ಇಂದಿನಿಂದ ಉಳಿತಾಯ ಹಬ್ಬ: ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ ?

ದಸರಾ ಹಬ್ಬದ ಜೋಶ್‌ನಲ್ಲಿರುವ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರ ‘ದಸರಾ ಗಿಫ್ಟ್‌’ ಕೊಟ್ಟಿದೆ. ಇಂದಿನಿಂದ ಹೊಸ ಜಿಎಸ್‌ಟಿ ದರ ಜಾರಿಗೆ ಬರಲಿದೆ. ಇದರಿಂದ ಅದೆಷ್ಟೋ ದಿನಬಳಕೆ ವಸ್ತುಗಳ ಬೆಲೆ ಕೈಗೆಟುಕುವ ದರದಲ್ಲಿ ಸಿಗಲಿದೆ. ದಿನನಿತ್ಯ ಬಳಸುವ ಬಹುತೇಕ ವಸ್ತುಗಳ ಬೆಲೆ ಕಡಿಮೆಯಾಗಿದೆ. ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆಯಾಗಿದೆ ? ಹಳೆಯ ದರ ಎಷ್ಟಿತ್ತು ? ಎಂಬುದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ. ಯಾವ ಉತ್ಪನ್ನಗಳ ಬೆಲೆ ಎಷ್ಟು ? ಈ ಉತ್ಪನ್ನಗಳ ಬೆಲೆಯೂ […]

Continue Reading

ಶಬರಿಮಲೆ ವಿಗ್ರಹದಿಂದ ಚಿನ್ನ ನಾಪತ್ತೆ: ತನಿಖೆಗೆ ಆದೇಶಿಸಿದ ಹೈಕೋರ್ಟ್

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಚಿನ್ನದ ಮೂರ್ತಿಗಳ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ದ್ವಾರಪಾಲಕ ವಿಗ್ರಹಕ್ಕೆ ಹೊದಿಸಿದ 42.8 ಕೆಜಿ ತೂಕದ ಕವಚದಲ್ಲಿ 4.5 ಕೆಜಿ ಚಿನ್ನ ನಾಪತ್ತೆಯಾಗಿದೆ. ಹಳೆಯ ತಾಮ್ರ ಮತ್ತು ಚಿನ್ನದ ಲೇಪನ ಮೂರ್ತಿಗಳ ತೂಕದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಆಯುಕ್ತರು ಆರೋಪಿಸಿದ್ದಾರೆ. 2019ರಲ್ಲಿ ದೇವರ ಮೂರ್ತಿಗಳಿಗೆ ಪುನರ್‌ಲೇಪನ ಮಾಡಲಾಗಿತ್ತು. ಈ ವೇಳೆ ತಾಮ್ರದ ಮೂರ್ತಿಗೆ ಹೊದಿಸಿದ್ದ ಚಿನ್ನದ ಕವಚದಲ್ಲಿ 4.5 ಕೆಜಿ ಚಿನ್ನ ಕಳ್ಳತನವಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೈಕೋರ್ಟ್‌ […]

