ಸಾಂಸ್ಕೃತಿಕ ನಾಯಕ ಬಸವಣ್ಣನವರ ಕೊಡುಗೆ ಅವಿಸ್ಮರಣೀಯ

ಸುದ್ದಿ ಸಂಗ್ರಹ ಕಲಬುರಗಿ ಸಮಾನತೆ, ಕಾಯಕ ತತ್ವ, ಸ್ತ್ರೀ ಸಮಾನತೆ ಮತ್ತು ಜಾತಿ ರಹಿತ ಸಮಾಜಕ್ಕಾಗಿ ಶ್ರಮಿಸಿದ ಬಸವಣ್ಣನವರ ತತ್ವಗಳು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಅಡಿಪಾಯವಾಗಿದೆ. ಈ ಘೋಷಣೆಯು ಅವರ ಸಾಮಾಜಿಕ ನ್ಯಾಯದ ಹರಿಕಾರರ ಪಾತ್ರ ಗೌರವಿಸುತ್ತದೆ ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಹೇಳಿದರು. ಕಾಳಗಿ ತಾಲೂಕಿನ ಕೋರವಾರದ ಅಣವೀರಭದ್ರೇಶ್ವರ ಪ್ರೌಢ ಶಾಲೆಯಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯುತ್ಸವದ ನಿಮಿತ್ಯ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಏರ್ಪಡಿಸಿದ್ದ “ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು […]

Continue Reading

ಸಿಎಂಗೆ ನಾಲವಾರ ಶ್ರೀಗಳಿಂದ ಚಿನ್ನದ ಉಂಗುರ ಉಡುಗೊರೆ

ಸುದ್ದಿ ಸಂಗ್ರಹ ಚಿತ್ತಾಪುರ ರಾಜ್ಯ ರಾಜಕಾರಣದಲ್ಲಿ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿ ಐತಿಹಾಸಿಕ ದಾಖಲೆ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಲೂಕಿನ ನಾಲವಾರ ಮಠದ ವತಿಯಿಂದ ಚಿನ್ನದ ಉಂಗುರ ನೀಡಿ ವಿಶೇಷವಾಗಿ ಅಭಿನಂದಿಸಲಾಯಿತು. ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ನಾಲವಾರದ ಶ್ರೀ ಕೋರಿಸಿದ್ದೇಶ್ವರ ಮಠಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಿದ್ದರು. ತಾಲೂಕಿನ ಸೂಗೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಮುಗಿಸಿ ಮಠಕ್ಕೆ ಆಗಮಿಸಿದ ಸಿಎಂ ಅವರನ್ನು ಮಠದ ಪೀಠಾಧಿಪತಿ ಶ್ರೀ ತೋಟೇಂದ್ರ ಸ್ವಾಮೀಜಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಸಿದ್ದರಾಮಯ್ಯನವರು ಕರ್ನಾಟಕದ […]

Continue Reading

ಗೂಗಲ್ ಪೇಯಲ್ಲಿ ‘ಪಾಕೆಟ್ ಮನಿ’ ಆಪ್ಷನ್ ಕ್ಲಿಕ್​​ ಮಾಡಿದ್ರೆ ಹಣ ಹೋಗುತ್ತಾ? ಯಾರಿಗಾಗಿ ಈ ಆಯ್ಕೆ? ಇಲ್ಲಿದೆ ನೋಡಿ ಸಾಮಾಜಿಕ ಜಾಲತಾಣದಲ್ಲಿ ಗೂಗಲ್ ಪೇಯಲ್ಲಿ ನೀಡಿರುವ ‘ಪಾಕೆಟ್ ಮನಿ’ ಆಪ್ಷನ್ ಬಗ್ಗೆ ಭಾರೀ ಚರ್ಚೆಗಳು ಆಗುತ್ತಿದೆ. ಈ ಆಪ್ಷನ್ ಕ್ಲಿಕ್ ಮಾಡಿದ್ರೆ ಹಣ ಎಲ್ಲವೂ ಹೋಗುತ್ತದೆ, ಇದೊಂದು ರೀತಿ ಸ್ಕ್ಯಾಮ್ ಎಂದು ಹೇಳುತ್ತಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಇದರ ಹಿಂದೆ ಇರುವ ನಿಜವಾದ ತಂತ್ರ ಏನು? ಎಂಬ […]

