ರಾವೂರ ಸಿದ್ದಲಿಂಗ ಶ್ರೀಗಳ ಜನ್ಮದಿನದಂದು ಉಚಿತ ಕ್ಷೌರ ಸೇವೆ

ಸುದ್ದಿ ಸಂಗ್ರಹ ಚಿತ್ತಾಪುರರಾವೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಸಿದ್ದಲಿಂಗ ಮಹಾಸ್ವಾಮಿಗಳ 34ನೇ ಜನ್ಮದಿನವನ್ನು ಉಚಿತ ಕ್ಷೌರ ಸೇವೆಯ ಮೂಲಕ ಆಚರಣೆ ಮಾಡಲಾಯಿತು. ರಾವೂರ ಗ್ರಾಮದ ಗುರು ಮೆನ್ಸ್ ಪಾರ್ಲರ್ ವತಿಯಿಂದ ನಿರಂತರ 3ನೇ ವರ್ಷದಿಂದ ಉಚಿತ ಕ್ಷೌರ ಸೇವೆ ಮಾಡುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ವೇಳೆ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ಹುಟ್ಟು ಹಬ್ಬ ಸಮಾಜಮುಖಿಯಾಗಿ ಆಚರಣೆ ಮಾಡಿದಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ. ಬಡವರಿಗೆ, ವಿಕಲಚೇತನರಿಗೆ, ದುರ್ಬಲರಿಗೆ ಸಹಾಯ ಮಾಡುವ […]

Continue Reading

ಕಿರುತೆರೆ ಇತಿಹಾಸದಲ್ಲಿ ಹೊಸ ದಾಖಲೆ: ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಮೂರು ಧಾರಾವಾಹಿಗಳ ʻತ್ರಿವೇಣಿ ಸಂಗಮʼ

ಕನ್ನಡ ಕಿರುತೆರೆ ಲೋಕದಲ್ಲಿ ಸದಾ ಹೊಸತನಕ್ಕೆ ತುಡಿಯುವ ವಾಹಿನಿ ʻಸ್ಟಾರ್‌ ಸುವರ್ಣʼ. ಕನ್ನಡಿಗರ ನಾಡಿಮಿಡಿತ ಅರಿತು ವೈವಿಧ್ಯಮಯ ಕಥೆಗಳ ಮೂಲಕ ಮನೆಮಾತಾಗಿರುವ ʻಸ್ಟಾರ್‌ ಸುವರ್ಣʼ, ಈಗ ಕಿರುತೆರೆಯ ಇತಿಹಾಸದಲ್ಲೆ ಹಿಂದೆಂದೂ ಕಾಣದ ಅದ್ಬುತ ಪ್ರಯೋಗವೊಂದಕ್ಕೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಎರಡು ಜನಪ್ರಿಯ ಧಾರಾವಾಹಿಗಳು ಒಂದಾಗುವುದನ್ನು ನಾವು ʻಮಹಾಸಂಗಮʼ ಎಂದು ಕರೆಯುತ್ತೆವೆ. ಆದರೆ ಇದೆ ಮೊದಲ ಬಾರಿಗೆ ʻಸುವರ್ಣ ವಾಹಿನಿʼಯ ಮೂರು ಸೂಪರ್‌ ಹಿಟ್‌ ಧಾರಾವಾಹಿಗಳನ್ನು ಒಂದೆ ವೇದಿಕೆಯಲ್ಲಿ ತರುವ ಮೂಲಕ ʻತ್ರಿವೇಣಿ ಸಂಗಮʼ ಎಂಬ ವಿನೂತನ ರಸದೌತಣವನ್ನು ವೀಕ್ಷಕರಿಗೆ […]