Continue Reading

ಪೊಲೀಸ್ ವಾಹನದ ಕೀ ಕದ್ದು, ಮನೆಗೆ ಡ್ರಾಪ್ ಕೇಳಿದ ಕುಡುಕರು

ಭುವನೇಶ್ವರ: ಮದ್ಯದ ಅಮಲಿನಲ್ಲಿದ್ದವ ಯಾರ ಮಾತನ್ನೂ ಕೇಳುವುದಿಲ್ಲ ಎಂಬ ಮಾತಿದೆ. ಆದರೆ ಇಲ್ಲಿ ಇಬ್ಬರು ಭೂಪರು ಕಂಠಪೂರ್ತಿ ಮದ್ಯಸೇವಿಸಿ ಪೊಲೀಸರನ್ನೆ ಮನೆಗೆ ಡ್ರಾಪ್ ಮಾಡುವಂತೆ ಕೇಳಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ಒಡಿಶಾದಲ್ಲಿ ಈ ಘಟನೆ ನಡೆದಿದ್ದು, ಮದ್ಯ ಸೇವಿಸಿದ ಇಬ್ಬರು ವ್ಯಕ್ತಿಗಳು ಪೊಲೀಸರಿಂದ ಅವರ ಕಾರಿನ ಕೀ ಕದ್ದಿದ್ದಾರೆ. ಬಳಿಕ ಬೊಲೆರೋ ಕಾರಿನೊಳಗೆ ಕುಳಿತು ತಮ್ಮನ್ನು ಮನೆಗೆ ಡ್ರಾಪ್ ಮಾಡುವಂತೆ ಒತ್ತಾಯಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಪೊಲೀಸ್ ಅಧಿಕಾರಿ ವಾಹನದ ಕೀ ಕೊಡುವಂತೆ ಕೇಳಿದರೂ […]

Continue Reading

ಅಸ್ಸಾಂನ ಗುವಾಹಟಿಯಲ್ಲಿ 5.8 ತೀವ್ರತೆಯ ಭೂಕಂಪ: ಉತ್ತರ ಬಂಗಾಳ, ಭೂತಾನ್‌ನಲ್ಲೂ ಕಂಪನ

ದಿಸ್ಪುರ: ಅಸ್ಸಾಂನ ಗುವಾಹಟಿಯಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಉತ್ತರ ಬಂಗಾಳ ಮತ್ತು ನೆರೆಯ ಭೂತಾನ್‌ನಲ್ಲೂ ಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರವು 5 ಕಿಲೋಮೀಟರ್ ಆಳದಲ್ಲಿದ್ದು, ಉದಲ್ಗುರಿ ಪಟ್ಟಣದಲ್ಲಿತ್ತು ಎಂದು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಗುವಾಹಟಿಯಲ್ಲಿ ಭಯಭೀತರಾದ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿಹೋದರು. ಇಲ್ಲಿಯವರೆಗೆ ಯಾವುದೆ ಗಾಯ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ವರದಿಗಳಾಗಿಲ್ಲ. ಈಶಾನ್ಯವು ಹೆಚ್ಚಿನ ಭೂಕಂಪನ ವಲಯದಲ್ಲಿ ಬರುವುದರಿಂದ ಈ ಪ್ರದೇಶದಲ್ಲಿ ಭೂಕಂಪಗಳು ಆಗಾಗ್ಗೆ ಸಂಭವಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೆ […]

Continue Reading

ಹಾಟ್ ಏರ್ ಬಲೂನ್ ಹಾರುವ ಮುನ್ನವೆ ಬೆಂಕಿ: ಮಧ್ಯಪ್ರದೇಶ ಸಿಎಂ ಬಚಾವ್

ಭೋಪಾಲ್‌: ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಹಾರಾಟ ನಡೆಸಲು ಸಿದ್ಧತೆ ನಡೆಸಿದ್ದ ಹಾಟ್ ಏರ್ ಬಲೂನ್‌ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಂದಸೋರ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಮೋಹನ್ ಯಾದವ್ ಅವರು ಅಪಾಯದಿಂದ ಪಾರಾಗಿದ್ದಾರೆ. ಇಂದು ಬೆಳಿಗ್ಗೆ (ಸೆ.13) ಮಂದಸೋರ್‌ನ ಗಾಂಧಿ ಸಾಗರ್ ಅರಣ್ಯ ಪ್ರದೇಶದಲ್ಲಿ ಮೋಹನ್ ಯಾದವ್ ಹಾಟ್‌ ಏರ್‌ ಬಲೂನ್‌ನಲ್ಲಿ ಹಾರಾಟ ನಡೆಸಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲೆ ಎಂಜಿನ್‌ನ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೆ ಭದ್ರತಾ ಸಿಬ್ಬಂದಿ ಅವರನ್ನು ಕೆಳಗಿಳಿಸಿ, ಸುರಕ್ಷಿತ ಸ್ಥಳಕ್ಕೆ […]