Continue Reading

ವಾಡಿಯಲ್ಲಿ ಬಿಳಿ ಜೋಳದ ಕಣಕಿ ಬಣವಿಗೆ ಬೆಂಕಿ: ರೈತ ಕಂಗಾಲು

ಸುದ್ದಿ ಸಂಗ್ರಹ ವಾಡಿ ಪಟ್ಟಣದ ನ್ಯೂಟೌನ್‌‌ ರಸ್ತೆಯಲ್ಲಿರುವ ಸತೀಶ್ ನಾಯಕ ಅವರ ಹೊಲದಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ಬಿಳಿ ಜೋಳದ ಕಣಿಕಿ ಬಣವಿ ಭಸ್ಮವಾಗಿದೆ. ಸುಮಾರು 50 ಸಾವಿರ ಮೌಲ್ಯದ ಕಣಿಕಿ ಬಣವಿ ಸಂಗ್ರಹವಾಗಿತ್ತು. ಮಧ್ಯಾಹ್ನ ಬಿರಿ ಬಿಸಿಲು ಮತ್ತು ಗಾಳಿಗೆ ಬೆಂಕಿ ಹೊತ್ತಿಕೊಂಡಿತು. ಈ ಅವಘಡದಿಂದ ಬಡ ರೈತನಿಗೆ ನಷ್ಟವಾಗಿದೆ, ಆದಾನಿ ಕಂಪನಿಯ ಎಚ್.ಆರ್ ಮುಖ್ಯಸ್ಥ ಕೊಟೇಶ್ವರ ಅವರ ಸಹಾಯದಿಂದ ಬೆಂಕಿ ನಂದಿಸುವ ವಾಹನ ಸಮಯಕ್ಕೆ ಸರಿಯಾಗಿ ಆಗಮಿಸಿದ ಪರಿಣಾಮ ಇನ್ನೂ ಹೆಚ್ಚಿನ ಪ್ರಮಾಣದಲ್ಲಿನ ಅವಘಡವಾಗಲಿಲ್ಲ […]

Continue Reading

ನಾಳೆ ನಾಲವಾರ ಮಠಕ್ಕೆ ಸಿಎಂ ಸಿದ್ಧರಾಮಯ್ಯ

ಸುದ್ದಿ ಸಂಗ್ರಹ ಚಿತ್ತಾಪುರ ಕಲಬುರಗಿ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಕ್ಷೇತ್ರ ನಾಲವಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಕರ್ತೃ ಗದ್ದುಗೆ ಹಾಗೂ ಪೀಠಾಧಿಪತಿಗಳಾದ ಪರಮಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದರ್ಶನಾಶೀರ್ವಾದ ಪಡೆಯಲಿದ್ದಾರೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ಹೇಳಿದರು. ನಾಳೆ (ಶನಿವಾರ) ಸಂಜೆ 4 ಗಂಟೆಗೆ ಶ್ರೀಕ್ಷೇತ್ರಕ್ಕೆ ಆಗಮಿಸಲಿರುವ ನಾಡದೊರೆಯ ಜೊತೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ, […]