Continue Reading

ಸಮಾಜ ಸೇವೆಯಿಂದಲೇ ಜೀವನ ಸಾರ್ಥಕ: ನಾಗಯ್ಯ ಹಿರೇಮಠ

ಚಿತ್ತಾಪುರ: ನಮ್ಮ ಜೀವನ ಕೇವಲ ಸ್ವಾರ್ಥಕ್ಕಾಗಿ ಅಲ್ಲ, ಸಮಾಜಕ್ಕಾಗಿ ಮುಡಿಪಾಗಿಟ್ಟುಕೊಂಡರೆ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಮಾತನಾಡಿದ ಅವರು, ಪ್ರತಿಯೊಬ್ಬರು ಸ್ವಂತ ಲಾಭಕ್ಕಾಗಿ ಬದುಕುತ್ತಿರುವ ಇಂದಿನ ಸಂದರ್ಭದಲ್ಲಿ, ಹಿಂದಿನ ಮಹಾಪುರುಷರು ಸಂಸಾರ ಹಾಗೂ ಸಂಬಂಧಗಳನ್ನು ಬದಿಗಿಟ್ಟು ಸಮಾಜ ಮತ್ತು ಧರ್ಮದ ಉಳಿವಿಗಾಗಿ ಶ್ರಮಿಸಿದ್ದಾರೆ. ತಮ್ಮ ಜೀವನವನ್ನೇ ಸಮಾಜಕ್ಕೆ ಅರ್ಪಿಸಿದ ಕಾರಣದಿಂದಲೆ […]

Continue Reading

ಸಮಾನತೆ ಸಾರಿ ಜಗ ಬೆಳಗಿದ ಬಸವ: ವೀರಣ್ಣ ಯಾರಿ

ವಾಡಿ: ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ಮೂಲಕ ಮಾನವೀಯತೆ ಮತ್ತು ಸಮಾನತೆಯ ತತ್ವಗಳೊಂದಿಗೆ ಜಗ ಬೆಳಗಿದ ಬಸವ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ನಾನು ಎಂಬ ಅಹಂ ಬಿಟ್ಟು ನಾವು ಎಂಬ ಭಾವನೆಯ ಬದುಕು ಸಾಗಿಸಬೇಕು ಎಂದು ತಿಳಿಸಿ, ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಹೆಣ್ಣಿನ ಬಗ್ಗೆ ಅತ್ಯಂತ ಅಭಿಮಾನದಿಂದ ದನಿ ಎತ್ತಿದ್ದಾರೆ. ಹೆಣ್ಣಿನ ಬಗ್ಗೆ ಭಾರತೀಯ ವೈದಿಕ ಸಂಸ್ಕೃತಿಯಲ್ಲಿ […]

Continue Reading

ಟೆಂಗಳಿ ಕ್ರಾಸ್ ಸಮೀಪ ಸಿಡಿಲು ಬಡಿದು ಮರಕ್ಕೆ ಬೆಂಕಿ

ಸುದ್ದಿ ಸಂಗ್ರಹ ಚಿತ್ತಾಪುರತಾಲೂಕಿನ ಟೆಂಗಳಿ ಕ್ರಾಸ್ ಸಮೀಪ ರವಿವಾರ ಸಂಜೆ ಭಾರಿ ಪ್ರಮಾಣದ ಮಳೆ ಮತ್ತು ಗಾಳಿಯ ಅಬ್ಬರದ ನಡುವೆ ಒಣಗಿದ ಮರವೊಂದಕ್ಕೆ ಸಿಡಿಲು ಬಡಿದು, ಮರ ಸಂಪೂರ್ಣವಾಗಿ ಹೊತ್ತಿ ಉರಿದ ಅಪರೂಪದ ಘಟನೆ ನಡೆದಿದೆ. ಕಲಬುರಗಿ–ಸೇಡಂ ರಾಜ್ಯ ಹೆದ್ದಾರಿ 10ರ ಸಮೀಪದ ಟೆಂಗಳಿ ಕ್ರಾಸ್ ಸಮೀಪವಿರುವ ಹೊಲವೊಂದರಲ್ಲಿ ಒಣಗಿದ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡಿದೆ. ಮಳೆಯ ನಡುವೆಯೂ ಮರ ಬೆಂಕಿಗಾಹುತಿಯಾಗಿದ್ದು, ಗಾಳಿಯ ರಭಸಕ್ಕೆ ಮರದಿಂದ ಹಾರುತ್ತಿರುವ ಬೆಂಕಿಯ ಕಿಡಿಗಳು ದೃಶ್ಯ ಮಿಂಚು ಹುಳುವಿನಂತೆ ಹೊಳೆಯುತ್ತಿರುವ […]

