ನವದೆಹಲಿ: ಚುನಾವಣಾ ಚಾಣಕ್ಯ ಅಮಿತ್ ಶಾ ಭವಿಷ್ಯ ಮತ್ತೆ ನಿಜವಾಗಿದ್ದು ಎನ್‌ಡಿಎ ಮೈತ್ರಿಕೂಟ 180ಕ್ಕೂ ಹೆಚ್ಚು ಸ್ಥಾನಗಳು ಗೆಲ್ಲುವತ್ತ ಮುಖ ಮಾಡಿದೆ.
ನ.8 ರಂದು ಪೂರ್ಣಿಯಾದಲ್ಲಿ ಮಾತನಾಡಿದ ಅಮಿತ್ ಶಾ, ಒಂದು ಕಡೆ ಚುದುರಿದ ಘಟ್‌ಬಂಧನ್ ಇದ್ದರೆ ಮತ್ತೊಂದು ಕಡೆ ಐದು ಪಾಂಡವರಂತಿರುವ ಎನ್‌ಡಿಎ ಇದೆ. ಈಗಾಗಲೇ ಬಿಹಾರ ಅರ್ಧದಷ್ಟು ಜನ ಮತ ಚಲಾಯಿಸಿದ್ದು ಎನ್‌ಡಿಎ 160ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿದ್ದರು.
ಇದಕ್ಕೂ ಮೊದಲು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ 160 ಸ್ಥಾನಗಳನ್ನು ನಾವು ಗೆಲ್ಲಬಹುದು. ಅತ್ಯುತ್ತಮ ಪ್ರದರ್ಶನ ನೀಡಿದರೆ ಎನ್‌ಡಿಎ ಸ್ಥಾನಗಳು 180ಕ್ಕೂ ಹೋಗಬಹುದು ಎಂದು ಭವಿಷ್ಯ ನುಡಿದಿದ್ದರು.