Continue Reading

ಒಡೆದ ಫೋನ್​ನಿಂದ ಸೆಲ್ಫಿ ತೆಗೆಯುವುದನ್ನು ಗಮನಿಸಿ ಅಭಿಮಾನಿಗೆ ಹೊಸ ಮೊಬೈಲ್​​ ಕೊಟ್ಟ ಸಂಜು

ಐಪಿಎಲ್​ ಶುರುವಾಗುವ ಮುನ್ನ ಮುಕ್ತಾಯಗೊಂಡ ಟಿ20 ವಿಶ್ವಕಪ್​ ಟೂರ್ನಮೆಂಟ್​ನಲ್ಲಿ ಸ್ಫೋಟಕ ಆಟವಾಡಿ ಟೀಮ್​ ಇಂಡಿಯಾ ವಿಶ್ವಕಪ್​ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ ಸಂಜು ಸ್ಯಾಮ್ಸನ್​, ಐಪಿಎಲ್​ನಲ್ಲಿ ತಮ್ಮ ಫಾರ್ಮ್​ ಕಳೆದುಕೊಂಡಿದ್ದಾರೆ. ಈ ಸೀಸನ್​ನಿಂದ ಆರಂಭಿಕ ಆಟಗಾರನಾಗಿ ಸಿಎಸ್​ಕೆ ತಂಡ ಸೇರಿಕೊಂಡಿರುವ ಸಂಜು ಸ್ಯಾಮ್ಸನ್, ಒಂದೆ ಒಂದು ಪಂದ್ಯದಲ್ಲಿ ಎರಡಂಕಿಯನ್ನು ದಾಟಿಲ್ಲ. ಹೀಗಾಗಿ ಫಾರ್ಮ್​ಗೆ ಮರಳಲು ಸಂಜು ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ ಅವರ ವಿರುದ್ಧ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗುತ್ತಿವೆ. ಇದರ ನಡುವೆ ಸಂಜು ಮಾಡಿದ ಕೆಲಸವೊಂದು ಎಲ್ಲರ ಮೆಚ್ಚುಗೆ […]

Continue Reading

ಬೆಂಗಳೂರಿನ ಯುವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಾಕುಂಭದ ವೇಳೆ ಫೇಮಸ್ ಆಗಿದ್ದ ಐಐಟಿ ಬಾಬಾ‌

ಸುದ್ದಿ ಸಂಗ್ರಹ ಜಜ್ಜರ್​​ಸಿಂಗ್ಪ್ರಯಾಗ್​ರಾಜ್​ನಲ್ಲಿ ನಡೆದ ಮಹಾ ಕುಂಭಮೇಳದ ಸಮಯದಲ್ಲಿ ಫೇಮಸ್ ಆಗಿದ್ದ ಐಐಟಿ ಬಾಬಾ ಅಭಯ್ ಸಿಂಗ್ ಬೆಂಗಳೂರಿನ ಯುವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಮತ್ತು ಅವರ ಪತ್ನಿ ಪ್ರೀತಿಕಾ ಮೊದಲ ಬಾರಿಗೆ ತಮ್ಮ ಹುಟ್ಟೂರು ಜಜ್ಜರ್‌ಗೆ ಭೇಟಿ ನೀಡಿದ್ದರು, ಅಲ್ಲಿ ಅವರನ್ನು ನೋಡಲು ಮತ್ತು ಸ್ವಾಗತಿಸಲು ಜನಸಮೂಹ ಸೇರಿತ್ತು. ಅಭಯ್ ತನ್ನ ಬ್ಯಾಂಕ್ ಖಾತೆಯ KYC ನವೀಕರಿಸಲು ತನ್ನ ಪತ್ನಿಯೊಂದಿಗೆ ಜಜ್ಜರ್‌ಗೆ ಬಂದಿದ್ದರು. ಈ ಸಮಯದಲ್ಲಿ, ಅವರು ತಹಸಿಲ್ ಸಂಕೀರ್ಣದಲ್ಲಿರುವ ತಮ್ಮ ವಕೀಲ […]