Continue Reading

ಬಸವ ಜಯಂತಿ: ಮಣ್ಣಿನ ಮುಚ್ಚಳಿಕೆ ಮೂಲಕ ಪಕ್ಷಿಗಳಿಗೆ ನೀರಿನ ವ್ಯವಸ್ಥೆ

ಕಲಬುರಗಿ: ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬಸವ ಜಯಂತಿ ಪ್ರಯುಕ್ತ ಜರುಗುತ್ತಿರುವ ಸರಣಿ ಕಾರ್ಯಕ್ರಮ-12ರಲ್ಲಿ ರವಿವಾರ ನಗರದ ಅಲ್ಲಮಪ್ರಭು ನಗರದಲ್ಲಿ ಬೇಸಿಗೆಯ ಬಿರು ಬಿಸಿಲಿರುವ ಕಾರಣ ಪಕ್ಷಿಗಳಿಗೆ ನೀರು ಕುಡಿಯಲು ಗಿಡಗಳಿಗೆ ಮಣ್ಣಿನ ಮುಚ್ಚಳಿಕೆ ನೇತು ಹಾಕಿ, ಅದರಲ್ಲಿ ನೀರು ಹಾಕಲಾಯಿತು. ಸಮಾಜ ಸೇವಕ ಮಹೇಶ ನಾಗೂರೆ ನೀರಿಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲಿ ಜೀವಪರ ಕಾಳಜಿ ಅಗತ್ಯ. ಪ್ರಾಣಿ-ಪಕ್ಷಿಗಳ ಅಸ್ಥಿತ್ವದ ಮಹತ್ವ ಅರಿತು, ಅವುಗಳ ರಕ್ಷಣೆಗೆ ಮುಂದಾಗಬೇಕು. ಕೇವಲ ಮಾನವರಷ್ಟೆ ಬದುಕಿದರೆ […]

Continue Reading

ಗಂಡನ ಜೊತೆ ಜಗಳ: ಸಿಟ್ಟಿನಲ್ಲಿ ಮೇಲಿನಿಂದ 1.5 ಕೋಟಿ ರೂ ಎಸೆದ ಪತ್ನಿ

ಬೀಜಿಂಗ್‌: ಪತಿ ಜೊತೆ ಜಗಳವಾಡಿ ಸಿಟ್ಟಾದ ಪತ್ನಿಯೊಬ್ಬಳು ಅಪಾರ್ಟ್‌ಮೆಂಟ್‌ನಿಂದ 1.5 ಕೋಟಿ ರೂ. ಎಸೆದ ಘಟನೆ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಶಾಂಟೌ ನಗರದಲ್ಲಿ ನಡೆದಿದೆ. ವರದಿಗಳ ಪ್ರಕಾರ, ಪತಿ ಮತ್ತು ಪತ್ನಿಯ ನಡುವೆ ತೀವ್ರ ಜಗಳ ನಡೆದಿದೆ. ಜಗಳದ ಕೋಪದಲ್ಲಿ ಆಕೆ ತನ್ನ ಕೈಯಲ್ಲಿದ್ದ ನೋಟುಗಳ ಕಂತೆಗಳನ್ನು ಬಾಲ್ಕನಿಯಿಂದ ಕೆಳಕ್ಕೆ ಎಸೆದಿದ್ದಾಳೆ. ಹಾಂಕಾಂಗ್ ಕರೆನ್ಸಿಯ 1,000 ಮುಖಬೆಲೆಯ ನೋಟುಗಳನ್ನು ಆಕೆ ಎಸೆದಿದ್ದು ಅದರ ಒಟ್ಟು ಮೌಲ್ಯ ಸುಮಾರು 1.5 ಕೋಟಿ ರೂ.ಗಿಂತ ಹೆಚ್ಚಿತ್ತು. ಮೇಲಿನಿಂದ ಹಣದ ಮಳೆ […]

