ಕೋಲಾರ ಮಹಿಳೆಯ ದೇಹದಲ್ಲಿ ವಿಶ್ವದಲ್ಲಿ ಎಲ್ಲೂ ಕಾಣಸಿಗದ ವಿಭಿನ್ನ ರಕ್ತ: ಸಿಆರ್​ಐಬಿ ರಕ್ತ ಗುಂಪಿನ ಬಗ್ಗೆ ನಿಮಗೆ ಗೊತ್ತಿದೆಯಾ

ಬೆಂಗಳೂರು: ವಿಜ್ಞಾನ ವಿಸ್ಮಯವೊಂದು ಕರ್ನಾಟಕದ ಕೋಲಾರದಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಮಹಿಳೆಯೊಬ್ಬರು ವಿಶ್ವದಲ್ಲೇ ಈವರೆಗೆ ಯಾರಲ್ಲೂ ಪತ್ತೆಯಾಗದ ರಕ್ತದ ಗುಂಪು ಹೊಂದಿರುವುದು ಬೆಳಕಿಗೆ ಬಂದಿದೆ. ಹೃದಯ ಶಸ್ತ್ರಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ 38 ವರ್ಷದ ಮಹಿಳೆಯೊಬ್ಬರು ಕೆಲವು ದಿನಗಳ ಹಿಂದೆ ದಾಖಲಾಗಿದ್ದರು. ಅವರ ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಿದ ನಂತರ ವೈದ್ಯರು ಅಚ್ಚರಿಗೆ ಒಳಗಾಗಿದ್ದಾರೆ. ಮಹಿಳೆಯ ರಕ್ತದ ಗುಂಪು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವ O Rh+ ಆಗಿತ್ತು. ಆದರೆ ವಿಶೇಷವೆಂದರೆ ಲಭ್ಯವಿರುವ ಯಾವುದೆ O+ ರಕ್ತ ಅವರ ರಕ್ತಕ್ಕೆ […]

Continue Reading

ದೀರ್ಘಾವಧಿಗೆ ಪ್ರಧಾನಿ: ಇಂದಿರಾ ಗಾಂಧಿ ಹಿಂದಿಕ್ಕಿದ ನರೇಂದ್ರ ಮೋದಿ

ಹೊಸದಿಲ್ಲಿ: ಸತತ ಅವಧಿಗೆ ಪ್ರಧಾನಿಯಾಗಿ ಸುದೀರ್ಘ‌ ಸೇವೆ ಸಲ್ಲಿಸಿದ ಹೆಗ್ಗಳಿಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರಕ್ಕೆ ಇಂದಿರಾ ಗಾಂಧಿ ದಾಖಲೆ ಮುರಿಯಲಿದ್ದಾರೆ. ಶುಕ್ರವಾರಕ್ಕೆ ಪ್ರಧಾನಿಯಾಗಿ 4,078 ದಿನಗಳು ಪೂರೈಸಲಿದ್ದಾರೆ. ಈ ಮೂಲಕ ಇಂದಿರಾ ಅವರ 4,077 ದಿನಗಳ ದಾಖಲೆ ಮುರಿಯಲಿದ್ದಾರೆ. ಇಂದಿರಾ ಗಾಂಧಿ ಅವರು 1966 ಜನವರಿ 24ರಿಂದ 1977 ಮಾರ್ಚ್‌ 24ರ ವರೆಗೆ ಸತತ ಪ್ರಧಾನಿ ಹುದ್ದೆಯಲ್ಲಿದ್ದರು. ಆ ದಾಖಲೆ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ವರ್ಗಾವಣೆಯಾಗಲಿದೆ. ಅತಿ ದೀರ್ಘ‌ […]