Continue Reading

ವಾಡಿಯಲ್ಲಿ ಬಿಜೆಪಿ ಸಂಸ್ಥಾಪನ ದಿನ ಆಚರಣೆ

ಸುದ್ದಿ ಸಂಗ್ರಹ ವಾಡಿ ಪಟ್ಟಣದ ಶ್ರೀ ಹಿಂಗುಲಾಂಬಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ಆಚರಿಸಲಾಯಿತು. ಪಕ್ಷದ ಸಂಸ್ಥಾಪಕ ಪಂಡಿತ್ ದೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪಕ್ಷದ ಮುಖಂಡರು ಪುಷ್ಪನಮನ ಸಲ್ಲಿಸಿ, ಪೂಜೆಯಲ್ಲಿ ಪಾಲ್ಗೊಂಡು ಜೈ ಘೋಷಿಸಿದರು. ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ರಾಷ್ಟ್ರೀಯ ಚಿಂತನೆಗಳ ಮೂಲಕ ಪಕ್ಷದೊಂದಿಗೆ ತಾಯ್ನಾಡಿನ ಅಭಿವೃದ್ಧಿಯ ಪಥಕ್ಕೆ ನಾಂದಿ ಹಾಡಿದ ನಮ್ಮ ಹಿರಿಯರನ್ನು ಈ ಸಂದರ್ಭದಲ್ಲಿ ಸ್ಮರಿಸಿ, ತಳಮಟ್ಟದಿಂದ ಪಕ್ಷವನ್ನು ಬಲಪಡಿಸುತ್ತಿರುವ ಕಾರ್ಯಕರ್ತರ ಶ್ರಮಕ್ಕೆ ಕೃತಜ್ಞತೆ […]

Continue Reading

ಮಗಳಿಗೆ ವಿಚ್ಛೇದನ ಸಿಕ್ಕ ಖುಷಿ: ಕೋರ್ಟ್​ ಮುಂದೆಯೇ ಡೋಲು ಬಡಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ತಂದೆ

ಸುದ್ದಿ ಸಂಗ್ರಹ ಮೀರತ್ಮುದುವೆ ಸಮಾರಂಭ ಭಾರತೀಯರಿಗೆ ಸಂಭ್ರಮ. ವಿವಾಹಕ್ಕೆ ಒಂದು ತಿಂಗಳಿನಿಂದ ತಯಾರಿಗಳು, ಸಂತೋಷ, ಖರೀದಿ ಭರಾಟೆ ಜೋರಾಗಿರುತ್ತದೆ. ರಾತ್ರಿ ಪೂರ್ತಿ ವಧು-ವರರ ಗುಸುಗುಸು ಮಾತು ಹೀಗೆ ಸಾಕಷ್ಟು. ಆದರೆ ವಿಚ್ಛೇದನ ಎಂದು ಬಂದಾಗ ಅದೊಂದು ಘೋರ ವಿರಸ. ಹಲವರು ಸೋಶಿಯಲ್​ ಮೀಡಿಯಾ ಬಿಟ್ಟು, ದೂರದ ಊರುಗಳಿಗೆ ತೆರಳಿ ಬಿಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆ ಪ್ರವೃತ್ತಿ ಇಲ್ಲ. ಮೀರತ್​ ಫ್ಯಾಮಿಲಿ ಕೋರ್ಟ್​ ಬಳಿ ನಡೆದ ಈ ಘಟನೆ ಇದಕ್ಕೆ ಉದಾಹರಣೆಯಾಗಿದೆ. ಆಧುನಿಕ ಜಗತ್ತಿನ ಕಾಲಘಟ್ಟದಲ್ಲಿ ವಿಚ್ಛೇದನ […]

Continue Reading

ವಾಡಿಯಲ್ಲಿ ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ

ಸುದ್ದಿ ಸಂಗ್ರಹ ವಾಡಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾರತದ ಮಾಜಿ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿ ಆಚರಿಸಲಾಯಿತು. ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, ಸಮಾಜ ಸುಧಾರಣೆ ಬಗ್ಗೆ ಮತ್ತು ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆ ಅವರು ಹೊಂದಿದ್ದರು ಎಂದರು. ಕಾರ್ಮಿಕರ ಏಳಿಗೆಯನ್ನು ಸದಾ ಬಯಸುತ್ತಿದ್ದ ಅವರು, ದೇಶದ ಜನರು ಅಹಾರ ಕೊರತೆ ಅನುಭವಿಸುತ್ತಿರುವುದನ್ನು ಕಂಡು ಹಸಿರು ಕ್ರಾಂತಿ ಪ್ರಾರಂಭಿಸಿ ನೆರವಾದರು. ಇಂತಹ ಮಹಾನ್‌ ನಾಯಕರ […]

Continue Reading