Continue Reading

ಗಂಡನ ಪ್ರೀತಿ ಕಡಿಮೆಯಾಗಿದ್ದಕ್ಕೆ 40 ದಿನದ ಮಗುವಿನ ಬಾಯಿಗೆ ಟಿಶ್ಯೂ ಪೇಪರ್ ತುರುಕಿ ಕೊಂದ ತಾಯಿ

ಚೆನ್ನೈ: ತಾಯಿಯೇ ಮಗುವನ್ನು ಕೊಂದಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಗಂಡನ ಪ್ರೀತಿ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿರೋದಾಗಿ ಮಹಿಳೆ ಹೇಳಿಕೆ ನೀಡಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಘಟನೆ ಸಂಬಂಧ ಪೊಲೀಸರು ಆರೋಪಿ ತಾಯಿಯನ್ನು ಬಂಧಿಸಿದ್ದಾರೆ. ಮಗುವನ್ನು ಕೊಂದ ಮಹಿಳೆಯನ್ನು ಬೆನಿತಾ ಜಯ ಅನ್ನಲ್ (20) ಎಂದು ಗುರುತಿಸಲಾಗಿದೆ. ಬೆನಿತಾ ಕನ್ಯಾಕುಮಾರಿ ಜಿಲ್ಲೆಯ ಕರುಂಗಲ್ ಬಳಿಯ ಬಾಲೂರ್ ಕಟ್ಟುವಿಲೈ ಪ್ರದೇಶದ ನಿವಾಸಿ. ಒಂದು ವರ್ಷದ ಹಿಂದೆ ದಿಂಡಿಗಲ್ ಜಿಲ್ಲೆಯ ಉತ್ತರ ವೇದಚಂದೂರಿನ ನಾಗಕೋಣನೂರು […]

Continue Reading

ಮಾರುಕಟ್ಟೆಗೆ ಲಗ್ಗೆ ಇಟ್ಟ ಚೀನಾದ ಡೇಂಜರಸ್​ ಬೆಳ್ಳುಳ್ಳಿ: ಗುರುತಿಸುವದು ಹೇಗೆ ?‌

ಭಾರತದ ಮಾರುಕಟ್ಟೆಗೆ ಚೀನಾದ ಬೆಳ್ಳುಳ್ಳಿ ಆಗಾಗ್ಗೆ ಲಗ್ಗೆ ಇಟ್ಟು ಸದ್ದು ಮಾಡುತ್ತಲೆ ಇರುತ್ತದೆ. ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಈ ಬೆಳ್ಳುಳ್ಳಿ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಇಡಿ ವಿಶ್ವಕ್ಕೆ ಕರೋನಾ ಕೊಟ್ಟಿರುವ ಚೀನಾ ಮಾಡುತ್ತಿರುವ ಕಿತಾಪತಿ ಒಂದಲ್ಲ, ಎರಡಲ್ಲ. ಚೀನಾದ ಮಾಲ್​ ಎಂದರೆ ಅದು ಡೇಂಜರಸ್ ಎನ್ನುವುದು ಗೊತ್ತಿರುವ ವಿಷಯ. ಇದೀಗ ಚೀನಾದ ಬೆಳ್ಳುಳ್ಳಿ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಲಗ್ಗೆ ಇಟ್ಟಿದೆ. ಈ ಹಿಂದೆ ಇದೆ ರೀತಿ ಮಾರುಕಟ್ಟೆಗೆ ಬಂದಿದ್ದ ಬೆಳ್ಳುಳ್ಳಿ ಕುರಿತು ಸಾಕಷ್ಟು ಜಾಗೃತಿ […]

