ಸುದ್ದಿ ಸಂಗ್ರಹ

ಟೆಂಗಳಿ ಕ್ರಾಸ್ ಸಮೀಪ ಸಿಡಿಲು ಬಡಿದು ಮರಕ್ಕೆ ಬೆಂಕಿ…ಸುದ್ದಿ ಸಂಗ್ರಹ ಚಿತ್ತಾಪುರ
ತಾಲೂಕಿನ ಟೆಂಗಳಿ ಕ್ರಾಸ್ ಸಮೀಪ ರವಿವಾರ ಸಂಜೆ ಭಾರಿ ಪ್ರಮಾಣದ ಮಳೆ ಮತ್ತು ಗಾಳಿಯ ಅಬ್ಬರದ ನಡುವೆ ಒಣಗಿದ ಮರವೊಂದಕ್ಕೆ ಸಿಡಿಲು ಬಡಿದು, ಮರ ಸಂಪೂರ್ಣವಾಗಿ ಹೊತ್ತಿ ಉರಿದ ಅಪರೂಪದ ಘಟನೆ ನಡೆದಿದೆ…..ಕಲಬುರಗಿ–ಸೇಡಂ ರಾಜ್ಯ ಹೆದ್ದಾರಿ 10ರ ಸಮೀಪದ ಟೆಂಗಳಿ ಕ್ರಾಸ್ ಸಮೀಪವಿರುವ ಹೊಲವೊಂದರಲ್ಲಿ ಒಣಗಿದ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡಿದೆ……ಮಳೆಯ ನಡುವೆಯೂ ಮರ ಬೆಂಕಿಗಾಹುತಿಯಾಗಿದ್ದು, ಗಾಳಿಯ ರಭಸಕ್ಕೆ ಮರದಿಂದ ಹಾರುತ್ತಿರುವ ಬೆಂಕಿಯ ಕಿಡಿಗಳು ದೃಶ್ಯ ಮಿಂಚು ಹುಳುವಿನಂತೆ ಹೊಳೆಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ……ಅನೇಕ ತಿಂಗಳಿನಿಂದ ಒಣಗಿದ್ದ ಈ ಹಳೆಯ ಮರ ಸಿಡಿಲಿನ ಅಪಘಾತಕ್ಕೆ ಹೊತ್ತಿ ಉರಿದಿದ್ದು, ಘಟನೆಯಿಂದ ಯಾವುದೆ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *