ಜಗತ್ತಿನ ಅಪರೂಪದ ಪ್ರಕರಣಕ್ಕೆ ಸುಖಾಂತ್ಯ ಹಾಡಿದ ಕಿಮ್ಸ್ ವೈದ್ಯರು: ಮಗು ಮನೆಗೆ

ಹುಬ್ಬಳ್ಳಿ: ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆ ಪ್ರಕರಣ ಸಂಬಂಧ ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. ನವಜಾತ ಗಂಡು ಶಿಶುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆಯಾದ ಹಿನ್ನಲೆ ಡಾ. ರಾಜಶಂಕರ್ ನೇತೃತ್ವದ ವೈದ್ಯರ ತಂಡ ಅಕ್ಟೋಬರ್ 8ರಂದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿತ್ತು. ಬಳಿಕ ಮಗುವನ್ನು ತುರ್ತು ನಿಘಾ ಘಟಕದಲ್ಲಿಡಲಾಗಿತ್ತು. ಈಗ ಮಗು ಸಂಪೂರ್ಣವಾಗಿ ಗುಣಮುಖವಾಗಿರುವ ಹಿನ್ನೆಲೆಯಲ್ಲಿ ತಾಯಿ, ಮಗುವನ್ನು ಮನೆಗೆ ಕಳುಹಿಸಿಕೊಡಲಾಗಿದೆ. ಸೆಪ್ಟೆಂಬರ್​ 23ರಂದು ಹೆರಿಗೆಗೆಂದು ದಾಖಲಾಗಿದ್ದ ಧಾರವಾಡ ಜಿಲ್ಲೆಯ ಕುಂದಗೋಳ […]

Continue Reading

ರೈತರು ಉತ್ತಮ ಸಾಗುವಳಿ ಕ್ರಮಗಳ ಮೂಲಕ ಬಿತ್ತನೆ ಮಾಡಿ

ಕಲಬುರಗಿ: ಹಿಂಗಾರು ಬಿತ್ತನೆ ಕಾಲ ಪ್ರಾರಂಭವಾಗಿದ್ದು, ಪ್ರಮುಖವಾಗಿ ಜೋಳ, ಕಡಲೆ, ಕುಸುಬೆ, ಗೋದಿ ಬಿತ್ತನೆ ಮಾಡಲಾಗುತ್ತದೆ. ರೈತರು ಬೀಜದ ಪ್ರಮಾಣ, ರಸಗೊಬ್ಬರ ಬಳಕೆ, ಬಿತ್ತನೆಯ ವಿಧಾನ ಅನುಸರಿಸುವ ಮೂಲಕ ಉತ್ತಮ ಸಾಗುವಳಿ ಕ್ರಮಗಳ ಮೂಲಕ ಬಿತ್ತನೆ ಮಾಡುವುದು ಅಗತ್ಯವಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ ರೈತರಿಗೆ ಸಲಹೆ ನಿಡಿದರು. ಆಳಂದ ರಸ್ತೆಯ ಟೋಲಗೇಟ್ ಸಮೀಪದ ಇಟಗಿಯವರ ತೋಟದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ರೈತರಿಗೆ ಹಿಂಗಾರು ಬಿತ್ತನೆಯ ಸಲಹೆಗಳು’ ಕಾರ್ಯಕ್ರಮದಲ್ಲಿ ಮಾತನಾಡಿದ […]

Continue Reading

ಹೊಸ ದಾಖಲೆ ಬರೆದ ಹಾಸನಾಂಬೆ: ಒಂದೆ ವಾರದಲ್ಲಿ ದೇಗುಲಕ್ಕೆ ಬಂತು ಕೋಟ್ಯಂತರ ರೂ. ಆದಾಯ

ಹಾಸನ: ಹಾಸನಾಂಬ ದರ್ಶನೋತ್ಸವ ಆರಂಭಗೊಂಡು ಕೇವಲ ಒಂದೆ ವಾರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಇಲ್ಲಿಯವರೆಗೂ 15 ಲಕ್ಷ 30 ಸಾವಿರ ಭಕ್ತರು ಹಾಸನಾಂಬ ದೇವಿ ದರ್ಶನ ಪಡೆದುಕೊಂಡಿದ್ದಾರೆ. ಇನ್ನು ಕೇವಲ 8 ದಿನದಲ್ಲಿ ದೇವಾಲಯಕ್ಕೆ 10.5 ಕೋಟಿ ರೂ. ಆದಾಯ ಹರಿದು ಬಂದಿದ್ದು ದಾಖಲೆಯಾಗಿದೆ. ಈ ಬಾರಿ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದುಪಡಿಸಿರುವುದರಿಂದ ಭಕ್ತರು ಸುಗಮವಾಗಿ ದರ್ಶನ ಪಡೆಯುತ್ತಿದ್ದಾರೆ. ಇದರಿಂದಾಗಿ ಭಕ್ತರಲ್ಲಿ ಸಂತಸ ಮೂಡಿದೆ. ನಾಡಿನ ನಾನಾ ಭಾಗಗಳಿಂದ ಭಕ್ತರ ದಂಡೆ ಹಾಸನಾಂಬೆಯ ದರ್ಶನಕ್ಕೆ ಹರಿದು ಬರುತ್ತಿದೆ. […]

Continue Reading

ನಕಲಿ ಅಂಗವಿಕಲರ ಕಾರ್ಡ್‌: ಶಿರಾ ಆಸ್ಪತ್ರೆ ನಂಟು ?

ಶಿರಾ: ನಕಲಿ ವೈದ್ಯಕೀಯ ದಾಖಲೆ ಸಲ್ಲಿಸಿ ಅಂಗವಿಕಲರ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲು ಯತ್ನಿಸಿದ್ದ ಜಯದೇವ್ ಎಂಬ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಾಗಿದೆ. ಅಂಗವಿಕಲರ (ಯುಡಿ ಐಡಿ) ಕಾರ್ಡ್ ವಿತರಿಸಿದ ಇಲ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಡೇಟಾ ಆಪರೇಟರ್ ನಾಗರಾಜು ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಲಾದ ಕೆಲವು ವೈದ್ಯರ ವಿಚಾರಣೆ ನಡೆಸಿದ್ದಾರೆ. ಹಿರಿಯೂರು ತಾಲೂಕಿನ ಜಯದೇವ್, ಶಿರಾ ತಾಲೂಕಿನ‌ ಮದ್ದೇನಹಳ್ಳಿ ಗ್ರಾಮದ ವಿಳಾಸ ನೀಡಿ ಅಂಗವಿಕಲರ ಕಾರ್ಡ್‌ ಪಡೆದಿರುವುದು ತನಿಖೆಯ […]

Continue Reading

PSI ಆಗಿ 10 ವರ್ಷ ಪೂರೈಸಿದ್ದಕ್ಕೆ ರೌಡಿಶೀಟರ್ ಜೊತೆ ಕೇಕ್ ಕಟ್: ಫೋಟೋ ವೈರಲ್ ಆಗ್ತಿದ್ದಂತೆ ಸಸ್ಪೆಂಡ್

ಯಾದಗಿರಿ: ಪಿಎಸ್‌ಐ ಆಗಿ 10 ವರ್ಷ ಪೂರೈಸಿದ್ದಕ್ಕೆ ರೌಡಿಶೀಟರ್ ಜೊತೆಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದ ಅಧಿಕಾರಿಯನ್ನು ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಠಾಣೆಯ ಪಿಎಸ್‌ಐ ಆಗಿರುವ ರಾಜಶೇಖರ್ ರಾಠೋಡ್ ಅವರನ್ನು ಅಮಾನತು ಮಾಡಿದ್ದಾರೆ. ಪಿಎಸ್‌ಐ ಆಗಿ ಹತ್ತು ವರ್ಷ ಪೊರೈಸಿದ್ದಕ್ಕೆ ಅದೆ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ನಾಗರಾಜ್ ಜೊತೆ ಕೇಕ್ ಕಟ್ ಮಾಡಿ ಸೆಲೆಬ್ರೇಷನ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿತ್ತು. […]

Continue Reading

ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ: ಒಂದೆ ದಿನಕ್ಕೆ 1 ಕೋಟಿ ಆದಾಯ

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ದರ್ಶನಕ್ಕೆ 2ನೇ ದಿನವಾದ ಇಂದು ಸಾವಿರಾರು ಭಕ್ತರು ಮುಂಜಾನೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪಾವನರಾದರು. ಕೆಲವರು ಮಧ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ಕಾದು ನಿಂತಿದ್ದರು. ವೀಕೆಂಡ್ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಸಹಜವಾಗಿಯೇ ಹೆಚ್ಚುಗಿತ್ತು. 1 ಸಾವಿರ ಟಿಕಟ್‌ನ ಸಾಲು ಖಾಲಿ ಇದ್ದರೆ, 300 ರೂ. ವಿಶೇಷ ದರ್ಶನದ ಸರತಿ ಸಾಲು ಸಂಪೂರ್ಣ ಭರ್ತಿಯಾಗಿದ್ದವು. ಸಚಿವ ಶಿವರಾಜ್ ತಂಗಡಗಿ, ಶಾಸಕ […]

Continue Reading

ಮಹಿಳಾ ನೌಕರರಿಗೆ ವೇತನ ಸಹಿತ ಋತು ಚಕ್ರ ರಜೆ ಮಂಜುರಾತಿಗೆ ಸಂಪುಟ ಸಭೆ ಅನುಮೋದನೆ: ನೌಕರರ ಸಂಘ ಹರ್ಷ