Continue Reading

ನೇಪಾಳದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಮಕ

ಕಠ್ಮಂಡು: ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ನೇಪಾಳದ ಪ್ರಧಾನಿ ಮತ್ತು ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಸರ್ಕಾರದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ದೇಶಾದ್ಯಂತ ನಡೆದ ವರ್ಚುವಲ್ ಸಭೆಯಲ್ಲಿ 5,000ಕ್ಕೂ ಹೆಚ್ಚು ಯುವಕರು ಅವರನ್ನು ಬೆಂಬಲಿಸಿದ ನಂತರ, ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ನೇಪಾಳದ ಮುಂದಿನ ಪ್ರಧಾನಿ ಹುದ್ದೆಗೆ ಜನರಲ್ ಝಡ್ ಅವರ ಪ್ರಮುಖ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ಆನ್‌ಲೈನ್ ಚರ್ಚೆಯು ಉನ್ನತ ಹುದ್ದೆಗೆ […]

Continue Reading

60 ಕೋಟಿ ವಂಚನೆ ಕೇಸ್: ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ಲುಕ್ ಔಟ್ ನೋಟಿಸ್

ಮುಂಬೈ: ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ನೋಟಿಸ್‌ ಹೊರಡಿಸಿದ್ದಾರೆ. ತಮ್ಮ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ನ (ಈಗ ಕಾರ್ಯನಿರ್ವಹಿಸುತ್ತಿಲ್ಲ) ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಈ ಸೆಲೆಬ್ರಿಟಿ ದಂಪತಿ, ಉದ್ಯಮಿಯೊಬ್ಬರಿಗೆ ಸುಮಾರು 60 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರ್ಥಿಕ ಅಪರಾಧಗಳ ವಿಭಾಗ ಮೂಲಗಳು ಸೂಚಿಸುವಂತೆ ಪೊಲೀಸರು ಈಗ ಶೆಟ್ಟಿ ಮತ್ತು ಕುಂದ್ರಾ ಅವರ […]

Continue Reading

8 ಕೋಟಿ ಮೌಲ್ಯದ ಐಷಾರಾಮಿ ಹಡಗು: ಚೊಚ್ಚಲ ಪ್ರಯಾಣ ಆರಂಭಿಸಿದ ಕೆಲವೇ ನಿಮಿಷದಲ್ಲಿ ಮುಳುಗಡೆ

ಟರ್ಕಿ: ಚೊಚ್ಚಲ ಪ್ರಯಾಣ ಆರಂಭಿಸಿದ ಕೆಲವೇ ಕ್ಷಣದಲ್ಲಿ 1 ಮಿಲಿಯನ್ ಡಾಲರ್ ಅಂದರೆ ಸುಮಾರು 8 ಕೋಟಿಗೂ ಅಧಿಕ ಮೌಲ್ಯದ ಐಷಾರಾಮಿ ವಿಹಾರಿ ಹಡಗೊಂದು ಮುಳುಗಿದ ಆಘಾತಕಾರಿ ಘಟನೆ ಟರ್ಕಿಯಲ್ಲಿ ನಡೆದಿದೆ. ಡೋಲ್ಸ್ ವೆಂಟೊ ಹೆಸರಿನ ಈ ವಿಹಾರಿ ನೌಕೆಯು ಸರಿಸುಮಾರು 85 ಅಡಿ ಉದ್ದವಿತ್ತು. ಮಂಗಳವಾರ ಉತ್ತರ ಟರ್ಕಿಯ ಎರೆಗ್ಲಿ ಜಿಲ್ಲೆಯ ಜೊಂಗುಲ್ಡಕ್ ಕರಾವಳಿಯಲ್ಲಿ ಚೊಚ್ಚಲ ಪ್ರಯಾಣ ಆರಂಭಿಸಿದ 15 ನಿಮಿಷದಲ್ಲೇ ಮುಳುಗಡೆಯಾಗಿದೆ. ಹಡಗಿನಲ್ಲಿದ್ದ ಹಡಗಿನ ಮಾಲೀಕ ಹಡಗು ಮುಳುಗುತ್ತಿದ್ದಂತೆ ನದಿಗೆ ಹಾರಿ ದಡ ಸೇರಲು […]

Continue Reading