ಕಲಬುರಗಿ ಜಿಲ್ಲಾ ಪಂಚಾಯಿತಿ: ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಲಬುರಗಿ
ಜಿಲ್ಲಾ ಪಂಚಾಯಿತಿಯ 48 ಕ್ಷೇತ್ರಗಳ ಮೀಸಲಾತಿಯ ಅಂತಿಮ ಪಟ್ಟಿಯ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಅಕ್ಟೋಬರ್‌ 9ರಂದು ಕರಡು ಪಟ್ಟಿ ಪ್ರಕಟಿಸಿದ್ದ ಸರ್ಕಾರವು, ಆಕ್ಷೇಪಣೆಗಳ ಸಲ್ಲಿಕೆಗೆ ಅಕ್ಟೋಬರ್‌ 19ರ ಸಂಜೆ 5 ಗಂಟೆ ವರೆಗೆ ಕಾಲಾವಕಾಶ ನೀಡಲಾಗಿತ್ತು.

ಕರಡು ಪಟ್ಟಿಯಲ್ಲಿ ಚಿಮ್ಮನಚೋಡ ಕ್ಷೇತ್ರವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಇದೀಗ ಅಂತಿಮ ಮೀಸಲಾತಿ ಪಟ್ಟಿಯಲ್ಲಿ ಚಿಮ್ಮನಚೋಡ ಕ್ಷೇತ್ರದ ಮೀಸಲಾತಿ ಬದಲಿಸಿದ್ದು, ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ.

48 ಕ್ಷೇತ್ರಗಳ ಮೀಸಲಾತಿಯ ಅಂತಿಮ ಅಧಿಸೂಚನೆಯ ವಿವರ
ಅವರಾದ(ಬಿ): ಎಸ್‌ಸಿ, ಪಟ್ಟಣ: ಸಾಮಾನ್ಯ, ನಂದಿಕೂರ: ಸಾಮಾನ್ಯ ಮಹಿಳೆ, ಫರಹತಾಬಾದ್‌: ಸಾಮಾನ್ಯ, ಖಣದಾಳ: ಸಾಮಾನ್ಯ ಮಹಿಳೆ, ಕುಸನೂರ; ಎಸ್‌ಸಿ ಮಹಿಳೆ, ನೆಲೋಗಿ: ಹಿಂದುಳಿದ ವರ್ಗ ‘ಅ’ ಮಹಿಳೆ, ಮಂದೇವಾಲ: ಸಾಮಾನ್ಯ, ಕೋಳಕೂರ: ಸಾಮಾನ್ಯ, ಆಂದೋಲಾ: ಎಸ್‌ಸಿ, ಖಜೂರಿ: ಹಿಂದುಳಿದ ವರ್ಗ ‘ಅ’ ಮಹಿಳೆ, ತಡಕಲ್: ಸಾಮಾನ್ಯ ಮಹಿಳೆ.

ಸರಸಂಬಾ: ಸಾಮಾನ್ಯ, ನರೋಣಾ: ಎಸ್‌ಸಿ, ಜಿಡಗಾ: ಹಿಂದುಳಿದ ವರ್ಗ ‘ಬ’, ಮಾದನಹಿಪ್ಪರಗಾ: ಸಾಮಾನ್ಯ ಮಹಿಳೆ, ನಿಂಬರ್ಗಾ: ಎಸ್‌ಸಿ ಮಹಿಳೆ, ಕರಜಗಿ: ಹಿಂದುಳಿದ ವರ್ಗ ‘ಅ’ ಮಹಿಳೆ, ಬಡದಾಳ: ಸಾಮಾನ್ಯ ಮಹಿಳೆ, ದೇವಲ ಗಾಣಗಾಪುರ: ಹಿಂದುಳಿದ ವರ್ಗ ‘ಅ’, ಅತನೂರ: ಎಸ್‌ಸಿ ಮಹಿಳೆ, ಗೊಬ್ಬೂರ(ಬಿ): ಸಾಮಾನ್ಯ.

ಸೊಂತ: ಎಸ್‌ಸಿ, ಮಹಾಗಾಂವ: ಸಾಮಾನ್ಯ ಮಹಿಳೆ, ಅರಣಕಲ್‌: ಎಸ್‌ಸಿ ಮಹಿಳೆ, ವಿ.ಕೆ ಸಲಗರ: ಸಾಮಾನ್ಯ, ಹೆಬ್ಬಾಳ: ಸಾಮಾನ್ಯ, ಟೆಂಗಳಿ: ಎಸ್‌ಸಿ, ಕೋಡ್ಲಿ: ಹಿಂದುಳಿದ ವರ್ಗ ‘ಬ’ ಮಹಿಳೆ, ಇಜೇರಿ: ಸಾಮಾನ್ಯ, ಅರಳಗುಂಡಗಿ: ಸಾಮಾನ್ಯ ಮಹಿಳೆ, ಮಳ್ಳಿ: ಎಸ್‌ಸಿ, ಮಳಖೇಡ: ಸಾಮಾನ್ಯ.

ಆಡಕಿ: ಸಾಮಾನ್ಯ ಮಹಿಳೆ, ಕೋಡ್ಲಾ: ಸಾಮಾನ್ಯ, ಮುಧೋಳ: ಎಸ್‌ಸಿ ಮಹಿಳೆ, ಕೋಲಕುಂದಾ: ಹಿಂದುಳಿದ ವರ್ಗ ‘ಅ’, ಚಿಮ್ಮನಚೋಡ: ಸಾಮಾನ್ಯ ಮಹಿಳೆ, ಐನೋಳ್ಳಿ: ಎಸ್‌ಟಿ ಮಹಿಳೆ, ಕುಂಚಾವರಂ: ಎಸ್‌ಸಿ, ಸುಲೇಪೇಟ: ಸಾಮಾನ್ಯ ಮಹಿಳೆ, ನಿಡಗುಂದಾ: ಎಸ್‌ಸಿ ಮಹಿಳೆ, ದಂಡೋತಿ: ಹಿಂದುಳಿದ ವರ್ಗ ‘ಅ’ ಮಹಿಳೆ, ಭೀಮನಳ್ಳಿ: ಎಸ್‌ಸಿ ಮಹಿಳೆ, ನಾಲವಾರ: ಸಾಮಾನ್ಯ ಮಹಿಳೆ, ಇಂಗಳಗಿ: ಸಾಮಾನ್ಯ, ರಾವೂರ: ಸಾಮಾನ್ಯ ಮಹಿಳೆ, ಭಂಕೂರ: ಹಿಂದುಳಿದ ವರ್ಗ ‘ಅ’.

Leave a Reply

Your email address will not be published. Required fields are marked *