ಕಲಬುರಗಿ: ಮಹಿಳಾ ನೌಕರರಿಗೆ ವೇತನ ಸಹಿತ ಋತು ಚಕ್ರ ರಜೆ ಮಂಜೂರಾತಿಗೆ ಸಂಪುಟ ಸಭೆ ಅನುಮೋದನೆ ನೀಡಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೊಂಡಗಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಡಿಶಾ ಸರ್ಕಾರ 2024ರಲ್ಲಿ ಮಹಿಳಾ ನೌಕರರಿಗೆ ವೇತನ ಸಹಿತ ಋತು ಚಕ್ರ ರಜಾ ಸೌಲಭ್ಯ ಜಾರಿಗೆ ತಂದಿದ್ದು, ಇದೆ ಮಾದರಿಯಲ್ಲಿ ಕರ್ನಾಟಕದಲ್ಲೂ ಜಾರಿಗೆ ತರಲು ಕಳೆದ ಜನವರಿ 10 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ […]

Continue Reading

ಹೆಣ್ಣು ಮಗುವಿಗೆ ಜನ್ಮ ನೀಡಿದ 15ರ ಬಾಲಕಿ: ರೇಪ್‌ ಆರೋಪಿ ಅರೆಸ್ಟ್‌

ತುಮಕೂರು: 15 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆಕೆ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಲು ಕಾರಣನಾದ ಆರೋಪದ ಮೇಲೆ ವಿನಯ್ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಮತ್ತು ಯುವಕ ಅಕ್ಕಪಕ್ಕದ ಮನೆಯ ನಿವಾಸಿಗಳು. ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ವಿನಯ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಬಾಲಕಿ ತಾಯಿ ನೀಡಿದ ದೂರಿನ ಮೇರೆಗೆ ಕುಣಿಗಲ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಗಳ ಆರೋಗ್ಯ ಸರಿ ಇಲ್ಲದಿದ್ದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಆಗ 8 […]

Continue Reading

ಭೂತಾಯಿಯ ಸೀಮಂತದ ಪ್ರತೀಕ ಸೀಗೆ ಹುಣ್ಣಿಮೆ

ಕಲಬುರಗಿ: ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಕೃಷಿ ಹಾಗೂ ರೈತರೇ ದೇಶದ ಬೆನ್ನೆಲುಬು. ನಮ್ಮ ದೇಶ ತಾಯಿಯ ಸ್ವರೂಪದಲ್ಲಿ ಕಾಣಲಾಗುತ್ತದೆ. ಮಹಿಳೆ ಗರ್ಭವತಿಯಾದಾಗ ಸೀಮಂತ ಮಾಡುವಂತೆ, ಭೂಮಿಯನ್ನು ತಾಯಿ, ದೇವರೆಂದು ನಂಬಿ ಕಾಯಕ ಮಾಡುವ ಶ್ರಮಜೀವಿಯಾದ ರೈತ, ತಾನು ಬೆಳೆದ ಫಸಲಿಗೆ ಪೂಜೆ, ಗೌರವ ಸಲ್ಲಿಸಿ ಸೀಮಂತದ ಕಾರ್ಯಕ್ರಮದಂತೆ ಪೂಜಿಸಿ, ಆರಾಧಿಸುವ ಪ್ರತೀಕ ಸೀಗೆ ಹುಣ್ಣಿಮೆಯಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ಸುಂಟನೂರ ಗ್ರಾಮದ ರಾಮಚಂದ್ರ ಬಬಲಾದಿಯವರ ತೊಗರಿ ಹೊಲದಲ್ಲಿ ಬಸವೇಶ್ವರ ಸಮಾಜ ಸೇವಾ […]

Continue Reading

ಶಾಲೆಗಳ ದಸರಾ ರಜೆ ವಿಸ್ತರಣೆಗೆ ಸರಕಾರಿ ನೌಕರರ ಸಂಘ ಸ್ವಾಗತ

ಕಲಬುರಗಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ದಸರಾ ರಜೆ ಅವಧಿ ಅ.18ರ ವರೆಗೆ ವಿಸ್ತರಿಸಿದ ಸರಕಾರದ ಆದೇಶಕ್ಕೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಸ್ವಾಗತಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕಾ ನೀಡಿರುವ ಅವರು, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ-2025ರ ಗಣತಿ ಕಾರ್ಯದಲ್ಲಿ ರಾಜ್ಯಾದಾದ್ಯಂತ ಸರ್ಕಾರಿ ಶಾಲೆಗಳ ಶಿಕ್ಷಕರುಗಳಿಗೆ ಸೆ.22 […]

Continue Reading