ಸುದ್ದಿ ಸಂಗ್ರಹ ಬೆಂಗಳೂರು
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ಕೊನೆಗೂ ನಂದಿನಿ ಮೊಸರಿನ ಮಾರಾಟ ದರ 1 ಲೀಟರ್ಗೆ 2 ರೂ. ಗಳಷ್ಟು ಕಡಿತಗೊಳಿಸಿದೆ. ಈ ಪರಿಷ್ಕೃತ ದರವು ಇದೆ ನವೆಂಬರ್ 29 ರವಿವಾರದಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ.
ರಾಜ್ಯದ ಹಾಲು ಉತ್ಪಾದಕ ರೈತರ ಮನವಿಯ ಮೇರೆಗೆ ಕಳೆದ ನವೆಂಬರ್ 1 ರಿಂದ ಅನ್ವಯವಾಗುವಂತೆ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ಪರಿಷ್ಕರಿಸಿ ಏರಿಕೆ ಮಾಡಲಾಗಿತ್ತು. ಆದರೆ ಗ್ರಾಹಕರ ಹಿತದೃಷ್ಟಿಯಿಂದ ಮೊಸರಿನ ದರವನ್ನು ಪ್ರತಿ ಲೀಟರ್ಗೆ 2 ರೂ ಇಳಿಕೆ ಮಾಡುವಂತೆ ಸಿಎಂ ಡಿ.ಕೆ ಶಿವಕುಮಾರ್ ಕೆಎಂಎಫ್ಗೆ ಸೂಚನೆ ನೀಡಿದ್ದರು. ಸಿಎಂ ನಿರ್ದೇಶನದಂತೆ ಕೆಎಂಎಫ್ ಇದೀಗ ದರ ಕಡಿತಗೊಳಿಸಿದೆ.
ದರ ಎಷ್ಟು ?
ಅರ್ಧ ಲೀಟರ್ ಪ್ಯಾಕ್: ಪ್ರಸ್ತುತ 34 ರೂ. ಇದ್ದ ದರವನ್ನು 33 ರೂ.ಗೆ ಇಳಿಸಲಾಗಿದೆ.
1 ಲೀಟರ್ ಪ್ಯಾಕ್: ಪ್ರಸ್ತುತ 68 ರೂ. ಇದ್ದ ದರವನ್ನು 66 ರೂ.ಗೆ ಕಡಿತಗೊಳಿಸಲಾಗಿದೆ.
ನಂದಿನಿ ಮೊಸರಿನ ದರವನ್ನು ನವೆಂಬರ್ 1ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ಗೆ 14 ರೂ. ಮತ್ತು ಅರ್ಧ ಲೀಟರ್ಗೆ 6 ರೂ. ಏರಿಕೆ ಮಾಡಲಾಗಿತ್ತು. ಇದರಿಂದಾಗಿ 1 ಲೀಟರ್ ಮೊಸರು 54 ರಿಂದ 68 ರೂ.ಗೆ ಏರಿಕೆಯಾಗಿದ್ದರೆ ಅರ್ಧ ಲೀಟರ್ ಮೊಸರಿನ ಬೆಲೆ 28 ರಿಂದ 34 ರೂ.ಗೆ ಹೆಚ್ಚಳ ಮಾಡಲಾಗಿತ್ತು.