Continue Reading

ನಾಲವಾರದಲ್ಲಿ ವೈಭವದ ತನಾರತಿ ಉತ್ಸವ

ನಾಲವಾರ: ಕಲ್ಯಾಣ ಕರ್ನಾಟಕ ಭಾಗದ ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ನಾಲವಾರದಲ್ಲಿ ತಮ್ಮ ಹರಕೆಗಳನ್ನು ಪೂರೈಸಿದ ಪ್ರತೀಕವಾಗಿ ನೆರವೇರುವ ತನಾರತಿ ಸೇವೆಯನ್ನು ಆರಾಧ್ಯ ಸದ್ಗುರುವಿಗೆ ಸಲ್ಲಿಸುವ ವಿಶಿಷ್ಟ ಉತ್ಸವ ಶನಿವಾರ ಬೆಳಗಿನ ಸುಪ್ರಭಾತ ಸಮಯದಲ್ಲಿ ಸಂಭ್ರಮದಿಂದ ನೆರವೇರಿತು. ಶ್ರೀ ಕ್ಷೇತ್ರ ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ  ಮಹಾಸಂಸ್ಥಾನ ಮಠದಲ್ಲಿ ಪೀಠಾಧಿಪತಿ ಪರಮಪೂಜ್ಯ ಡಾ.ಸಿದ್ದತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸನ್ನಿಧಿಯಲ್ಲಿ ಅತ್ಯಂತ ವೈಭವದಿಂದ ಶ್ರದ್ಧೆ ಭಕ್ತಿಯ ಮಧ್ಯೆ ನಾಡಿನ ವಿಶಿಷ್ಟ ಉತ್ಸವಗಳಲ್ಲಿ ಒಂದಾದ ತನಾರತಿ ಉತ್ಸವಕ್ಕೆ ಸಹಸ್ರಾರು ಭಕ್ತರ […]

Continue Reading

ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ರಾಜ್ಯದ 10 ಕಾಂಗ್ರೆಸ್‌ ಶಾಸಕರು

ಸುದ್ದಿ ಸಂಗ್ರಹ ನವದೆಹಲಿ ಬುಧವಾರ ಅಯೋಧ್ಯೆಗೆ ಶ್ರೀರಾಮ ದೇವಸ್ಥಾನಕ್ಕೆ ರಾಜ್ಯದ 10 ಹಿರಿಯ ಕಾಂಗ್ರೆಸ್ ಶಾಸಕರು ಭೇಟಿ ನೀಡಲಿದ್ದಾರೆ. ನಾಳೆ ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಇಲ್ಲದ ಕಾರಣ ಬೆಳಗ್ಗೆ 8 ಗಂಟೆಗೆ ವಿಮಾನ ಮೂಲಕ ಶಾಸಕರು ಆಯೋಧ್ಯೆಗೆ ಪ್ರಯಾಣಿಸಲಿದ್ದಾರೆ. ಯಾರೆಲ್ಲಾ ಹೋಗುತ್ತಿದ್ದಾರೆ ?ಅಶೋಕ್ ಪಟ್ಟಣ್, ಟಿಬಿ ಜಯಚಂದ್ರ, ರಾಘವೇಂದ್ರ ಹಿಟ್ನಾಳ್, ಡಿಜಿ ಶಾಂತನಗೌಡ, ಹಂಪನಗೌಡ ಬಾದರ್ಲಿ, ಬಸವರಾಜ್ ಶಿವಣ್ಣನವರ್, ಮಹಾತೇಂಶ್ ಕೌಜಲಗಿ, ಷಡಕ್ಷರಿ, ಯಶವಂತರಾಯಗೌಡ ಪಾಟೀಲ್, ಜಿಟಿ ಪಾಟೀಲ್.

Continue Reading

ಬಿಜೆಪಿ ಕಚೇರಿಯಲ್ಲಿ ಬಾಬಾ ಸಾಹೇಬರ ಜಯಂತಿ ಆಚರಣೆ

ಸುದ್ದಿ ಸಂಗ್ರಹ ವಾಡಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಡಾ‌. ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಜಾತಿ ತಾರತಮ್ಯದ ವಿರುದ್ಧ ಹೋರಾಡಲು ಡಾ.ಅಂಬೇಡ್ಕರ್ ಅವರು ತಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟು, ಸದೃಢ ರಾಷ್ಟ್ರಕ್ಕಾಗಿ ಸಂವಿಧಾನದ ಮುಖಾಂತರ ಮುನ್ನುಡಿ ಬರೆದರು ಎಂದರು. ಅಂಬೇಡ್ಕರ್ ಅವರ ಬದುಕು, ತತ್ವ, ಆದರ್ಶಗಳು ನಮ್ಮ ಪಾಲಿಗೆ ಸಾರ್ವಕಾಲಿಕ ಸಕಾಲಿಕವಾಗಿವೆ. ಜಾತಿಭೇದವಿಲ್ಲದ ಸಮಸಮಾಜದ ಪ್ರಗತಿಯ ಕನಸು ಕಂಡ ಮೇರು ನಾಯಕ. ಇವರ ಆದರ್ಶ […]

Continue Reading