣಿಗೆ ಹೊಂದಲು, ಆರೋಗ್ಯಕರವಾಗಿರಲು ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಶುದ್ಧ, ಸ್ವಚ್ಛವಾಗಿರುವ ಹಾಗೂ ಆದಷ್ಟು ಸಾವಯುವ ಪದ್ಧತಿಯ ಮೂಲಕ ಬೆಳೆದ ತರಕಾರಿಗಳ ಸೇವನೆ ಮಾಡುವುದುರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಟೋಲ್‌ಗೇಟ್ ಸಮೀಪದ ರೈತ ಚಂದ್ರಶ್ಯಾ ಇಟಗಿ ಅವರ ತರಕಾರಿ ತೋಟದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಜರುಗಿದ ‘ವಿಶ್ವ ತರಕಾರಿ ದಿನಾಚರಣೆ’ಯಲ್ಲಿ ತರಕಾರಿ ಬೆಳೆಗಾರ ರೈತ […]

Continue Reading

ಜಾನ್ಸಿ ರಾಣಿ ಲಕ್ಷ್ಮಿಬಾಯಿ ಧೀರ ಸ್ವಾತಂತ್ರ್ಯ ಹೋರಾಟಗಾರ್ತಿ

ಕಲಬುರಗಿ: ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಅನೇಕ ಮಹನೀಯರು ಹೋರಾಡಿದ್ದಾರೆ. ಮಹಿಳೆಯಾಗಿ ಅತ್ಯಂತ ಧೀರ, ಶೂರತನದಿಂದ ಹೋರಾಟ ಮಾಡುವ ಮೂಲಕ ಜಾನ್ಸಿ ರಾಣಿ ಲಕ್ಷ್ಮಿಬಾಯಿಯವರು ಮಹಿಳಾ ಲೋಕಕ್ಕೆ ಮಾದರಿಯಾಗಿದ್ದಾರೆ ಎಂದು ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಶಿವ ನಗರದ ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಜಾನ್ಸಿ ರಾಣಿ ಲಕ್ಷ್ಮಿಬಾಯಿಯವರ 167ನೇ ಸ್ಮರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಇಂತಹ ಮಹನೀಯರ ಬಗ್ಗೆ ತಿಳಿದುಕೊಳ್ಳುವುದು […]

Continue Reading

ಖಾಸಗಿ ವಾಹನಗಳಿಗೆ 3 ಸಾವಿರ ರೂ. ವಾರ್ಷಿಕ ಟೋಲ್‌ ಪಾಸ್ ಘೋಷಿಸಿದ ನಿತಿನ್ ಗಡ್ಕರಿ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಆಗಸ್ಟ್ 15, 2025 ರಿಂದ 3 ಸಾವಿರ ರೂ. ಬೆಲೆಯ ಹೊಸ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಪ್ರಾರಂಭಿಸಲಾಗುವುದಾಗಿ ಘೋಷಣೆ ಹೊರಡಿಸಿದ್ದಾರೆ. ಇದು ವಾಣಿಜ್ಯೇತರ ವಾಹನಗಳಿಗೆ ದೇಶದ ಹೆದ್ದಾರಿ ಜಾಲದಾದ್ಯಂತ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುವ ಉದ್ದೇಶ ಹೊಂದಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರ ಅನುಕೂಲತೆ ಹೆಚ್ಚಿಸುವ ಗುರಿಯನ್ನು ಹೊಂದಿರುವ ಈ ಉಪಕ್ರಮವನ್ನು ಇಂದು (18) ಘೋಷಿಸಲಾಗಿದೆ. ತೊಂದರೆ ರಹಿತ ಹೆದ್ದಾರಿ ಪ್ರಯಾಣದತ್ತ ಪರಿವರ್ತಕ […]

Continue Reading

ವಾಡಿ: ಜೂನ್ 21 ರಂದು ವಿಶ್ವ ಯೋಗ ದಿನಾಚರಣೆ

ವಾಡಿ: ಪಟ್ಟಣದಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ, ಈ ಹಿನ್ನಲೆಯಲ್ಲಿ ನಡೆಯುವ ಸಾಮೂಹಿಕ ಯೋಗ ಅಭ್ಯಾಸದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಕರೆ ನೀಡಿದ್ದಾರೆ. ಹನ್ನೊಂದನೇ ವಿಶ್ವ ಯೋಗ ದಿನಾಚರಣೆಯು ಒಂದು ಭೂಮಿ- ಒಂದು ಆರೋಗ್ಯ ಎಂಬ ಘೋಷ ವಾಕ್ಯದಂತೆ ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವ ಜೊತೆಗೆ ನೈಸರ್ಗಿಕ ಸಂಪತ್ತಿನ ಪ್ರಯೋಜನಯೊಂದಿಗೆ ಪ್ರತಿಯೊಬ್ಬರು ಉತ್ತಮ ಆರೋಗ್ಯ ಹೊಂದಲು ಯೋಗ ದಿನಾಚರಣೆ ಸ್ಫೂರ್ತಿಯಾಗಲಿದೆ […]

Continue Reading

1 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಾಳಗಿ SDA ಶರಣಪ್ಪ

ಕಲಬುರಗಿ: ರಸ್ತೆ ಕಾಮಗಾರಿ ಪೂರ್ಣಗೊಳಿಸಿದ ಪ್ರಮಾಣ ಪತ್ರ ನೀಡಲು 1 ಲಕ್ಷ ರೂ ಲಂಚ ಪಡೆಯುತ್ತಿದ್ದ ಆರೋಪದಡಿ ಕಾಳಗಿ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆಯ ಸಹಾಯಕ (ಎಸ್‌ಡಿಎ) ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮಂಗಳವಾರ ನಡೆದಿದೆ. ಕಾಳಗಿ ತಹಸೀಲ್ದಾರ್ ಕಚೇರಿಯ ದೇವಸ್ಥಾನ ಶಾಖೆಯ ಎಸ್‌ಡಿಎ ಶರಣಪ್ಪ ಲಂಚ ಪಡೆದ ಆರೋಪಿಯಾಗಿದ್ದು. ಕಲಬುರಗಿಯ ಗುತ್ತಿಗೆದಾರ ಅಣಿವೀರಯ್ಯ ಹಿರೇಮಠ ನೀಡಿದ ದೂರಿನನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಾಳಗಿಯ ಅಣಿವೀರಭದ್ರೇಶ್ವರ ದೇವಸ್ಥಾನ ಸಮೀಪದ ಸಿ.ಸಿ ರಸ್ತೆಯ […]

Continue Reading