ನ್ಯೂಜಿಲೆಂಡ್ ವರ, ಕರ್ನಾಟಕದ ವಧು: ಸಾಗರದಾಚೆಗಿನ ವಿವಾಹಕ್ಕೆ ಸಾಕ್ಷಿಯಾದ ಬೆಣ್ಣೆನಗರಿ

ಜಿಲ್ಲೆ

ಸುದ್ದಿ ಸಂಗ್ರಹ ದಾವಣಗೆರೆ
ನ್ಯೂಜಿಲೆಂಡ್ ವರ, ಕರ್ನಾಟಕದ ವಧು. ಇವರಿಬ್ಬರ ಪ್ರೇಮ ವಿವಾಹಕ್ಕೆ ಸಾಕ್ಷಿಯಾಗಿದ್ದು ಬೆಣ್ಣೆನಗರಿ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಪೂಜಾ ನಾಗರಾಜ್ ಹಾಗೂ ನ್ಯೂಜಿಲೆಂಡ್‌ನ ಕ್ಯಾಂಬೆಲ್ ವಿಲ್ ವರ್ಥ್ ಹಿಂದೂ ಸಂಪ್ರದಾಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ವೃತ್ತಿಯಲ್ಲಿ ಪೂಜಾ ನಾಗರಾಜ್ ದಂತವೈದ್ಯೆ. ಕ್ಯಾಂಬೆಲ್ ವಿಲ್ ವರ್ಥ್ ಸಾಫ್ಟ್‌ವೇರ್‌ ಇಂಜಿನಿಯರ್. ಇಬ್ಬರು ಪರಸ್ಪರ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪೂಜಾ ತಂದೆ ನಾಗರಾಜ್ ಸಿವಿಲ್ ಇಂಜಿನಿಯರ್ ಆಗಿದ್ದು, 2005 ರಲ್ಲಿ ನ್ಯೂಜಿಲೆಂಡ್‌ಗೆ ಹೋಗಿ ನೆಲೆಸಿದ್ದರು. ಆದರೆ ಪೂಜಾ ಮಾತ್ರ ಕರ್ನಾಟಕದಲ್ಲೆ ಇದ್ದು, ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ಬಳಿಕ ನ್ಯೂಜಿಲೆಂಡ್‌ಗೆ ಹೋದಾಗ ಕ್ಯಾಂಬೆಲ್ ವಿಲ್ ವರ್ಥ್ ಪರಿಚಯವಾಗಿದೆ. ನಂತರ ಸ್ನೇಹ, ಪ್ರೀತಿಯಾಗಿ ದಾವಣಗೆರೆಯಲ್ಲಿ ಸಪ್ತಪದಿ ತುಳಿದಿದ್ದಾರೆ.

ಇಬ್ಬರ ವಿವಾಹವನ್ನು ಕರ್ನಾಟಕದಲ್ಲೆ ಮಾಡಬೇಕು ಎಂದು ನಿಶ್ಚಯಿಸಿ ಎರಡು ಕುಟುಂಬದವರು ದಾವಣಗೆರೆಯ ಖಾಸಗಿ ರೆಸಾರ್ಟ್‌ನಲ್ಲಿ ಹಿಂದೂ ಸಂಪ್ರದಾಯಂತೆ ಕಲ್ಯಾಣ ನೆರವೇರಿತು.

Leave a Reply

Your email address will not be published. Required fields are marked *