Continue Reading

ಟೆಕ್ಕಿ ಜೊತೆಗೆ ಆ.28ಕ್ಕೆ ಅನುಶ್ರೀ ಮದುವೆ

ಕನ್ನಡದ ಖ್ಯಾತ ನಿರೂಪಕಿ/ನಟಿ ಅನುಶ್ರೀ ಮದುವೆಯ ವದಂತಿ ಕಳೆದ ಕೆಲ ತಿಂಗಳಿಂದ ಜೋರಾಗಿತ್ತು. ಇದೀಗ ಮದುವೆಗೆ ದಿನಾಂಕ ಫಿಕ್ಸ್ ಆಗಿದೆ ಎಂಬ ಮಾಹಿತಿ ಬಹುತೇಕ ಖಚಿತವಾಗಿದ್ದು ಆಗಸ್ಟ್ 28ಕ್ಕೆ ಮದುವೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕುಟುಂಬಸ್ಥರು ನೋಡಿದ ಹುಡುಗನ ಜೊತೆಗೆ ಅನುಶ್ರೀ ಮದುವೆಯಾಗುತ್ತಿದ್ದು ಮಂಗಳೂರು ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಟೆಕ್ಕಿ ಜೊತೆಗೆ ಅನುಶ್ರೀ ಕಲ್ಯಾಣ ಎನ್ನಲಾಗುತ್ತಿದೆ. ಮದುವೆ ನಿಶ್ಚಯವಾಗಿರುವ ಹುಡುಗನ ಬಗ್ಗೆಯಾಗಲಿ, ಇನ್ನಿತರ ಮಾಹಿತಿ ಬಗ್ಗೆ ಅನುಶ್ರೀ ಗೌಪ್ಯವಾಗಿರಿಸಿದ್ದಾರೆ. ಆಗಸ್ಟ್ 28 ರಂದು ಬೆಂಗಳೂರಿನಲ್ಲಿ ಅದ್ದೂರಿ […]

Continue Reading

ಇಂಜಿನಿಯರಿಂಗ್ ವೃತ್ತಿ ತೊರೆದು ಕೃಷಿಗೆ ಮರಳಿದ ಈಕೆ ಈಗ ಕೋಟ್ಯಾಧಿಪತಿ

ಛತ್ತೀಸ್‌ಗಢ: ಕೃಷಿಯಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದರೆ ಅಧುನಿಕ ತಂತ್ರಜ್ಞಾನವನ್ನು ಬಳಸಿದರೆ ಯಶಸ್ಸು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಅನೇಕ ಯುವ ಕೃಷಿಕರಿದ್ದಾರೆ ಅವರೊಲ್ಲಬರು ಛತ್ತೀಸ್‌ಗಢದ ಸ್ಮರಿಕಾ ಚಂದ್ರಕರ್ ಆಗಿದ್ದಾರೆ. ಛತ್ತಿಸ್‌ಗಢದ ಚಾರ್ಮುಡಿಯಾ ಎಂಬ ಹಳ್ಳಿಯಲ್ಲಿ ಕೃಷಿ ಕುಟುಂಬದಲ್ಲಿ ಕೃಷಿಯನ್ನು ನೋಡುತ್ತಲೇ ದೊಡ್ಡವಳಾದ ಸ್ಮರಿಕಾ ಓದಿದ್ದು ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಹಾಗೂ ಎಂಬಿಎ. ಇಷ್ಟು ಓದಿದ ಅವರು ಪುಣೆಯಲ್ಲಿ 5 ವರ್ಷಗಳ ಕಾಲ ಹಿರಿಯ ಬ್ಯುಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್ ಆಗಿಯೂ ಕೆಲಸ ಮಾಡಿದ್ದಾರೆ. 5 ವರ್ಷಗಳ ಕಾಲ ಹೊರಗೆ ಕೆಲಸ […]

Continue Reading

ಬಿಗ್ ಬಾಸ್​ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವವರ ಹೆಸರು ರಿವೀಲ್ ಮಾಡಿದ ಪ್ರಥಮ್

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ವೇದಿಕೆ ಸಜ್ಜಾಗುತ್ತಿದೆ. ಕೆಲವೇ ತಿಂಗಳುಗಳಲ್ಲಿ ಶೋ ಆರಂಭವಾಗಲಿದೆ. ಕಲರ್ಸ್ ಕನ್ನಡ ಹಾಗೂ ಬಿಗ್ ಬಾಸ್ ಟೀಮ್ ಈ ಬಾರಿಯೂ ಕಿಚ್ಚ ಸುದೀಪ್ ಅವರೆ ನಿರೂಪಕರಾಗಿ ಬಿಗ್ ಬಾಸ್ ಮುನ್ನಡೆಸಲಿದ್ದಾರೆ ಎಂಬ ಸ್ಪಷ್ಟನೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ತೆರೆಮರೆಯಲ್ಲಿ ಬಿಗ್ ಬಾಸ್ 12 ಕೆಲಸಗಳು ಶುರುವಾಗಿದೆ. ಈಗಾಗಲೆ ಕೆಲ ಕಂಟೆಸ್ಟೆಂಟ್​ಗಳ ಹೆಸರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಆರಂಭವಾಗುವಾಗ ಶೋಗೆ ಸ್ಪರ್ಧಿಗಳನ್ನು ಯಾರು ಆಯ್ಕೆ ಮಾಡುತ್ತಾರೆ […]

Continue Reading

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು, ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಫಿಕ್ಸ್

ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ ಯುವಜನರ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತಿದೆ. ಹೊರಗೆ ನೋಡಲು ಆರೋಗ್ಯವಾಗಿ ಕಾಣಿಸಿಕೊಂಡರು ಕೂಡ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವಿಗೀಡಾಗುತ್ತಿರುವ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಹೃದಯಾಘಾತವಲ್, ಇದೊಂದು ಹಠಾತ್ ಹೃದಯ ಸ್ತಂಭನ (SCA- Sudden Cardiac Arrest ) ಎಂಬ ಸೈಲಂಟ್​ ಕಿಲ್ಲರ್​. ವಿಶ್ವದ ಹೃದಯ ಕಾಯಿಲೆಗಳಲ್ಲಿ ಭಾರತವು ಶೇ.60 ರಷ್ಟು ಪಾಲು ಹೊಂದಿದೆ. ಆದರೆ ನಮ್ಮ ಜನಸಂಖ್ಯೆಯು ವಿಶ್ವದ ಶೇ.20 ಮಾತ್ರ. […]

Continue Reading

25 ವರ್ಷದ ಹಳೆಯ ಬೈಕ್​ನಲ್ಲಿ ತಂದೆಯನ್ನು ಕೂರಿಸಿಕೊಂಡು ದೇಶ ಸುತ್ತಿದ ಮಗನಿಗೆ ಕಂಪನಿಯಿಂದ 14 ಲಕ್ಷದ ಬೈಕ್​ ಗಿಫ್ಟ್

ಉಡುಪಿ: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ದೇಗುಲ ನಿರ್ಮಾಣವಾಗಿದ್ದು, ಕೋಟಿ ಕೋಟಿ ಹಿಂದುಗಳ ಕನಸು ನನಸಾಗಿದೆ. ಬಾಲರಾಮನ ದರ್ಶನ ಪಡೆದು ಭಕ್ತರು ಸಂತಸದಲ್ಲಿದ್ದಾರೆ. 25 ವರ್ಷ ಹಳೆಯದಾದ ಬೈಕ್​ನಲ್ಲಿ ಉಡುಪಿಯಿಂದ ​2,110 ಕಿ.ಮೀ ದೂರವಿರುವ ಅಯೋಧ್ಯೆಯ ಶ್ರೀರಾಮನ ದರ್ಶನ ಮಾಡಿದ ಅಪ್ಪ-ಮಗನಿಗೆ ಹದಿನಾಲ್ಕುವರೆ ಲಕ್ಷದ ಬೈಕ್ ಒಲಿದಿದೆ. ಉಡುಪಿಯ ಕಾಪು ತಾಲೂಕಿನ ಶಿರ್ವ ನಿವಾಸಿ ಪ್ರಜ್ವಲ್ ಶೆಣೈ ಅವರು 25 ವರ್ಷದ ಹಳೆಯ ಬೈಕ್​ನಲ್ಲಿ ಅಪ್ಪನನ್ನು ಕೂರಿಸಿಕೊಂಡು ದೇಶಾದ್ಯಂತ 50 ಸಾವಿರ ಕಿ.ಮೀ ಸುತ್ತಾಡಿದ್ದಾರೆ. ಹೀರೋ ಹೋಂಡಾ ಸ್ಪ್ಲೆಂಡರ್ […]

Continue Reading

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹೊಸ ಕಾರು ಖರೀದಿ: ಬೆಲೆ ಎಷ್ಟು ಗೊತ್ತಾ ?

ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಸ್ಟಾರ್ ಹೀರೋಗಳಲ್ಲಿ ಸಲ್ಮಾನ್ ಖಾನ್ ಪ್ರಮುಖರು. ಸಿನಿಮಾಗಳಲ್ಲಿ ಹೀರೊಯಿಸಂ ತೋರಿಸುವುದು ಮಾತ್ರವಲ್ಲದೆ 60 ವರ್ಷಕ್ಕೆ ಕಾಲಿಟ್ಟರೂ ಫಿಟ್ನೆಸ್, ಸ್ಟೈಲಿಶ್ ಲುಕ್ಸ್‌ನಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ದುಬಾರಿ ಜೀವನ ಶೈಲಿಯಿಂದಲೂ ಸುದ್ದಿಯಲ್ಲಿರುತ್ತಾರೆ. ಹೊಸ ಕಾರು ಖರೀದಿಸಿದ ಸಲ್ಮಾನ್ ಖಾನ್ ಸಲ್ಮಾನ್ ಖಾನ್ ಬಳಸುವ ವಸ್ತುಗಳು, ಕಾರುಗಳು ಎಲ್ಲವೂ ಕೋಟಿಗಳಲ್ಲಿವೆ. ಈಗಾಗಲೇ ಅವರ ಗ್ಯಾರೇಜ್‌ನಲ್ಲಿ ಅನೇಕ ದುಬಾರಿ ಕಾರುಗಳಿವೆ. ಇದೀಗ ಮತ್ತೊಂದು ದುಬಾರಿ ಕಾರು ಸೇರ್ಪಡೆಯಾಗಿದೆ. ಮರ್ಸಿಡಿಸ್-ಮೇಬಾಚ್ GLS 600 SUV. ಈ ಐಷಾರಾಮಿ ಕಾರಿನಲ್ಲಿ ಸಲ್ಮಾನ್ ಖಾನ್ […]

Continue Reading

ಒಂದು ಅಂಕಕ್ಕಾಗಿ ಮತ್ತೊಮ್ಮೆ ಪರೀಕ್ಷೆ ಬರೆದು 625ಕ್ಕೆ 625 ಅಂಕ ಪಡೆದು ಟಾಪರ್ ಆದ ಸಂಜನಾ

ಶಿವಮೊಗ್ಗ: ಒಂದು ಅಂಕದಿಂದ ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್ ಕನಸು ತಪ್ಪಿಸಿಕೊಂಡಿದ್ದ ಹುಡುಗಿ ಅದೆ ಒಂದು ಅಂಕಕ್ಕಾಗಿ ಮತ್ತೊಮ್ಮೆ ಪರೀಕ್ಷೆ ಎದುರಿಸಿ 625ಕ್ಕೆ 625 ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾಳೆ. ಶಿವಮೊಗ್ಗದ ಆದಿಚುಂಚನಗಿರಿ ಪ್ರೌಢ ಶಾಲೆಯ ಸಂಜನಾ ಎಸ್ ಮೊದಲ ಪರೀಕ್ಷೆಯಲ್ಲಿ 624 ಅಂಕ ಪಡೆದಿದ್ದಳು. ಬಯಲಾಜಿಯಲ್ಲಿ ಒಂದು ಅಂಕ ಕಟ್ ಆಗಿತ್ತು. “ಥ ಇನ್ಫರ‍್ಮೇಶನ್ ಸೋರ್ಸ್ ಫಾರ್ ಮೇಕಿಂಗ್ ಪ್ರೋಟಿನ್ ಇನ್ ದ ಸೆಲ್ಸ್ ಇಸ್” ಎಂಬ ಬಹು ಆಯ್ಕೆಯ ಪ್ರಶ್ನೆಗೆ ಕೇಳಲಾಗಿತ್ತು. ಅದಕ್ಕೆ ಜೀನ್, ಕ್ರೋಮೋಜೋಮ್, […]

Continue Reading

200 ಟನ್ ಚಿನ್ನ, 2.5 ಲಕ್ಷ ಕೋಟಿ ಮೌಲ್ಯದ ಖಜಾನೆ: 300 ವರ್ಷಗಳ ಹಿಂದೆ ಮುಳುಗಿದ ಹಡಗು ಸಿಕ್ಕಿತು

ಮಹಾಸಾಗರಗಳಲ್ಲಿ ಮುಳುಗಿರುವ ಬೃಹತ್ ಹಡಗುಗಳ ಬಗ್ಗೆ ತಿಳಿದುಕೊಳ್ಳಲು ಜನರು ಕುತೂಹಲ ಹೊಂದಿರುತ್ತಾರೆ. ದೈತ್ಯ ಹಡಗು ಟೈಟಾನಿಕ್ ಮುಳುಗಿದ್ದನ್ನು ಇಡಿ ಜಗತ್ತು ಶಾಕ್ ಆಗಿತ್ತು. ಸಮುದ್ರ ತಳದಲ್ಲಿರುವ ಟೈಟಾನಿಕ್ ಹಡಗು ನೋಡಲು ಹೋಗಿ ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ ಎಂಬ ಹಡಗು 317 ವರ್ಷಗಳ ಹಿಂದೆ‌ (1708ರಲ್ಲಿ) ಮುಳುಗಿತ್ತು. ಈ ಹಡಗು ಅಪಾರ ಪ್ರಮಾಣದ ಚಿನ್ನ, ವಜ್ರ ಸೇರಿದಂತೆ ದೊಡ್ಡ ಖಜಾನೆಯನ್ನು ಹೊತ್ತು ಸಾಗುತ್ತಿತ್ತು. ಹೀಗಾಗಿ ಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ ಹಡಗು ಮುಳುಗಡೆ […]

Continue Reading